ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಈದುಲ್ ಫಿತ್ರ್ ಮಾ.20 ರಂದು ಆಚರಿಸಲಾಗುವುದು ಎಂದು ಭಟ್ಕಳದ ಪ್ರಧಾನ ಕಾಝಿಗಳಾದ ಮೌಲಾನ ಅಬ್ದುಲ್ ರಬ್ ಕತೀಬ್ ನದ್ವಿ ಹಾಗೂ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಗುರುವಾರ ಸಂಜೆ ಇಲ್ಲಿ ಘೋಷಿಸಿದ್ದಾರೆ.
ಕೇರಳದ ಮಲ್ಲಾಪುರಂ ನಲ್ಲಿ ಈದ್ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮಾ.20ರ ಶುಕ್ರವಾರ ಭಟ್ಕಳದಲ್ಲಿ ಈದುಲ್ ಫಿತ್ರ್ ಆಚರಿಸಲಾಗುವುದು. ಬೆಳಿಗ್ಗೆ 7.30ಕ್ಕೆ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಗುವುದು. ಉಡುಪಿ ಮತ್ತು ದ.ಕ.ಜಿಲ್ಲೆಗಳಲ್ಲೂ ಮಾ.20ರಂದು ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ತಿಳಿದುಬಂದಿದೆ.
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಈದುಲ್ ಫಿತ್ರ್ ಅನ್ನು ಮಾ.21ರಂದು ಆಚರಿಸಲು ರಾಜ್ಯ ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ.







