ಪುತ್ತೂರು: ಖಾಝಿ ನೇಮಕ ವಿಚಾರದಲ್ಲಿ ತಕರಾರು ಉಂಟಾಗಿ ಮಸೀದಿ ಜಮಾತ್ ಸಭೆಯಲ್ಲೇ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮಸೀದಿ ಒಳಗೆ ಮತ್ತು ಹೊರಗಡೆ ತಳ್ಳಾಟ, ಹಲ್ಲೆ ನಡೆಸಿದ ದೃಶ್ಯಗಳ ವಿಡಿಯೋ ಸೆರೆಯಾಗಿದ್ದು ವೈರಲ್ ಆಗಿದೆ. ಪುತ್ತೂರಿನ ಬದ್ರಿಯಾ ಜುಮ್ಮಾ ಮಸೀದಿಯ ಮದ್ರಸದಲ್ಲಿ ಘಟನೆ ನಡೆದಿದೆ. ಖಾಝಿ ನೇಮಕ ವಿಚಾರದಲ್ಲಿ ನಡೆದ ಜಮಾತ್ ಕಮಿಟಿ ಸಭೆಯಲ್ಲಿ ಶೈಖುನಾ ಸಯ್ಯದುಲ್ ಉಲಮಾ ಜಿಫ್ರಿ ತಂಙಳ ಅವರನ್ನು ಪುತ್ತೂರು ತಾಲೂಕು ಸಂಯುಕ್ತ ಖಾಝಿಯಾಗಿ ನೇಮಿಸುವ ಕುರಿತಾಗಿ ಕೆಲವರು ಆಕ್ಷೇಪ ಎತ್ತಿದ್ದಾರೆ.
https://youtube.com/shorts/Iv6uW52kot0?feature=share
ಸಾಲ್ಮರ ಶರೀಫ್ ಎಂಬವರು ಸಭೆಯಲ್ಲಿ ಆಕ್ಷೇಪ ಎತ್ತಿದ್ದನ್ನೇ ನೆಪವಾಗಿಟ್ಟು ಇತರ ಜಮಾತ್ ಸದಸ್ಯರು ಸೇರಿ ವಾಗ್ವಾದ ನಡೆಸಿದ್ದಾರೆ. ಬಳಿಕ ಶರೀಫ್ ಅವರನ್ನು ತಳ್ಳಿಕೊಂಡು ಹೊರಗೆ ಒಯ್ದು ಹಲ್ಲೆ ನಡೆಸಿದ್ದಾರೆ. ಜಮಾಅತ್ ಸದಸ್ಯರು ಸೇರಿ ಹಲ್ಲೆ ನಡೆಸಿದ ದೃಶ್ಯ ಸೆರೆಯಾಗಿದ್ದು ವೈರಲ್ ಆಗಿದೆ. ಘಟನೆ ಬಗ್ಗೆ ಆಕ್ರೋಶ ಕೇಳಿಬಂದಿದ್ದು ಜಮಾತ್ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.