ಪ.ಪೂ ಉಪನ್ಯಾಸಕರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಮಧು ಬಂಗಾರಪ್ಪ

ಸಮಗ್ರ ನ್ಯೂಸ್: ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕಾರ್ಯಭಾರವನ್ನು ಕಡಿಮೆ ಮಾಡಲು ಹಾಲಿ ಇರುವ ನಿಯಮವನ್ನು ಹಿಂಪಡೆಯುವ ಬಗ್ಗೆ ಸದಸ್ಯರ ಜೊತೆ ಚರ್ಚೆ ಮಾಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪನವರು ವಿಧಾನಪರಿಷತ್‍ನಲ್ಲಿ ಹೇಳಿದ್ದಾರೆ.

Ad Widget ... ..

ಸದಸ್ಯ ಬೋಜೇಗೌಡರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಸಿಎಸ್?ಆರ್ ನಿಯಮಗಳ ಪ್ರಕಾರ ಯಾವುದೇ ನಿಯಮಗಳಲ್ಲಿ ಸರ್ಕಾರ ನಿಗದಿಪಡಿಸಿದ ಕಾರ್ಯಭಾರ ಮತ್ತು ಕರ್ತವ್ಯದ ಪ್ರಕಾರ ಕಾರ್ಯ ನಿರ್ವಹಿಸಬೇಕು. ಆದರೆ ಪ್ರಸ್ತುತ ಸರ್ಕಾರಿ/ಅನುದಾನಿತ/ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಹೊರೆಯಾಗುತ್ತದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಬೇಕೆಂದರೆ ಹಾಲಿ ಇರುವ ನಿಯಮವನ್ನು ಹಿಂಪಡೆಯಬೇಕು ಎಂದು ತಿಳಿಸಿದರು.

Ad Widget

2023 ರಲ್ಲಿ ನಿಯಮವನ್ನು ಜಾರಿ ಮಾಡಲಾಗಿತ್ತು. ಹೀಗಾಗಿ ಸಮಸ್ಯೆಯಾಗಿದೆ. ಇದನ್ನು ಹಿಂಪಡೆಯಬೇಕೆಂದರೆ ಸದಸ್ಯರ ಜೊತೆ ಚರ್ಚೆ ಮಾಡಬೇಕು. ವಾರದಲ್ಲಿ ಪ್ರಾಯೋಗಿಕವಲ್ಲದ ವಿಷಯಗಳ ಉಪನ್ಯಾಸಕರಿಗೆ ವಾರದಲ್ಲಿ 20 ಗಂಟೆ ಹಾಗೂ ಪ್ರಾಯೋಗಿಕ ವಿಷಯಗಳ ಉಪನ್ಯಾಸಕರಿಗೆ 24 ಗಂಟೆ ನಿಗದಿಪಡಿಸಲಾಗಿದೆ. ಇದರ ಬಗ್ಗೆ ಅಧಿಕಾರಿಗಳ ಜೊತೆಯೂ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

Leave a Comment

Your email address will not be published. Required fields are marked *