ಸಮಗ್ರ ನ್ಯೂಸ್: ಕಲರ್ಸ್ ಕನ್ನಡ ವಾಹಿನಿಯಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಡೆಸಿಕೊಟ್ಟ ‘ಬಿಗ್ ಬಾಸ್ ಕನ್ನಡ’ 12ನೇ ಸೀಸನ್‌ನಲ್ಲಿ ಗಿಲ್ಲಿ ನಟ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಟರಾಜ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.
ಫೈನಲ್‌ನಲ್ಲಿ ಕರಾವಳಿ ಮೂಲದ, ಪ್ರಸ್ತುತ ಮುಂಬೈಯಲ್ಲಿ ವಾಸವಿರುವ ರಕ್ಷಿತಾ ಶೆಟ್ಟಿ ಅವರು ರನ್ನರ್‌ಅಪ್ ಪ್ರಶಸ್ತಿಗೆ ಪಾತ್ರರಾದರೆ, ಕನ್ನಡಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ಎರಡನೇ ರನ್ನರ್‌ಅಪ್ ಆಗಿದ್ದಾರೆ.
ವಿಜೇತರಾಗಿ ಗಿಲ್ಲಿ ನಟ ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಹಾಗೂ ಮಾರುತಿ ಕಂಪನಿಯ ಹೊಸ ಕಾರು ಲಭಿಸಿದೆ. ಇನ್ನು ಗಿಲ್ಲಿ ನಟ ಜಯಗಳಿಸಿದ ಹಿನ್ನೆಲೆ ಬೆಂಗಳೂರಿನ ಹೊರವಲಯದಲ್ಲಿರುವ ಬಿಗ್ ಬಾಸ್ ಸ್ಟುಡಿಯೋ ಎದುರು ಅಭಿಮಾನಿಗಳ ಭಾರೀ ಜಮಾವಣೆ ಕಂಡುಬಂದಿತು. ಜನಸ್ತೋಮ ನಿಯಂತ್ರಣಕ್ಕಾಗಿ ಎಸ್‌ಪಿ ಸ್ಥಳಕ್ಕೆ ಆಗಮಿಸಬೇಕಾದ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿದ ಬಗ್ಗೆ ವರದಿಯಾಗಿದೆ.







