ಸುಬ್ರಹ್ಮಣ್ಯ: ‘ಅಧಿಕಾರಕ್ಕೆ ಪೈಪೋಟಿ ಆಡಳಿತದಲ್ಲಿ ಗ್ರಹಣ’ – ವಿ.ವೈ ವಿಜಯೇಂದ್ರ

ಸಮಗ್ರ ನ್ಯೂಸ್: ”ಕಳೆದ ತಿಂಗಳಿನಿಂದ ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಬಹಿರಂಗವಾಗಿ ಪೈಪೋಟಿ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಸೇರಿ ಏಳೆಂಟು ‌ಹಿರಿಯ ಸಚಿವರು ಮುಖ್ಯಮಂತ್ರಿಯಾಗಲು ಆಸೆ
ವ್ಯಕ್ತಪಡಿಸುತ್ತಿದ್ದಾರೆ‌. ಇದರ ಪರಿಣಾಮ ಆಡಳಿತದ ಮೇಲೂ ಬೀಳುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ‌. ವಿಜಯೇಂದ್ರ ಹೇಳಿದರು.

Ad Widget ... ..

ಭಾನುವಾರ ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನವೆಂಬರ್ ಕ್ರಾಂತಿ ಎಂದು ಬಿಜೆಪಿಯವರು ಹೇಳಿಲ್ಲ. ಆಡಳಿತ ಪಕ್ಷದ ಸಚಿವರೇ ಹೇಳಿದ್ದು’ ಎಂದ ಅವರು ‘ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದೆ ರೈತರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ನಾಡಿನ ಜನರ ಪಾಲಿಗೆ ಶಾಪವಾಗಿದೆ’ ಎಂದರು.

Ad Widget

‘ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಪೂರ್ವ ತಯಾರಿ ಪ್ರಾರಂಭವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ತಯಾರಿಯನ್ನು ಸದ್ಯದಲ್ಲೇ ಆರಂಭಿಸಲಿದ್ದೇವೆ. ಮುಂದಿನ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಮುಂದಿನ ತಿಂಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಂದೋಲನ ನಡೆಸುವ ಬಗ್ಗೆ ರೂಪುರೇಷೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾ‌ಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಮುಖಂಡರಾದ ಮಾಜಿ ಶಾಸಕ ಎಸ್. ಅಂಗಾರ, ವೆಂಕಟ್ ವಳಲಂಬೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *