ಶಶಿತರೂರ್ ಪುತ್ರನಿಗೂ ಕಾಡಿದ ‘ಲೇ ಆಫ್’ ಬಿಸಿ| ಇಶಾನ್ ತರೂರ್ ಸೇರಿ 500 ಮಂದಿಯನ್ನು ಕಿತ್ತೊಗೆದ ವಾಷಿಂಗ್ಟನ್‌ ಪೋಸ್ಟ್‌

ಸಮಗ್ರ ನ್ಯೂಸ್: ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಒಡೆತನದ ವಾಷಿಂಗ್ಟನ್‌ ಪೋಸ್ಟ್‌, ಇತ್ತೀಚಿಗೆ ಸಂಸ್ಥೆಯಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭಿಸಿದೆ. ಸ್ಥಳೀಯ ವರದಿಗಾರರು, ಕ್ರೀಡಾ ವಿಭಾಗ, ವಿದೇಶಿ ಬ್ಯುರೋಗಳು ಮತ್ತು ವ್ಯಾಪಾರ ವಿಭಾಗದ ಅನೇಕ ಪತ್ರಕರ್ತರನ್ನು ವಾಷಿಂಗ್ಟನ್ ಪೋಸ್ಟ್‌ ಕೆಲಸದಿಂದ ವಜಾಗೊಳಿಸಿದೆ.

Ad Widget ... ..

ಅಮೆರಿಕದ ಖ್ಯಾತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಹಿರಿಯ ಅಂತಾರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಶಶಿ ತರೂರ್‌ ಅವರ ಪುತ್ರ ಇಶಾನ್‌ ತರೂರ್‌ ಅವರನ್ನು, ಪತ್ರಿಕೆಯ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.

Ad Widget

ವಾಷಿಂಗ್ಟನ್‌ ಪೋಸ್ಟ್‌ನ ಈ ನಿರ್ಧಾರವನ್ನು ಅನೇಕ ಮಾಜಿ ಸಿಬ್ಬಂದಿಗಳು “ಜಾಗತಿಕ ಪತ್ರಿಕೋದ್ಯಮಕ್ಕೆ ಕರಾಳ ದಿನ” ಎಂದು ಬಣ್ಣಿಸಿದ್ದಾರೆ. ಪ್ರತಿಷ್ಠಿತ ದಿನಪತ್ರಿಕೆಯೊಂದು ಈ ರೀತಿ ಏಕಾಏಕಿ ತನ್ನ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಈ ಸಂಬಂಧ ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಇಶಾನ್‌ ತರೂರ್‌, “ನನ್ನ ಹೃದಯ ಒಡೆದುಹೋಗಿದೆ” ಎಂದು ಭಾವುಕರಾಗಿ ಹೇಳಿದ್ದಾರೆ. ಇಶಾನ್‌ ತರೂರ್‌ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಹಿರಿಯ ಅಂಕಣಕಾರರಾಗಿ ಖ್ಯಾತಿ ಗಳಿಸಿದ್ದರು. ಇತ್ತೀಚಿಗೆ ಅಮೆರಿಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂದೆ ಶಶಿ ತರೂರ್‌ಗೆ ಇಶಾನ್‌ ತರೂರ್‌ ಪ್ರಶ್ನೆ ಕೇಳಿದ್ದು ಭಾರೀ ಸುದ್ದಿಯಾಗಿತ್ತು.

Leave a Comment

Your email address will not be published. Required fields are marked *