ಸಮಗ್ರ ನ್ಯೂಸ್: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಕಿರುತೆರೆ ನಟಿ ರಶ್ಮಿ ಲೀಲಾ ವಿಧಿವಶರಾಗಿದ್ದಾರೆ. ಬೆಂಗಳೂರು ನಗರ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಟಿ ರಶ್ಮಿ ಲೀಲಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ರಶ್ಮಿ ಲೀಲಾ ಸುಮಾರು ಹಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರ ನಿಧನದ ವಿಚಾರವನ್ನು ಅವರ ಪತಿ ಸಾರಕ್ಕಿ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ರಶ್ಮಿ ಲೀಲಾ ಅವರು 2019ರಿಂದ ಪಲ್ಮನರಿ ಫೈಬ್ರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಹಂತಹಂತವಾಗಿ ಮುಂದುವರಿದು ನಿಧಾನವಾಗಿ ಶ್ವಾಸಕೋಶಗಳಲ್ಲಿ ಗಾಯ ಮಾಡುತ್ತ, ಉಸಿರಾಟಕ್ಕೆ ತೊಂದರೆ ಮಾಡಿತ್ತು.
ಔಷಧಿಯಿಂದ ಗುಣಪಡಿಸೋಕೆ ಸಾಧ್ಯವಿಲ್ಲ ಹೀಗಾಗಿ ಲಂಗ್ ಟ್ರಾನ್ಸ್ಪ್ಲಾಂಟ್ ಮಾಡಬೇಕು ಎಂದು ರಶ್ಮಿ ಲೀಲಾ ಮಾಹಿತಿ ನೀಡಿದ್ದರು. ಕಳೆದ ಫೆಬ್ರವರಿಯಲ್ಲಿ ಲಂಗ್ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆ ಕೂಡ ಆಗಿತ್ತು. ಹೀಗಿದ್ದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.






