ಸಮಗ್ರ ನ್ಯೂಸ್: ಹೆಂಡತಿಯ ಪಣವಾಗಿಟ್ಟ ಗಂಡ ಜೂಜಿನಲ್ಲಿ ಸೋತಿದ್ದರಿಂದ ಮಾವ, ಮೈದುನ ಸೇರಿ 8 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಆಧುನಿಕ ಮಹಾಭಾರತದ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಮೀರತ್ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬಾತನನ್ನು ಮದುವೆಯಾಗಿದ್ದ ಮಹಿಳೆಗೆ ಪತಿ ಮತ್ತು ಅತ್ತೆ, ಮಾವ ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದ್ದರು.
ಡ್ಯಾನಿಶ್ಗೆ ಮದ್ಯಪಾನ ಹಾಗೂ ಜೂಜಿನ ಚಟವಿತ್ತು. ಕುಡಿದು ಬಂದು ಆಕೆಯನ್ನು ಹೊಡೆಯುತ್ತಿದ್ದ. ಜೂಜಿನ ವೇಳೆ ಪತ್ನಿಯನ್ನೇ ಅಡವಿಟ್ಟ ಡ್ಯಾನಿಶ್ ಸೋಲುಂಡಿದ್ದಾನೆ. ಜೂಜಿನಲ್ಲಿ ಸೋತ ಬಳಿಕ ಪರ ಪುರುಷರೊಂದಿಗೆ ಮಲಗುವಂತೆ ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದಾಗ ಸ್ವತಹ ಮಾವ, ಗಂಡನ ಅಣ್ಣ ಉಮೇಶ್ ಗುಪ್ತಾ, ಮೋನು ಮತ್ತು ಅನ್ಶುಲ್ ಸೇರಿ 8 ಮಂದಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಗಂಡನ ಅಣ್ಣ ಶಾಹಿದ್ ಹಾಗೂ ಅತ್ತಿಗೆಯ ಪತಿ ಶೌಕೀನ್ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ. ತನ್ನ ಮಾವ ಯಾಮಿನ್ ಅತ್ಯಾಚಾರ ಎಸಗಿ ನೀನು ವರದಕ್ಷಿಣೆ ತರಲಿಲ್ಲ, ಆದ್ದರಿಂದ ನಾವು ಹೇಳುವುದೆಲ್ಲವನ್ನೂ ನೀನು ಪಾಲಿಸಬೇಕು. ನಮ್ಮನ್ನು ಸಂತೋಷ ಪಡಿಸಬೇಕೆಂದು ಹೇಳಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಗಂಡ ಮತ್ತು ಮನೆಯವರು ತಾನು ಗರ್ಭಿಣಿ ಆದಾಗ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದಾರೆ. ಆಯಸಿಡ್ ಸುರಿದು, ನನ್ನನ್ನು ಕೊಲ್ಲುವ ಉದ್ದೇಶದಿಂದ ನದಿಗೆ ಎಸೆದಿದ್ದರು. ದಾರಿಹೋಕರು ನನ್ನನ್ನು ರಕ್ಷಿಸಿದ್ದಾರೆ, ಈಗ ಈ ಪ್ರಕರಣ ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಲಾಗುತ್ತಿದೆ ಎಂದೂ ಸಂತ್ರಸ್ತೆ ತಿಳಿಸಿದ್ದಾರೆ.
ಆಕೆ ಬಾಗ್ಪತ್ನಲ್ಲಿರುವ ಎಸ್ಪಿ ಕಚೇರಿಯನ್ನು ಸಂಪರ್ಕಿಸಿದ್ದು, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಎಕ್ಸ್ ಅಧಿಕೃತ ಪೋಸ್ಟ್ನಲ್ಲಿ ತಿಳಿಸಿದ್ದಾರೆ.






