ಬಿಹಾರ ಸಿಎಂ ನಿತೀಶ್ ರಾಜೀನಾಮೆ ಸಾಧ್ಯತೆ

ಸಮಗ್ರ ನ್ಯೂಸ್: ಬಿಹಾರ ರಾಜ್ಯದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ನಡೆಯಲಿದೆ. ಜೆಡಿಯು ಪಕ್ಷದ ವರಿಷ್ಠ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

Ad Widget ... ..

75 ವರ್ಷದ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ 2025ರ ನವೆಂಬರ್ 20ರಂದು ಪಾಟ್ನಾದಲ್ಲಿ ನಡೆದ ಸಮಾರಂಭದಲ್ಲಿ ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Ad Widget

ಬುಧವಾರ ಸಂಜೆ India Today ವರದಿಯೊಂದನ್ನು ಮಾಡಿದೆ. ಬಿಹಾರ ರಾಜ್ಯದಲ್ಲಿ ಶೀಘ್ರವೇ ಮಹತ್ವದ ರಾಜಕೀಯ ಬದಲಾವಣೆಯೊಂದು ನಡೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗುವುದು ಎಂಬ ವರದಿಗಳಿವೆ ಎಂದು ಹೇಳಿದೆ.

ಇದು ಬಿಹಾರ ರಾಜ್ಯದ ನಾಯಕತ್ವದಲ್ಲಿ ಬದಲಾವಣೆಯ ಸುಳಿವು ನೀಡುತ್ತಿದೆ. ಈ ಬೆಳವಣಿಗೆಯು ಜೆಡಿಯು ಪಕ್ಷದೊಳಗೆ ತೀವ್ರ ರಾಜಕೀಯ ಚಟುವಟಿಕೆಯನ್ನು ಹುಟ್ಟುಹಾಕಿದ್ದು, ಇದು ಬಿಹಾರದ ಆಡಳಿತವನ್ನೇ ಬದಲಾಯಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಜೆಡಿಯು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಅವರ ನಂತರ ರಾಜ್ಯದ ಆಡಳಿತವನ್ನು ಯಾರು ವಹಿಸಿಕೊಳ್ಳಲಿದ್ದಾರೆ? ಎಂಬ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆಗಳು ಆರಂಭವಾಗಿದೆ.

ಪಕ್ಷದ ಮೂಲಗಳ ಪ್ರಕಾರ ನಿತೀಶ್ ಕುಮಾರ್ ರಾಜ್ಯಸಭಾ ನಾಮ ನಿರ್ದೇಶನಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ನಾಮಪತ್ರಗಳು ಸಿದ್ಧವಾಗಿವೆ ಮತ್ತು ಮುಖ್ಯಮಂತ್ರಿಯವರ ಸಹಿ ಮಾತ್ರ ಬಾಕಿ ಉಳಿದಿದೆ.

Leave a Comment

Your email address will not be published. Required fields are marked *