ಬಂಟ್ವಾಳ: ಬೈಕ್ ಗಳ ನಡುವೆ ಡಿಕ್ಕಿ| ಮಗಳ ಬರ್ತ್ ಡೇ‌ ಸಂಭ್ರಮದಲ್ಲಿದ್ದ ಛಾಯಾಗ್ರಾಹಕ‌ ದುರ್ಮರಣ

ಸಮಗ್ರ ನ್ಯೂಸ್: ಪಾಣೆಮಂಗಳೂರು ಎಂಬಲ್ಲಿ ನಡೆದ ಎರಡು ಬೈಕ್‌ಗಳ ನಡುವಿನ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ (43) ಇಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಂಭೂರು ನಿವಾಸಿಯಾದ ರಕ್ಷಿತ್ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯದ ಸಕ್ರಿಯ ಸದಸ್ಯರಾಗಿದ್ದರು.

Ad Widget ... ..

ಅತ್ಯುತ್ತಮ ವಿಡಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದರು.ರಕ್ಷಿತ್ ಅವರ ಮುದ್ದಿನ ಮಗಳ 10ನೇ ವರ್ಷದ ಹುಟ್ಟುಹಬ್ಬ ನಾಳೆ (ಮಾರ್ಚ್ 15) ಇತ್ತು. ಮನೆಯಲ್ಲಿ ಮಗಳ ಬರ್ತ್‌ಡೇ ಸಂಭ್ರಮಕ್ಕೆ ಎಲ್ಲಾ ತಯಾರಿಗಳು ನಡೆದಿದ್ದವು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ರಕ್ಷಿತ್ ಶೆಟ್ಟಿ ಸಹೋದರ ರಂಜಿತ್ ಅವರು ಕೂಡ ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಿಂದಾಗಿ ಗಾಯಗೊಂಡು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮನೆಯನ್ನು ಮುನ್ನಡೆಸುತ್ತಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.

Ad Widget

Leave a Comment

Your email address will not be published. Required fields are marked *