ಧರ್ಮಸ್ಥಳ ಬುರುಡೆ ಪ್ರಕರಣ| ಮಾಸ್ಕ್ ಮ್ಯಾನ್ ಚಿನ್ನಯ್ಯ ಬಿಡುಗಡೆ

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಾಸ್ಕ್ ಮ್ಯಾನ್ ಎಂದೇ ಪ್ರಖ್ಯಾತನಾಗಿದ್ದ ಸಿ.ಎನ್. ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

Ad Widget ... ..

ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದ್ದರೂ, ಬಿಡುಗಡೆಯ ಭಾಗ್ಯವಿಲ್ಲದೆ ಜೈಲಿನಲ್ಲಿಯೇ ಉಳಿಯುವಂತಾಗಿತ್ತು. ಇದರಿಂದ ಮಂಕಾಗಿದ್ದ ಚಿನ್ನಯ್ಯ ಇದೀಗ ಶಿವಮೊಗ್ಗ ಸೆಂಟ್ರಲ್ ಜೈಲಿನಿಂದ ಚಿನ್ನಯ್ಯ ರಿಲೀಸ್ ಆಗಿದ್ದಾನೆ.

Ad Widget

ನಿನ್ನೆ ಚಿನ್ನಯ್ಯ ಪತ್ನಿ ಮಲ್ಲಿಕಾ ಒಂದು ಲಕ್ಷ ಬಾಂಡ್ ಕೊಟ್ಟಿದ್ದು, ಜೊತೆಗೆ ಇಬ್ಬರು ಜಾಮೀನುದಾರರು ಮತ್ತು ಒಬ್ಬರ ಶ್ಯೂರಿಟಿ ಕೊಡಿಸಿದ್ದಾರೆ. ಬಳಿಕ ಕೋರ್ಟ್, ಡಿಸೆಂಬರ್ 17 ರಂದು ಚಿನ್ನಯ್ಯನ ಬಿಡುಗಡೆಗೆ ಆದೇಶ ಹೊರಡಿಸಿದೆ.

ಜಾಮೀನು ಷರತ್ತು ಪೂರೈಸಿದ 23 ದಿನಗಳ ನಂತರ ಚಿನ್ನಯ್ಯ ರಿಲೀಸ್ ಆಗಿದ್ದಾನೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಿನ್ನಯ್ಯ ಪತ್ನಿ ಮಲ್ಲಿಕಾ ಶೂರಿಟಿ ನೀಡಿದ್ದಾರೆ. 4 ತಿಂಗಳಿಂದ ಶಿವಮೊಗ್ಗ ಜೈಲಲ್ಲಿ ಇದ್ದರೂ. ಶೂರಿಟಿ ಪೂರೈಸಿದ ನಂತರ ಚಿನ್ನಯ್ಯ ಇದೀಗ ಬಿಡುಗಡೆ ಆಗಿದ್ದಾನೆ. ಪತ್ನಿ ಮಲ್ಲಿಕಾ, ಸಹೋದರ ರತ್ನಾ ಜೊತೆಗೆ ಸಿ.ಎಸ್ ಚಿನ್ನಯ್ಯ ಮನೆಗೆ ತೆರಳಿದ್ದಾನೆ.

Leave a Comment

Your email address will not be published. Required fields are marked *