ಭಾರೀ ಕುಸಿತ ಕಾಣಲಿದೆಯಾ ಬಂಗಾರದ ದರ? ಇಲ್ಲಿದೆ ಆಭರಣ ಪ್ರಿಯರಿಗಾಗಿ ಗುಡ್ ನ್ಯೂಸ್!!

ಸಮಗ್ರ ನ್ಯೂಸ್: ಅನಿಶ್ಚಿತ ಪರಿಸ್ಥಿತಿಯ ನಡುವೆಯೇ, ಮುಂದಿನ ದಿನಗಳಲ್ಲಿ ಚಿನ್ನ ಖರೀದಿಸಬೇಕೆಂದು ಕೊಂಡವರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಬಂಗಾರದ ದರವು ಎಂಟು ಗ್ರಾಂಗೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ. ಇಂದು ಫೆಬ್ರವರಿ 17ರಂದು 22ಕ್ಯಾರಟ್ ಎಂಟು ಗ್ರಾಂ ದರ 1,13,080 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ 8 ಗ್ರಾಂ ಬೆಲೆ 1,23,360 ರೂಪಾಯಿ ಇದೆ. ಇದು ದಾಖಲೆಯ ಹಂತದಲ್ಲಿ ಇಳಿಕೆ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಇದು ಖರೀದಾರರಿಗೆ ಖುಷಿ ತಂದರೆ, ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ.

Ad Widget ... ..

ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ವಹಿವಾಟಿನಲ್ಲಿ ನಿರಂತರ ಏರಿಳಿತ ಮುಂದುವರಿದಿದೆ. ಈ ಲೋಹಗಳ ದರವು ಇಳಿಮುಖವಾಗಿದೆ. ಹೊಸ ಮುನ್ಸೂಚನೆಗಳ ಪ್ರಕಾರ, ಚಿನ್ನದ ಬೆಲೆ 08 ಗ್ರಾಂಗೆ (ಒಂದು ಸವರನ್) 80,000 ರೂ.ಗಿಂತ ಕಡಿಮೆ ಆಗುವ ಸಾಧ್ಯತೆ ಇದೆ.

Ad Widget

ತಿಂಗಳುಗಳಲ್ಲಿ ಗರಿಷ್ಠ ಹಂತ ತಲುಪಿದ್ದ ಬೆಲೆಗಳು ದಾಖಲೆಯ ಹಂತಕ್ಕೆ ಇಳಿಯಬಹುದು ಎಂದು ವಿಶ್ಲೇಷಣೆ ಮಾಡಲಾಗಿದೆ. ಈ ಮುನ್ಸೂಚನೆ ಸಾಮಾನ್ಯ ಖರೀದಿದಾರರು ಹಾಗೂ ಹೂಡಿಕೆದಾರರಲ್ಲಿ ಕುತೂಹಲ ಹೆಚ್ಚಾಗಿದೆ. ಹಾಗಾದರೆ ಸದ್ಯ ದರ ಎಷ್ಟಿದೆ? ಗರಿಷ್ಠ ಮಟ್ಟದ ಇಳಿಕೆಗೆ ಪ್ರಮುಖ ಕಾರಣಗಳೇನು? ಇಲ್ಲಿದೆ ಮಾಹಿತಿ.

ಚಿನ್ನದ ಬೆಲೆ ಹೆಚ್ಚಾಗುವಂತೆ ಮಾಡಿದ್ದ ಜಾಗತಿಕ ಪರಿಸ್ಥಿತಿಗಳು ಇದೀಗ ಕ್ರಮೇಣ ಬದಲಾಗುತ್ತಿವೆ. ಅಮೆರಿಕಾ ಜೊತೆಗೆ ಉದ್ವಿಗ್ನತೆ ಹೆಚ್ಚಿದ್ದ ಸಂದರ್ಭದಲ್ಲಿ ರಷ್ಯಾ ಅಂತಾರರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕ ಡಾಲರ್ ಬಳಕೆಯನ್ನು ಕಡಿಮೆ ಮಾಡಿತ್ತು. ಆದರೆ ಇತ್ತೀಚಿನ ವರದಿಗಳು, ರಷ್ಯಾ ಮತ್ತೆ ಡಾಲರ್‌ನ ವ್ಯಾಪಕ ಬಳಕೆಗೆ ಮರಳುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಇದರಿಂದ ಚಿನ್ನದ ದರ ಇಳಿಕೆ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಅಮೆರಿಕವು ರಷ್ಯಾದ ಆರ್ಥಿಕತೆಯ ಮೇಲೆ ಒತ್ತಡ ಹೇರುವ ಉದ್ದೇಶದಿಂದ, ವಿಶೇಷವಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಆಮದುಗಳಿಗೆ ಅಡ್ಡಿ ತರಲು ಯತ್ನ ನಡೆಸಿತ್ತು. ಡಾಲರ್‌ಗಳ ಲಭ್ಯತೆ ಹೆಚ್ಚಿಸಲು ರಷ್ಯಾ ತನ್ನ ಚಿನ್ನದ ಸಂಗ್ರಹದ ಒಂದು ಭಾಗವನ್ನು ಮಾರಾಟ ಮಾಡಿದರೆ, ಜಾಗತಿಕ ಚಿನ್ನದ ಬೆಲೆಗಳಲ್ಲಿ ತೀವ್ರ ಕುಸಿತ ಎದುರಾಗಬಹುದೆಂಬ ಅಂದಾಜುಗಳಿವೆ. ಜೊತೆಗೆ ರಷ್ಯಾ-ಉಕ್ರೇನ್ ಸಂಘರ್ಷ ಅಂತ್ಯಗೊಂಡರೆ, ದರಗಳು ಇನ್ನಷ್ಟು ಇಳಿಯಬಹುದು ಎಂದು ಹೇಳಲಾಗುತ್ತಿದೆ. ರಷ್ಯಾ ಮತ್ತೆ ಅಮೆರಿಕದ ಡಾಲರ್ ಬಳಕೆ ಹೆಚ್ಚಿಸಿದಲ್ಲಿ ಅದರ ಮೌಲ್ಯ ವೃದ್ಧಿಸಬಹುದು. ಆರ್ಥಿಕ ಸ್ಥಿರತೆ ಸುಧಾರಣೆ ಆಗಲಿದೆ. ಇದು ಬಂಗಾರದ ದರ ಇಳಿಕೆಗೆ ದಾರಿ ಮಾಡುವ ಸಂಭವವಿದೆ ಎಂದು ತಜ್ಞರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *