ಸೂರ್ಯವಂಶಿಯ ಶತಕದ ವೈಭವ| ಆರನೇ ಬಾರಿ U19 ವಿಶ್ವಕಪ್ ಮುಡಿಗೇರಿಸಿಕೊಂಡ ಆಯುಷ್ ಪಡೆ

ಸಮಗ್ರ ನ್ಯೂಸ್: ಯುಷ್ ಮ್ಹಾತ್ರೆ (Ayush Mhatre) ನೇತೃತ್ವದ ಭಾರತ (India) ಅಂಡರ್-19 ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡವನ್ನು ಭಾರತ ಬಗ್ಗು ಬಡಿದಿದೆ.

Ad Widget ... ..

ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡ ದಾಖಲೆಯ ಮೊತ್ತವನ್ನು ಕಲೆ ಹಾಕಿತ್ತು. ಭಾರತ ತಂಡ ನಿಗದಿತ 50 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 411 ರನ್ ಪೇರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಟೀಮ್ ಇಂಡಿಯಾ ಬೌಲರ್​ಗಳ ದಾಳಿಗೆ ಸರ್ವಪತನವಾಯಿತು. ಇಂಗ್ಲೆಂಡ್ 40.2 ಓವರ್​​ಗಳಲ್ಲಿ 311 ರನ್​ಗಳಿಗೆ ಆಲೌಟಾಯಿತು.

Ad Widget

ಜಿಂಬಾಬ್ವೆಯ ಹರಾರೆಯಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಂಡರ್ 19 ತಂಡ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

55 ಎಸೆತಗಳಲ್ಲಿ ವೇಗದ ಶತಕ ಸಿಡಿಸಿದ ಅವರು ಅತಿ ಹೆಚ್ಚು ಸಿಕ್ಸರ್‌ಗಳು, ಟೂರ್ನಿಯ ಗರಿಷ್ಠ ರನ್ ಸೇರಿದಂತೆ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದರು. ವೈಭವ್ ಅವರ ಅಬ್ಬರದ ಇನ್ನಿಂಗ್ಸ್ ಅಂಡರ್-19 ಕ್ರಿಕೆಟ್ ಇತಿಹಾಸದಲ್ಲಿ ಒಂದು ಸ್ಮರಣೀಯ ಪುಟ ಸೇರಿದರು.

Leave a Comment

Your email address will not be published. Required fields are marked *