ಸಮಗ್ರ ನ್ಯೂಸ್: ಚಿನ್ನದ ಬೆಲೆಯಲ್ಲಿ ಮತ್ಎ ಏರಿಕೆಯಾಗಿದೆ. ಕೇವಲ 24 ಗಂಟೆಗಳಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹2,000ಕ್ಕೂ ಅಧಿಕ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ (ಅಪರಂಜಿ) 10 ಗ್ರಾಂ ಬೆಲೆ ಈಗ ₹1,25,850ಕ್ಕೆ ತಲುಪಿದೆ.
22 ಕ್ಯಾರಟ್ ಆಭರಣ ಚಿನ್ನದ ಬೆಲೆ ₹1,15,360 ಆಗಿದೆ. ಬೆಳ್ಳಿಯೂ ಹಿಂದೆ ಸರಿಯದೆ 1 ಕೆಜಿ ₹1,71,900ರವರೆಗೆ ಏರಿದೆ.
ವಿವಿಧ ಕಾರಣಗಳಿಗೆ ಚಿನ್ನದ ಬೆಲೆಯಲ್ಲಿ ಏರಿಳಿತವಾಗುವುದು ಮುಂದುವರಿದಿದೆ. ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ಘಟನೆಯಿಂದಾಗಿ ದೆಹಲಿಯ ಚಾಂದಿನಿ ಚೌಕ್ ಭಾಗದಲ್ಲಿ ಭಾರೀ ನಷ್ಟವಾಗಿದೆ. ಈ ಭಾಗದಲ್ಲಿ ಅಂದಾಜು ಪ್ರತಿ ದಿನ ಸುಮಾರು 500 ಕೋಟಿ ರೂಪಾಯಿಯ ವರೆಗೆ ವ್ಯವಹಾರವಾಗುತ್ತದೆ. ಆದರೆ ಬಾಂಬ್ ಸ್ಫೋಟದ ಬೆನ್ನಲ್ಲೇ ದೆಹಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಅಂದಾಜು 350ರಿಂದ 400 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಹೇಳಲಾಗಿದೆ. ದೆಹಲಿ ಬಾಂಬ್ ಸ್ಫೋಟವು ಕೇವಲ ದೆಹಲಿಯ ಮೇಲೆ ಮಾತ್ರವಲ್ಲ ಷೇರುಮಾರುಕಟ್ಟೆ, ಚಿನ್ನದ ಬೆಲೆ ಹಾಗೂ ದೇಶದ ವಿವಿಧ ಪ್ರದೇಶಗಳಲ್ಲಿ ವ್ಯಾಪಾರ ಹಾಗೂ ವ್ಯವಹಾರದ ಮೇಲೂ ಅಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ನ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 11,715 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,17,150 ರೂಪಾಯಿ ಆಗಿದೆ. ನವೆಂಬರ್ 12ಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 210 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆಯು 2,100 ರೂಪಾಯಿ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 12,780 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,27,800 ರೂಪಾಯಿ ಆಗಿದೆ. ನವೆಂಬರ್ 12ಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 229 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 2,290 ರೂಪಾಯಿ ಹೆಚ್ಚಳವಾಗಿದೆ.
ಬೆಳ್ಳಿ ಬೆಲೆ: ಚಿನ್ನದೊಂದಿಗೆ ಬೆಳ್ಳಿಯ ಬೆಲೆ ಸಹ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂ 172 ರೂಪಾಯಿ ಆಗಿದೆ. ಅಲ್ಲದೇ 1 ಕೆ.ಜಿ ಬೆಳ್ಳಿ ಬೆಲೆಯು 1,72,000 ಸಾವಿರ ರೂಪಾಯಿ ಆಗಿದೆ. ಒಂದು ಗ್ರಾಂ ಬೆಳ್ಳಿ ಬೆಲೆಯು 10 ರೂಪಾಯಿ ಹಾಗೂ ಒಂದು ಕೆ.ಜಿಗೆ 10,000 ಸಾವಿರ ರೂಪಾಯಿ ಹೆಚ್ಚಳವಾಗಿದೆ.







