ಇಂದು ರಾಜ್ಯ ಬಜೆಟ್ ಮಂಡನೆ| 17ನೇ ಬಾರಿ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ| ಹಲವು ನಿರೀಕ್ಷೆಯಲ್ಲಿ ಕರ್ನಾಟಕ

ಸಮಗ್ರ ನ್ಯೂಸ್: ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ಭಾರದ ನಡುವೆ ಆರ್ಥಿಕ ಶಿಸ್ತು ಜನರ ನಿರೀಕ್ಷೆ ಈಡೇರಿಕೆಗೆ ಬಜೆಟ್ ನಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ.

Ad Widget ... ..

ರಾಜ್ಯದ ಮಟ್ಟಿಗೆ ಹೆಚ್ಚು ಮತ್ತು ದೇಶದಲ್ಲಿ ಎರಡನೇ ಅತಿ ಹೆಚ್ಚು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಇಂದು ಬೆಳಗ್ಗೆ 10.15ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಡಿವಾಣ ಹಾಕದೆ ಆರ್ಥಿಕ ಶಿಸ್ತು ಪಾಲನೆಗೆ ಬಜೆಟ್ ನಲ್ಲಿ ಒತ್ತು ನೀಡುವ ಸಾಧ್ಯತೆ ಇದೆ.

Ad Widget

ಅನ್ನಭಾಗ್ಯ ಫಲಾನುಭವಿಗಳಿಗೆ ತೊಗರಿ, ಸಕ್ಕರೆ, ಉಪ್ಪು, ಎಣ್ಣೆ ಹೊಂದಿದ ಇಂದಿರಾ ಕಿಟ್ ಘೋಷಣೆ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಾಸಿಕ 2,000 ರೂ. ಜೊತೆಗೆ ವಾರ್ಷಿಕ ಎರಡು ಸೀರೆ ವಿತರಣೆ, ವಸತಿ ಹಂಚಿಕೆ ಗೊಂದಲ ನಿವಾರಣೆ ಮಾಡಿ ಬಡವರಿಗೆ ಸೂರು ಒದಗಿಸುವುದು, ನೀರಾವರಿ, ರಸ್ತೆ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ.

ವಸತಿ ಹಂಚಿಕೆಯ ಗೊಂದಲ ನಿವಾರಿಸಿ ಜನರಿಗೆ ಮನೆ ನಿರ್ಮಿಸುವ ಯೋಜನೆ, ರಸ್ತೆಗಳು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ. ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಅನುದಾನ ನಿರೀಕ್ಷೆ. ಮಹಿಳೆಯರು, ಯುವಕರು, ಬಡವರಿಗೆ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ. ವಿವಿಧ ಜಿಲ್ಲೆಗಳಿಗೆ ಅನುದಾನ ಹೆಚ್ಚಳ ನಿರೀಕ್ಷೆ ಇದೆ. ಈ ಬಾರಿ ಬಜೆಟ್ ಗಾತ್ರ ಮತ್ತಷ್ಟು ವಿಸ್ತಾರವಾಗುವ ನಿರೀಕ್ಷೆ ಇದ್ದು, ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ, ಅಭಿವೃದ್ಧಿ ಆರ್ಥಿಕ ಶಿಸ್ತಿನ ಸಮತೋಲನ ಸಾಧಿಸುವ ನಿರೀಕ್ಷೆ ಇದೆ.

Leave a Comment

Your email address will not be published. Required fields are marked *