ಕಾಂಪ್ಕೋ ಅಧ್ಯಕ್ಷರಾಗಿ ಎಸ್.ಆರ್ ಸತೀಶ್ಚಂದ್ರ ಅವಿರೋಧ ಆಯ್ಕೆ

ಸಮಗ್ರ ನ್ಯೂಸ್: ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಯಾದ ಕ್ಯಾಂಪ್ಕೊ 2025-30ರ ಅವಧಿಗೆ ಅಧ್ಯಕ್ಷರಾಗಿ ಸತೀಶ್ಚಂದ್ರ ಎಸ್‌.ಆರ್‌, ಉಪಾಧ್ಯಕ್ಷರಾಗಿ ಪದ್ಮರಾಜ್ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾದರು.

Ad Widget ... ..

ಬಂಟ್ವಾಳ ತಾಲ್ಲೂಕಿನ ಪುಣಚ ಗ್ರಾಮ ಸತೀಶ್ಚಂದ್ರ, 2015-20ರ ಅವಧಿಯಲ್ಲಿ ಕ್ಯಾಂಪ್ಕೊ ಅಧ್ಯಕ್ಷರಾಗಿ ಅನುಭವ ಹೊಂದಿರುವವರು. ಹಿಂದಿನ ಅವಧಿಯಲ್ಲಿ ಸಂಸ್ಥೆಯ ನಿರ್ದೇಶಕರಾಗಿದ್ದರು.

Ad Widget

ಕಾಸರಗೋಡಿನ ಪಟ್ಟಾಜೆ ಬದಿಯಡ್ಕದ ಪ್ರಗತಿಪರ ಕೃಷಿಕ ಪದ್ಮರಾಜ್ ಪಟ್ಟಾಜೆ ಸತತ ಎರಡು ಅವಧಿಗೆ ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಆಯ್ಕೆಯು ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ಅಡಿಯಲ್ಲಿ ಬರುವ ಸಹಕಾರಿ ಚುನಾವಣಾ ಪ್ರಾಧಿಕಾರದ ಅನುಮೋದನೆ ಪಡೆದ ಮೇಲೆ ಅಧಿಕೃತವಾಗಿ ಘೋಷಣೆಯಾಗುತ್ತದೆ ಎಂದು ಕ್ಯಾಂಪ್ಕೊ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *