ಯುದ್ಧದ ನಡುವೆ ಭಾರತಕ್ಕೆ ಗುಡ್ ನ್ಯೂಸ್ ನೀಡಿದ ರಷ್ಯಾ

ಸಮಗ್ರ ನ್ಯೂಸ್: ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಇಡೀ ಪ್ರಪಂಚದ ಕಚ್ಚಾ ತೈಲ ಪೂರೈಕೆಯಲ್ಲಿ ಭಾರಿ ನಡುಕ ಹುಟ್ಟಿಸಿದೆ. ಅದರಲ್ಲೂ ಇರಾನ್, ತೈಲ ಸಾಗಣೆಯ ನಿರ್ಣಾಯಕ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವುದರಿಂದ, ಪೂರೈಕೆಯಲ್ಲಿ ದೊಡ್ಡ ಮಟ್ಟದ ಅಡಚಣೆ ಉಂಟಾಗುವ ಭೀತಿ ಎದುರಾಗಿದೆ.

Ad Widget ... ..

ಈ ಹಿನ್ನೆಲೆಯಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಸಿದ್ಧವಾಗಿದೆ ಎಂದು ವರದಿಯಾಗಿದೆ. ಉದ್ಯಮ ವಲಯದ ಮೂಲಗಳ ಪ್ರಕಾರ, ಸುಮಾರು 9.5 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಸಮೀಪದಲ್ಲಿರುವ ಹಡಗುಗಳಲ್ಲಿ ಲಭ್ಯವಿದ್ದು, ಇದು ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ. ಈ ಮೂಲಕ ಮಧ್ಯಪ್ರಾಚ್ಯದಿಂದ ಉಂಟಾದ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಲು ಭಾರತಕ್ಕೆ ಸಾಧ್ಯವಾಗಬಹುದು ಎನ್ನಲಾಗಿದೆ.

Ad Widget

ಭಾರತವು ಪ್ರಸ್ತುತ ಕೇವಲ 25 ದಿನಗಳ ಬೇಡಿಕೆಗೆ ತಕ್ಕಷ್ಟು ಕಚ್ಚಾ ತೈಲ ಸಂಗ್ರಹ ಹೊಂದಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಇತರೆ ಇಂಧನಗಳ ಸಂಗ್ರಹವೂ ಸೀಮಿತವಾಗಿದೆ. ಹೀಗಾಗಿ ಭಾರತಕ್ಕೆ ಪೂರೈಕೆ ಆತಂಕ ಎದುರಾಗಿದೆ.

ಭಾರತದ ಸುಮಾರು ಶೇಕಡಾ 40ರಷ್ಟು ಕಚ್ಚಾ ತೈಲ ಆಮದು ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಇದು ಬಂದ್ ಆಗಿರುವುದರಿಂದ ಭಾರತ ಪರ್ಯಾಯ ಮೂಲಗಳನ್ನು ಹುಡುಕಲು ಮುಂದಾಗಿದೆ. ಭಾರತೀಯ ರಿಫೈನರಿಗಳು ದಿನಕ್ಕೆ ಸುಮಾರು 5.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುತ್ತಿವೆ.

Leave a Comment

Your email address will not be published. Required fields are marked *