ಬಿಗ್ ಬಾಸ್ 12| ಫಿನಾಲೆ ವಾರದಲ್ಲಿ ಪ್ರಬುದ್ಧತೆ ಮೆರೆದ ರಕ್ಷಿತಾ

ಸಮಗ್ರ ನ್ಯೂಸ್: ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದಲ್ಲಿ, ಸ್ಪರ್ಧಿ ರಕ್ಷಿತಾ ಶೆಟ್ಟಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೀನುಗಾರರಿಗೆ ವೇದಿಕೆ, ಕರಾವಳಿಯ ಹುಲಿವೇಷ ನೃತ್ಯ ಮತ್ತು ಕನ್ನಡ ನಾಟಕ ನೋಡುವ ಆಕೆಯ ಆಸೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

Ad Widget ... ..

ಸ್ಪರ್ಧಿಗಳು ಹೇಳುವ ಮೂರು ಬೇಡಿಕೆಗಳ ಪೈಕಿ ಒಂದನ್ನು ಈಡೇರಿಸೋದಾಗಿ ಬಿಗ್‌ಬಾಸ್ ವಚನ ನೀಡಿದ್ದಾರೆ. ಸೋಮವಾರದ ಸಂಚಿಕಯಲ್ಲಿ ರಘು, ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ ಮತ್ತು ಗಿಲ್ಲಿ ನಟ ಅವರ ಆಸೆಗಳನ್ನು ತೋರಿಸಲಾಗಿತ್ತು.

Ad Widget

ಈ ನಾಲ್ವರ ಪೈಕಿ ರಕ್ಷಿತಾ ಹೇಳಿದ ಮೂರು ಬೇಡಿಕೆಗಳಿಗೆ ಕರುನಾಡಿನ ಜನತೆ ಫಿದಾ ಆಗಿದ್ದಾರೆ. ಈ ಮೂರು ಬೇಡಿಕೆಗಳನ್ನು ಈಡೇರಿಸುವಲ್ಲಿ ಬಿಗ್‌ಬಾಸ್ ಹಿಂದೇಟು ಹಾಕಬಾರದು. ವಯಸ್ಸಿಗೆ ಮೀರಿದ ಈ ಆಸೆಗಳು ರಕ್ಷಿತಾ ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

1.ಬಿಗ್‌ಬಾಸ್ ಮನೆಗೆ ಕಡಲಿನ ಮಕ್ಕಳಾದ ಮೀನುಗಾರರು ಬರಬೇಕು. ಸಮುದ್ರಕ್ಕಿಳಿಯುವ ಮೀನುಗಾರರು ಎದುರಿಸುವ ಸವಾಲುಗಳ ಬಗ್ಗೆ ಎಲ್ಲರ ಮುಂದೆ ಮಾತನಾಡಲು ಅವಕಾಶ ನೀಡಬೇಕು. ಈ ಮೂಲಕ ಮೀನುಗಾರರಿಗೆ ವೇದಿಕೆ ಕಲ್ಪಿಸಲು ರಕ್ಷಿತಾ ಶೆಟ್ಟಿ ಪ್ರಯತ್ನಿಸುತ್ತಿದ್ದಾರೆ.

2.ಕರಾವಳಿ ಭಾಗದ ಹುಲಿವೇಷಧಾರಿಗಳ ನೃತ್ಯ ತುಂಬಾನೇ ಜನಪ್ರಿಯವಾಗಿದೆ. ಬಿಗ್‌ಬಾಸ್ ಮನೆಗೆ ಹುಲಿ ನೃತ್ಯದ ಕಲಾವಿದರು ಬರಬೇಕು ಮತ್ತು ಅವರೊಂದಿಗೆ ನಾನು ಡ್ಯಾನ್ಸ್ ಮಾಡಬೇಕು ಎಂದು ರಕ್ಷಿತಾ ಕೇಳಿಕೊಂಡಿದ್ದಾರೆ.

ಮುಂಬೈನಲ್ಲಿ ಹುಟ್ಟಿ ಬೆಳೆದ ಕಾರಣ ಆರಂಭದಿಂದಲೂ ರಕ್ಷಿತಾ ಶೆಟ್ಟಿ ಭಾಷೆ ತೊಡಕು ಅನುಭವಿಸಿದ್ದಾರೆ. ಇದೇ ವಿಷಯವಾಗಿ ಹಲವರ ಕೋಪಕ್ಕೂ ರಕ್ಷಿತಾ ಶೆಟ್ಟಿ ಗುರಿಯಾಗಿದ್ದರು. ಕಳೆದ ಮೂರು ತಿಂಗಳಲ್ಲಿ ರಕ್ಷಿತಾ ಅವರ ಕನ್ನಡ
ಸುಧಾರಣೆ ಆಗಿದ್ದನ್ನು ವೀಕ್ಷಕರು ಗಮನಿಸಿದ್ದಾರೆ.

3ನೇ ಬೇಡಿಕೆಯಾಗಿ ತಾನು ಈ ಬಿಗ್‌ಬಾಸ್ ಮನೆಯಲ್ಲಿ ಕನ್ನಡ ನಾಟಕ ನೋಡಬೇಕೆಂದು ಹೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *