ಮುದಿವಯಸ್ಸಿನಲ್ಲೂ ಕುಗ್ಗದ ಕಾಮದಾಹ| ಸೊಸೆಯನ್ನೂ ಬಿಡದ ತಂದೆಯನ್ನು ಕೊಂದ ಮಗ

ಸಮಗ್ರ ನ್ಯೂಸ್: 75 ವಯಸ್ಸಾಗಿದ್ರೂ ಕಾಮದಾಟಕ್ಕಾಗಿ ಮಹಿಳೆಯರ ಜೊತೆ ಸಂಬಂಧ ಇಟ್ಟುಕೊಂಡು, ಸೊಸೆಯನ್ನೂ ಬಿಡದ ತಂದೆಯನ್ನು ಕಂಡು ಮಾರ್ಯಾದೆಗೆ ಹೆದರಿ ಮಗನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ.

Ad Widget ... ..

ಯಾದಗಿರಿ‌ ಗೋನಾಳ ಗ್ರಾಮದಲ್ಲಿ 6 ದಿನಗಳ ಹಿಂದೆ ಅಂದ್ರೆ ಮಾರ್ಚ್ 12 ರ ರಾತ್ರಿ 74 ವರ್ಷದ ಪಂಪಣ್ಣ ಸಜ್ಜನ ಎಂಬಾತನ ಕೊಲೆಯಾಗಿತ್ತು. ಕೊಲೆ ನಡೆದ ಬಳಿಕ ಈ ಹಂಪಣ್ಣ ಸಜ್ಜನ ಪುತ್ರ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಳಿಕ ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರಂಭದಲ್ಲಿ ಕೊಲೆ ಯಾರು ಮಾಡಿದ್ದಾರೆ ಎಂದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ಕೊಲೆ ನಡೆದ ನಾಲ್ಕು ದಿನಗಳ ಬಳಿಕ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಂತಕರಾದ ರಮೇಶ್, ಜಿ.ವಿರೇಶ್, ಎಂ.ವಿರೇಶ್ ಹಾಗೂ ಕೃಷ್ಟನನ್ನು ವಡಗೇರಾ ಪೊಲೀಸರು ಬಂಧಿಸಿದ್ದಾರೆ.

Ad Widget

ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ ಬಳಿಕ 75 ವರ್ಷ ವೃದ್ದ ಹಂಪಣ್ಣನ ಕೊಲೆ ಹಿಂದಿನ ರಹಸ್ಯ ಬಯಲಿಗೆ ಬಂದಿದೆ. ಕೊಲೆ ಮಾಡಿದ್ದು ಮಾತ್ರ ತಿರುಪತಿ ಮೂಲದ ನಾಲ್ಕು ಜನರು. ಆದ್ರೆ, ಕೊಲೆಗೆ ಸುಪಾರಿ ಕೊಟ್ಟಿದ್ದು ಮಾತ್ರ ಹಂಪಣ್ಣ ಸಜ್ಜನ ಪುತ್ರ ನರಸರೆಡ್ಡಿ. ಮಗನೇ ತಂದೆಯನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದರ ಹಿಂದೆ ಒಂದು ಕಾರಣವೂ ಸಹ ಇದೆ. ಅದನ್ನೂ ಪೊಲೀಸರು ಹಂತಕರಿಂದ ಕಕ್ಕಿಸಿದ್ದಾರೆ. ಮೊದಲು ಆಸ್ತಿಗಾಗಿ ಕೊಲೆ ಮಾಡಿರುವುದಾಗಿ ಶಂಕಿಸಿದ್ದರು. ಆದರೆ ತನಿಖೆ ವೇಳೆ, ಕೊಲೆಯಾದ ತಂದೆಯ ಮೊಬೈಲ್‌ನಲ್ಲಿ ಫೋಟೋಗಳು ಸಿಕ್ಕಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಊರಲ್ಲಿ ಮೂರ ಜನ ಮಕ್ಕಳ ಮನೆ ಇದ್ದರೂ ಸಹ ಕಳೆದ 15 ವರ್ಷಗಳಿಂದ ಜಮೀನಲ್ಲಿ ಶೆಡ್ ಹಾಕಿಕೊಂಡು ಪತ್ನಿ ಜೊತೆ ವಾಸವಾಗಿದ್ದ. ಆದ್ರೆ, ಕಳೆದ 8 ವರ್ಷಗಳ ಹಿಂದೆ ಪತ್ನಿ ಸಾವನ್ನಪ್ಪಿದ್ದ ಬಳಿಕವೂ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ. ಅಲ್ಲದೇ ಮದ್ಯವ್ಯಸನಿಯೂ ಕೂಡ ಆಗಿದ್ದ. ತನ್ನ ಕಾಮತೃಷೆ ಈಡೇರಿಸಿಕೊಳ್ಳಲು ದುಡ್ಡು ಕೊಟ್ಟು ಬೇರೆ ಮಹಿಳೆಯರನ್ನು ಶೆಡ್​​ಗೆ ಕರೆಸಿಕೊಳ್ಳುತ್ತಿದ್ದ. ಅದೇ ರೀತಿ ಮಗನ ಹೆಂಡ್ತಿ ಅಂದರೆ ಸೊಸೆ, ಜಮೀನಿಗೆ ಕೆಲಸಕ್ಕೆ ಬಂದವರನ್ನೂ ಬಿಡುತ್ತಿರಲಿಲ್ಲ. ಕೊನೆಗೆ ತನ್ನ ಪತ್ನಿಯ ಜೊತೆಗೆ ತಂದೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಗೊತ್ತಾಗಿದ್ದೇ ತಡ ನರಸರೆಡ್ಡಿ ರೊಚ್ಚಿಗೆದ್ದಿದ್ದು, ತಂದೆಯನ್ನೇ ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದ. ಕಾಮಿಷ್ಟ ತಂದೆಯಿಂದ ಬೇಸತ್ತು ಹೋಗಿದ್ದ ಮಗ ನಾಲ್ವರನ್ನು ಕರೆಸಿ, 2 ಲಕ್ಷ ರೂ. ನೀಡಿ ಕೊಲೆ ಮಾಡುವಂತೆ ಸುಪಾರಿ ಕೊಟ್ಟಿದ್ದ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.

ಒಟ್ಟಿನಲ್ಲಿ 74 ವಯಸ್ಸಾಗಿದ್ದರೂ ಸಹ ಹಂಪಣ್ಣ ತನ್ನ ಕಾಮದಾಹ ತೀರಿಸಿಕೊಳ್ಳಲು ಹಣದ ಆಮೀಷ ತೋರಿಸಿ ಅನೇಕ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಸಾಲದಕ್ಕೆ ತನ್ನ ಮಗನ ಪತ್ನಿಯನ್ನೂ ಸಹ ತನ್ನ ಕಾಮದಾಟಕ್ಕೆ ಬಳಸಿಕೊಂಡು ಕೊಲೆಯಾಗಿದ್ದಾನೆ.

Leave a Comment

Your email address will not be published. Required fields are marked *