ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಫೆಬ್ರವರಿ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ನೋಡೋಣ…

Ad Widget ... ..

ಮೇಷ:
ಈ ರಾಶಿಯವರು ಸೂರ್ಯನನ್ನು ನಿತ್ಯ ಪ್ರಾರ್ಥನೆ ಮಾಡಲೇಬೇಕು. ಆದರೆ ಮಾಘ ಮಾಸದಲ್ಲಂತೂ ಪ್ರಾರ್ಥನೆ ಮಾಡಲೇಬೇಕು ಎಂಬ ಕಡ್ಡಾಯ ನಿಯಮವಿದೆ. ದೇವರು ಆರೋಗ್ಯ ಕೊಡುತ್ತಾನೆ. ನಿಮಗೆ ದಿಕ್ಕು ದೆಸೆ ತೋರಿ ಸರ್ವತೋಮುಖ ಅಭಿವೃದ್ಧಿ ನೀಡುತ್ತಾನೆ. ಮಾಘ ಮಾಸದ ಕಡೆಯ ಭಾನುವಾರ ಗೋಧಿಯನ್ನು ದಾನ ಮಾಡಿ.

Ad Widget

ವೃಷಭ:
ನಾವು ಯಾರನ್ನು ನಮ್ಮ ಅವನತಿಗೆ, ಉನ್ನತಿಗೆ ಕಾರಣ ಮಾಡಬಾರದು. ಆತ್ಮಾವಲೋಕನ ಮಾಡಿ ನಾವು ತಪ್ಪಿದಲ್ಲಿ ತಿದ್ದಿ ನಡೆದರೆ ಅದೇ ವರವಾಗುತ್ತದೆ. ಅನುಗ್ರಹ ಮಾಡಲು ಚಂಡಿಕಾ ಪರಮೇಶ್ವರಿಯು ಇದ್ದಾಳೆ. ಏಕಾದಶದಲ್ಲಿ ಶನಿ, ದ್ವಿತೀಯದಲ್ಲಿ ಗುರು ಸಜ್ಜನರ ಸಹವಾಸ ಮಾಡಿ, ಕೂಡಲೇ ದಾರಿ ತಪ್ಪಿಸುವ ಜನರನ್ನು ದೂರವಿಟ್ಟು ಮುಂದೆ ಸಾಗಿರಿ. ಒಳಿತಾಗುತ್ತದೆ.

ಮಿಥುನ:
ಬುಧನು ಶನಿಯ ಮನೆಯಲ್ಲಿದ್ದು, ಈಗಾಗಲೇ ಕುಂಭ ರಾಶಿಯಲ್ಲಿ ರವಿ ರಾಹು ಸೇರಿ ರಾಹುವಿನ ಗ್ರಹಣದಿಂದ ಸೂರ್ಯನನ್ನು ನುಂಗಲು ಹೊರಟರೂ, ಸೂರ್ಯ ಚಂದ್ರನನ್ನು ಮುಟ್ಟಿದರೆ ಯಾರೂ ಉದ್ಧಾರವಾಗುವುದಿಲ್ಲ ಎಂಬುದು ನೆನಪಿರಲಿ. ಯಾವ ಒತ್ತಡಕ್ಕೆ ಮಣಿಯದೆ ಕೆಲಸ ಮುಂದುವರಿಸಿ. ಗುರುವನ್ನು ಪ್ರಾರ್ಥಿಸಿ. ನಿಮ್ಮ ಎಲ್ಲಾ ಅಭಿವೃದ್ಧಿಗೆ ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ. ಒಳ್ಳೆಯ ಸಮಯ ಉಂಟಾಗುತ್ತದೆ.

ಕಟಕ:
ಜಲರಾಶಿಯಲ್ಲಿ ಹುಟ್ಟಿರುವ ನೀವು, ಜಲ ದೇವತೆಯನ್ನಾಗಲಿ ಅಥವಾ ಗಂಗೆ ಧರಿಸಿರುವ ರುದ್ರನನ್ನು ಪೂಜಿಸುವುದು ಅತ್ಯಗತ್ಯ. ದ್ವಂದ್ವವಿಲ್ಲದ ಜೀವನ ನಡೆಸುವುದು ನಿಮ್ಮ ಧ್ಯೇಯವಾಗಿರಲಿ. ಚಂದ್ರನ ಮನೆಯಾಗಿರುವುದರಿಂದ ಬುದ್ಧಿಯು ಅಂತರಾತ್ಮ ಹೇಳಿದ ಮಾತಿಗೆ ಬೆಲೆ ಕೊಟ್ಟು ಜೀವನ ರೂಪಿಸಿಕೊಳ್ಳಿ. ಸಹಸ್ರ ಶಿವಪಂಚಾಕ್ಷರಿಯನ್ನು ಶಿವರಾತ್ರಿಯಂದು ಪಠಿಸಿ.

ಸಿಂಹ:
ಶನಿಯು ಅಷ್ಟಮದಲ್ಲಿ, ಗುರುವು ಏಕಾದಶಕ್ಕೆ ಇರುವುದು ಒಂದು ವೈಶಿಷ್ಟ್ಯವೇ ಸರಿ. ಪೂರ್ವಜನ್ಮದ ಪುಣ್ಯವು ಮನುಷ್ಯನನ್ನು ಎಂದೆಂದಿಗೂ ಕಾಪಾಡುತ್ತದೆ. ಇಂದಿನಿಂದ ಪೂಜೆಯು ಮುಂದೆ ನಿಮಗೆ ಒಳ್ಳೆಯ ಫಲ ನೀಡುವುದು. ಇಂದೇ ಬೀಜ ಹಾಕಿ ಮಾವಿನಹಣ್ಣನ್ನು ತಿನ್ನಲು ಆಗುತ್ತದೆಯೇ? ನಿಮ್ಮ ಸಮಯಕ್ಕೆ ಕಾಯಿರಿ. ಗುರು ನರಸಿಂಹನ ಪ್ರಾರ್ಥನೆ ಇರಲಿ.

ಕನ್ಯಾ:
ಏನು ಕೆಲಸವನ್ನು ಮಾಡಬೇಕಾದರೂ ಒಂದಲ್ಲ ಎರಡು ಬಾರಿ ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ. ಶನಿಯು ಸಪ್ತಮದಲ್ಲಿ ಇದ್ದು, ಕೆಲಸವು ಪೂರ್ಣ ಆಗಲು ಬಿಡುವುದಿಲ್ಲ. ಗುರುವು ದಶಮದಲ್ಲಿದ್ದು, ಅಲ್ಪಸ್ವಲ್ಪ ಕೊಟ್ಟಾನು. ಮನೆದೇವರ ಮೊರೆ ಹೋಗಿ, ದರ್ಶಿಸಿ, ಭಕ್ತಿಯಿಂದ ಪೂಜಿಸಿ. ಗ್ರಹಗಳು ನಿಮ್ಮ ಕಡೆ ತಿರುಗಿ ಲಾಭಾಂಶ ದೊರೆಯುತ್ತದೆ.

ತುಲಾ:
ಗ್ರಹಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿಲ್ಲ. ಯಾವುದೇ ಬದಲಾವಣೆ ಆದರೂ ಗುರು-ಶನಿ ಸ್ವರೂಪ ಬದಲಾಗದು. ತಾತ್ಕಾಲಿಕವಾಗಿ ವಿದ್ಯಾಬಲವಿದ್ದರೂ ಬುದ್ಧಿ ಬಲವಿದ್ದು, ದೈವಬಲವಿದ್ದರೆ ನಿಮ್ಮ ಕೆಲಸವು ಮುಗಿಲು ಮುಟ್ಟುತ್ತದೆ. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿರಿ.

ವೃಶ್ಚಿಕ:
ಕನಸಿನಲ್ಲಿ ಕಂಡ ಧನವು ಕೈಗೆ ಸಿಕ್ಕಿದರೆ ಮಾತ್ರವೇ ಅದನ್ನು ಅನುಭವಿಸಬಹುದು. ನಿಮ್ಮ ಗ್ರಹಗತಿಗೆ ಸುಬ್ರಹ್ಮಣ್ಯ ದೇವರನ್ನು ಅರ್ಚಿಸಿ. ಯಾವುದೋ ಒಂದು ರೀತಿಯಲ್ಲಿ ದೇವರೇ ಸಮಸ್ಯೆ ಪರಿಹಾರಮಾಡುವ ಸಮಯ ಬರುತ್ತದೆ. ಸಾಲವನ್ನು ತೀರಿಸುತ್ತೀರಿ. ನಿಮಗೆ ದಾರಿ ತೋರಿದ ಪುಣ್ಯ ಪುರುಷರನ್ನು ಎಂದೆಂದಿಗೂ ಬಿಡಬೇಡಿ.

ಧನಸ್ಸು:
ಇದು ಒಳ್ಳೆಯ ಸಮಯ ಎಂದೇ ಪರಿಗಣಿಸಿ. ಶನಿ ರಾಹುವಿನ ಸಂಪರ್ಕಕ್ಕೆ ಬಂದಿದ್ದಾನೆ. ಮಗುವಿಗೆ ಹಸಿವಾದಾಗ ಅಮ್ಮಾ ಎಂದು ಕೂಗಿದರೆ ತಾಯಿ ಮಗುವಿಗೆ ಊಟ ನೀಡುತ್ತಾಳೆ. ನೀವು ನಿಮ್ಮ ಅಪೇಕ್ಷೆ ದೇವರ ಮುಂದೆ ಇಟ್ಟರೆ ಎಲ್ಲವನ್ನೂ ಕೊಡುತ್ತಾರೆ. ಸುಖಕ್ಕೆ, ಆರೋಗ್ಯಕ್ಕೆ ಕೊರತೆಯಿಲ್ಲ, ಮಾತಿನಲ್ಲಿ ಇತಿಮಿತಿ ಇರಲಿ.

ಮಕರ:
ಗುರುವೇ ಬಲವಿಲ್ಲದೆ ಇರುವಾಗ, ಬಲವುಳ್ಳ ಶನಿಯು ಮೂರನೇ ಮನೆಯಲ್ಲಿ ಇದ್ದಾನೆ. ನಿಮ್ಮ ಬಾಳನ್ನು ಬಂಗಾರವನ್ನಾಗಿ ಮಾಡುತ್ತಾನೆ. ಆದರೆ ಗುರುಪ್ರಾರ್ಥನೆ ಇರಲಿ. ಗುರುಪೂಜೆಯನ್ನು ಮಾಡಲೇಬೇಕು. ಅತ್ಯಂತ ಒಳ್ಳೆಯ ಸಮಯವನ್ನು ಹಾಳು ಮಾಡದೆ ಉಪಯೋಗಿಸಿಕೊಳ್ಳಿ.

ಕುಂಭ:
ಕೆಲಸವು ಆಗುವ ಲಕ್ಷಣ ಕಾಣುವುದಿಲ್ಲ. ಅಡಚಣೆ ಬರುತ್ತದೆ. ಸೂರ್ಯೋದಯಕ್ಕೆ ಮುನ್ನ ಎದ್ದು ಅಶ್ವತ್ಥ ಔದುಂಬರ ವೃಕ್ಷಕ್ಕೆ ಪ್ರಾರ್ಥನೆ ಮಾಡಿದರೆ, ದೇಹ-ಮನಸ್ಸು ಶುದ್ಧವಾಗಿ ಕೆಲಸ ಮಾಡುವ ಉತ್ಸಾಹ ಬಂದು ಕಷ್ಟವು ತೀರುತ್ತದೆ. ಶಿವ ಬ್ರಹ್ಮ ವಿಷ್ಣು ಪೂಜೆಯನ್ನು ಮಾಡಿದ ಪುಣ್ಯದಿಂದ ನಿಮಗೆ ಬೇಕಾದ್ದನ್ನು ಕೊಡುತ್ತಾನೆ. ಅಭ್ಯುದಯವಾಗಲಿ.

ಮೀನ:
ಇನ್ನೇನು ಗ್ರಹಗಳು ವಕ್ರವಾಗಲಿದ್ದು, ಈ ಸಮಯದಲ್ಲಿ ಸಮಾಧಾನ ಚಿತ್ತರಾಗಿ ಹಿರಿಯರು ಹೇಳಿದ ಮಾತನ್ನು ಆಲಿಸಿ, ಪಾಲಿಸಿದರೆ ಅಭಿವೃದ್ಧಿ ಉಂಟಾಗುತ್ತದೆ. ಗುರುರಾಶಿಯಲ್ಲಿ ಹುಟ್ಟಿದ ನೀವು ಗುರುಕಟಾಕ್ಷ ಹೊಂದುವುದು ಸುಲಭ. ಗುರು ಅಷ್ಟೋತ್ತರ ಪಠಿಸಿ, ಕುಲಗುರುಗಳನ್ನು ದರ್ಶಿಸಿ. ನಿಮ್ಮ ಗುರುಗಳೇ ಬೇಕಾದ್ದನ್ನು ಕೊಟ್ಟು ಮಾರ್ಗದರ್ಶನ ಮಾಡುತ್ತಾರೆ. ಶನಿ ಸಂಚಾರ ಸಮಯದಲ್ಲಿ ಗುರುನರಸಿಂಹನನ್ನು ಪ್ರಾರ್ಥಿಸಿ.

Leave a Comment

Your email address will not be published. Required fields are marked *