ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಹಾಡಹಾಗಲೇ ಕೋಟಿ ಕೋಟಿ ದರೋಡೆ ಪ್ರಕರಣದಲ್ಲಿ ಇದೀಗ ಹಲವು ಅನುಮಾನಗಳು ವ್ಯಕ್ತವಾಗಿದೆ. ಹಣ ತುಂಬಿಕೊಂಡಿದ್ದ ಸಿಎಂಎಸ್ ಚಾಲಕನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ 7 ಕೋಟಿ 11ಲಕ್ಷ ರಾಬರಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಶಂಕಿತರ ಫೋಟೋ ಬಿಡುಗಡೆ ಮಾಡಿದೆ.
ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳ ಪತ್ತೆಗೆ ಖಾಕಿ ಹೈ ಅಲರ್ಟ್ ಆಗಿದ್ದು, ಪ್ರಾಥಮಿಕ ಮಾಹಿತಿ ಅನುನಾರ ಒಟ್ಟು 6 ಮಂದಿ ಆರೋಪಿಗಳ ಪೋಟೋ ಬಿಡುಗಡೆ ಮಾಡಿದೆ. ಹಳೆ ಆರೋಪಿಗಳು ಹಾಗು ಕೆಲ ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದ್ದು, ನಾಕ ಬಂದಿಯಲ್ಲಿ ಈ ಫೋಟೋ ದಲ್ಲಿರೋ ವ್ಯಕ್ತಿಗಳ ಫೋಟೋ ಮ್ಯಾಚ್ ಮಾಡುವಂತೆ ಎಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಬೆಚ್ಚಿಬೀಳಿಸುವ ದರೋಡೆ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ನಾಕಾಬಂಧಿ ಹಾಕಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಮತ್ತು ಡಿಸಿಪಿಯಿಂದ ತನಿಖೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಸಿಎಂಎಸ್ ಸಿಬ್ಬಂದಿಯ ಮೇಲೂ ಅನುಮಾನವಿದೆ. ಘಟನೆ ನಡೆದ ಬಳಿಕ ತಡವಾಗಿ ಮಾಹಿತಿ ನೀಡಿದ್ದಾರೆ. ಅವ್ರ ಬಳಿ ಇದ್ದ ಗನ್ ಯಾಕೆ ಬಳಕೆ ಮಾಡಿಲ್ಲ ಎನ್ನುವ ಪ್ರಶ್ನೆ ಇದೆ. ಈ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಸದ್ಯ ಚಾಲಕ, ಇಬ್ಬರು ಗನ್ ಮೆನ್ ಗಳು ಹಾಗೂ ಓರ್ವ ಹಣ ಡೆಪಾಸಿಟ್ ಮಾಡುವ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಸಿಬ್ಬಂದಿಯನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂದಿಸ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸಿಂಮತ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಪ್ರತ್ಯಕ್ಷದರ್ಶಿ ಪ್ರತಿಮೆ ವ್ಯಾಪಾರಿ ಸಂಜಯ್ ಹೇಳಿಕೆ ಪ್ರಕಾರ, Zen ಕಾರ್ ನಲ್ಲಿ ಮೊದಲಿಗೆ ಮೂರು ಜನರು ಬಂದಿದ್ದರು. ಎಟಿಮ್ ವಾಹನ ಅಡ್ಡಗಟ್ಟಿದ್ದರು. ಎಟಿಮ್ ವಾಹನದಲ್ಲಿ ಇದ್ದವರ ಜೊತೆ ಮಾತಾಡ್ತಿದ್ದರು. zen ಕಾರಿನಿಂದ ಮೂವರು ಇಳಿದರು. ಅಶೋಕ ಪಿಲ್ಲರ್ ಮಾರ್ಗವಾಗಿ ಎಟಿಮ್ ವೆಹಿಕಲ್ ಬರ್ತಿತ್ತು. ಎಟಿಎಂ ವಾಹನ zen ಕಾರ್ ಫಾಲೋ ಮಾಡಿಕೊಂಡು ಹೋಯ್ತು ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಪೂರ್ವ(ಇಂದಿರಾನಗರ) RTO ಕಚೇರಿಯಲ್ಲಿ ನೊಂದಣಿ. ಜನವರಿ 2018 ರಲ್ಲಿ ಈ ಕಾರು ನೊಂದಣಿಯಾಗಿದೆ. ದರೋಡೆ ಮಾಡೋಕೆ ಅಂತಾನೆ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಲಾಗಿದೆ. ದರೋಡೆ ಮಾಡಿ ಪರಾರಿಯಾಗುವಾಗ ಸಿಕ್ಕಿಕೊಳ್ಳಬಾರದೆಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾರೆ. ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ಅನ್ನು ಇನ್ನೋವಾ ಕಾರಿಗೆ ಬಳಕೆ ಮಾಡಲಾಗಿದೆ. ಪಿ.ಬಿ. ಗಂಗಾಧರನ್ ಅವರ ಹೆಸರಿನಲ್ಲಿ ಕಾರು ನೊಂದಣಿಯಾಗಿದೆ. ಬೆಂಗಳೂರಿನ ತಿಪ್ಪಸಂದ್ರ ವಿಳಾಸದಲ್ಲಿ ನೊಂದಣಿಯಾಗಿರುವ ಕಾರನ್ನು ಗರುಡಾ ಆಟೋ ಕ್ರಾಫ್ಟ್ ಲಿಮಿಟೆಡ್ ಶೋರೂಂನಿಂದ ಖರೀದಿ ಮಾಡಲಾಗಿದೆ. ಸ್ವಿಫ್ಟ್ VDI ಮಾಡೆಲ್ ನ ಸ್ವಿಫ್ಟ್ ಕಾರು. ಸಿಲ್ಕೀ ಬಣ್ಣದ ಭಾರತ್ ಸ್ಟೇಜ್ 4 ರ ಕಾರು. ಕಾರ್ ಮೇಲೆ ಗೌರ್ಮೆಂಟ್ ಆಫ್ ಇಂಡಿಯಾ ಅಂತ ಬರೆಯಲಾಗಿದೆ.






