ಸಮಗ್ರ ನ್ಯೂಸ್: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಹತ್ಯೆಯಾದ ಬಳಿಕ ಅವರ ಪುತ್ರ ಮೊಜ್ತಬಾ ಹೊಸೇನಿ ಅವರನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಇರಾನಿನ ಸಂವಿಧಾನದ ಪ್ರಕಾರ, 88 ಹಿರಿಯ ಇಸ್ಲಾಮಿಕ್ ವಿದ್ವಾಂಸರನ್ನು ಒಳಗೊಂಡ ಪ್ರಬಲ ಪಾದ್ರಿ ಸಂಸ್ಥೆಯಾದ ತಜ್ಞರ ಸಭೆಯು ಮೊಜ್ತಬಾ ಹೊಸೇನಿ ಅವರನ್ನು ಅಯತೊಲ್ಲಾ ಖಮೇನಿಯ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ.
ಇರಾನ್‌ನ ಸರ್ವೋಚ್ಚ ನಾಯಕ, ಇಸ್ಲಾಮಿಕ್ ಗಣರಾಜ್ಯದ ಅತ್ಯಂತ ಶಕ್ತಿಶಾಲಿ ವ್ಯಕ್ತಿ. ಸಶಸ್ತ್ರ ಪಡೆಗಳು, ಭದ್ರತಾ ಸೇವೆಗಳು ಮತ್ತು ಸರ್ಕಾರದ ಪ್ರಮುಖ ಸಂಸ್ಥೆಗಳನ್ನು ಸುಪ್ರೀಂ ಲೀಡರ್ ನಿಯಂತ್ರಿಸುತ್ತಾರೆ. ಅಲ್ಲದೆ, ದೇಶದ ವಿದೇಶಿ ಮತ್ತು ದೇಶೀಯ ನೀತಿಗಳನ್ನು ರೂಪಿಸುತ್ತಾರೆ.
ಸಂಘರ್ಷದ ಪರಿಸ್ಥಿತಿಯಲ್ಲಿ, ಖಮೇನಿ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಕುತೂಹಲವಿತ್ತು. ಅಂತಿಮವಾಗಿ ಅವರ ಪುತ್ರನೇ ಆ ಸ್ಥಾನವನ್ನು ಅಲಂಕರಿಸಿದ್ದಾರೆಂದು ತಿಳಿದುಬಂದಿದೆ.
ಯಾರು ಈ ಮೊಜ್ತಬಾ ಹೊಸೇನಿ ಖಮೇನಿ?
ಮೊಜ್ತಬಾ ಹೊಸೇನಿ ಖಮೇನಿ ಇರಾನ್‌ನ ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿ ಇವರು. ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಹಿರಿಯ ಮಗನಾಗಿದ್ದಾರೆ. 1969ರಲ್ಲಿ ಮಷ್ಹದ್‌ನಲ್ಲಿ ಜನಿಸಿದ ಮೊಜ್ತಬಾ ಹೊಸೇನಿ, ಕ್ಲರಿಕ್ (ಧಾರ್ಮಿಕ ವಿದ್ವಾಂಸ) ಆಗಿದ್ದು, ತಂದೆಯವರ ಆಡಳಿತದ ಸಮಯದಲ್ಲಿ IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಮತ್ತು ಸುಪ್ರೀಂ ಲೀಡರ್ ಕಚೇರಿಯ ಪ್ರಮುಖ ಶಕ್ತಿಯಾಗಿ ಪ್ರಭಾವ ಆಗಿದ್ದರು.







