ಸಲಿಂಗ ಕಾಮಕ್ಕೆ ಅಡ್ಡಿಯಾದ ಮಗುವನ್ನೇ ಕೊಂದ ತಾಯಿ

ಸಮಗ್ರ ನ್ಯೂಸ್: ಇಬ್ಬರು ಯುವತಿಯರು ತಮ್ಮ ಸಲಿಂಗ ಕಾಮದಾಟಕ್ಕೆ ಮಗು ಅಡ್ಡಿಯಾದೀತೆಂದು ಅದನ್ನು ಕೊಂದು ಹಾಕಿರುವ ಘಟನೆ ತಮಿಳುನಾಡು ಗಡಿ ತಾಲ್ಲೂಕಾದ ಕೆಳಮಂಗಳದಲ್ಲಿ ನಡೆದಿದೆ. ಈ ಕೃತ್ಯವು ಇವರ ನಡುವೆ ನಡೆದ ಮೊಬೈಲ್‌ ಚಾಟ್‌ ಮೂಲಕ ಹೊರಬಿದ್ದಿದೆ.

Ad Widget ... ..

ಚಿನ್ನಟ್ಟಿ ನಿವಾಸಿಗಳಾದ ಭಾರತಿ (26) ಮತ್ತು ಸುಮಿತ್ರಾ (22) ಇಬ್ಬರೂ ಪರಸ್ಪರ ಸಂಬಂಧ ಹೊಂದಿದ್ದರು. ಭಾರತಿಗೆ ಸುರೇಶ್‌ ಎಂಬಾತನೊಡೆನ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿತ್ತು. ಸುರೇಶ್‌ ಮನೆಯಲ್ಲಿ ಇಲ್ಲದಾಗ ಇಬ್ಬರ ಕಾಮದಾಟ ನಡೆಯುತ್ತಿತ್ತು. ಇಬ್ಬರೂ ತಮ್ಮ ಸಲಿಂಗದಾಟದ ವಿಡಿಯೋ ಹಾಗೂ ಫೋಟೋಗಳನ್ನು ಮೊಬೈಲ್‌ ನಲ್ಲಿ ಚಿತ್ರೀಕರಿಸಿಕೊಂಡು ಸಂಭ್ರಮಿಸುತ್ತಿದ್ದರು. ಭಾರತಿ ತನ್ನ ದೇಹದ ಮೇಲೆ ಸುನಿ ಎಂದು ಹಚ್ಚೆ ಸಹ ಹಾಕಿಸಿಕೊಂಡಿದ್ದಳು.

Ad Widget

ಕೊನೆಯ ಮಗು ಧ್ರುವಗೆ ಐದು ತಿಂಗಳಾಗಿದ್ದಾಗ ಸುನಿ ಈ ಬಗ್ಗೆ ಭಾರತಿ ಜೊತೆ ಜಗಳವಾಡಿದ್ದಳು. ತನ್ನಿಂದ ಮಗುವಿಗಾಗಿ ದೂರಾಗುತ್ತಿದ್ದೀಯಾ ಎಂದು ದೂರಿದ್ದಳು. ಈ ಮಗುವೇ ನಮ್ಮಿಬ್ಬರನ್ನು ದೂರ ಮಾಡುತ್ತಿದೆ ಎಂದು ಬಗೆದ ಜೋಡಿಗಳು ಮಗುವನ್ನು ಹತ್ಯೆಗೈಯಲು ನಿರ್ಧರಿಸಿದ್ದರು. ಬಳಿಕ ಮಗುವನ್ನು ಭಾರತಿ ಉಸಿರುಗಟ್ಟಿಸಿ ಕೊಲೆಗೈದು, ಹಾಲು ಕುಡಿಯುವಾಗ ನೆತ್ತಿಗೇರಿ ಸಾವನ್ನಪ್ಪಿದೆ ಎಂದು ಕಥೆ ಕಟ್ಟಿದ್ದಳು. ಬಳಿಕ ಮಗುವಿನ ಅಂತ್ಯಸಂಸ್ಕಾರ ಸಹ ನೆರವೇರಿತ್ತು.

ಇದೇ ವೇಳೆ ಭಾರತಿಯ ಪತಿ ಸುರೇಶ್‌ ಆಕಸ್ಮಿಕವಾಗಿ ಭಾರತಿಯ ಮೊಬೈಲ್‌ ಮೆಸೇಜ್‌ ಗಳನ್ನು ಪರಿಶೀಲಿಸಿದಾಗ ಕೊಲೆಯ ಸಂಚು ಬಯಲಿಗೆ ಬಂದಿತ್ತು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ಕೊಡುವುದಾಗಿ ಸುರೇಶ್‌ ಬೆದರಿಸಿದ್ದ.

ಒಂಟಿಯಾಗಿ ನಮಗೆ ತೊಂದರೆ ಕೊಡುತ್ತಿರುವ ಸುಮಿತ್ರಾ ನಿಮ್ಮ ಮಗುವನ್ನು ಸಾಯಿಸಿ ಎಂದು ಸುಮಿತ್ರಾ ವಾಟ್ಸಾಪ್ ನಲ್ಲಿ ಧ್ವನಿ ಸಂದೇಶ ಕಳುಹಿಸಿದ್ದು, ಭಾರತಿ ಕೂಡ ಬಾಯಿ ಮುಚ್ಚಿಕೊಂಡು ಮಗುವನ್ನು ಸಾಯಿಸಿದ್ದೇನೆ ಎಂದು ವಾಟ್ಸಾಪ್‌ನಲ್ಲಿ ಉತ್ತರಿಸಿದ್ದಲ್ಲದೆ, ಮಗುವಿನ ಸಾವಿನ ಫೋಟೋವನ್ನು ಹಂಚಿಕೊಂಡಿದ್ದು, ಮೊಬೈಲ್‌ ನಲ್ಲಿ ರೆಕಾರ್ಡ್‌ ಆಗಿತ್ತು.

ಮಗುವಿನ ಹತ್ಯೆಯ ಮಾಹಿತಿ ಪತಿಗೆ ತಿಳಿದಾಗ ಪತ್ನಿ ತಲೆಮರೆಸಿಕೊಂಡಿದ್ದಳು . ಮಗನನ್ನು ಕೊಂದ ಪತ್ನಿಯ ವಿರುದ್ಧ ಕೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ ಸುರೇಶ್, ಪೊಲೀಸ್ ಠಾಣೆಗೆ ತೆರಳಿದ ಪತಿಯನ್ನು ಸಂಬಂಧಿಕರೊಬ್ಬರ ಫೋನ್‌ನಲ್ಲಿ ಸಂಪರ್ಕಿಸಿದ್ದರು. ಏನಾದ್ರೂ ತಪ್ಪಾಗಿದ್ದರೆ, ಏನು ಮಾಡಿದ್ರೂ ಬಾ, ಒಪ್ಪಿಕೋ ಕ್ಷಮಿಸುತ್ತೇನೆ ಎಂದು ಪುಸಲಾಯಿಸಿ ಏನಾಯ್ತು ಅಂತ ಪತಿ ಕೇಳಿದಾಗ ಹೆಂಡತಿ ತಡಬಡಾಯಿಸಿ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ತಬ್ಬಿಬ್ಬಾದ ಸುರೇಶ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಸಲಿಂಗಕಾಮಿಗಳು ಭಾರತಿ-ಸುಮಿತ್ರಾ ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇಂದು ದೆಂಕಣಿಕೋಟದ ವಟಾಸಿಯಾರ್ ಸನ್ನಿಧಿಯಲ್ಲಿ ಸಮಾಧಿಯಾಗಿದ್ದ ಮಗುವನ್ನು ವೈದ್ಯಕೀಯ ತಂಡ ಹೊರತೆಗೆದು, ದೇಹದ ಅಂಗಾಂಗಗಳನ್ನು ಪರೀಕ್ಷಿಸಿ ಅಲ್ಲಿಯೇ ಮರು ಅಂತ್ಯಸಂಸ್ಕಾರ ಮಾಡಿದೆ. ಕೆಲಮಂಗಳಂ ತಹಶೀಲ್ಡಾರ್‌ ಗಂಗೈ ರವರ ಸಮ್ಮುಖದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದೆ.

Leave a Comment

Your email address will not be published. Required fields are marked *