ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ| ಬೀದಿನಾಯಿ ಮೇಲೆ ಗ್ಯಾಂಗ್ ರೇಪ್

ಸಮಗ್ರ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ ಹೆಚ್ಚಾಗಿದ್ದು, ಇದೀಗ ಸರ್ಜಾಪುರ ಬಳಿ ಯುವಕರ ಗುಂಪೊಂದು ಬೀದಿ ನಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಟಿವಿ ದೃಶ್ಯ ಆಧರಿಸಿ ನಾಯಿಯನ್ನು ಪತ್ತೆ ಮಾಡಿದ್ದಾರೆ.

Ad Widget ... ..

ಬೆಂಗಳೂರಿನ ಬೆಳ್ಳಂದೂರು ಬಳಿಕ ಸರ್ಜಾಪುರದ ಕೊಡತಿ ಗ್ರಾಮದಲ್ಲಿ ಮಹಿಳೆಯೊಬ್ಬರು ಅ.15 ರಂದು ಎಂದಿನಂತೆ ಬೀದಿ ನಾಯಿಗಳಿಗೆ ಊಟ ಹಾಕಲು ಬಂದಾಗ ನಾಲ್ವರು ಯುವಕರು ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದರು.

Ad Widget

ರಸ್ತೆ ಬದಿ ಮಲಗಿದ್ದ ಹೆಣ್ಣು ನಾಯಿಯನ್ನು ದುಷ್ಕರ್ಮಿಗಳು ಹೊತ್ತೊಯ್ದ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ವರ್ತೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಹಿಳೆ ನೀಡಿದ ದೂರಿನನ್ವಯ ವ್ಯಾಪ್ತಿಯನ್ನು ಗಮನಿಸಿದಾಗ ಬೆಳ್ಳಂದೂರು ಪೊಲೀಸ್ ಠಾಣೆಗೆ ಸೇರಿತ್ತು ಹೀಗಾಗಿ ಅದನ್ನು ಬೆಳ್ಳಂದೂರು ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಸುಮಾರು 25 ಸಿಸಿಟಿವಿಯನ್ನು ಪರಿಶೀಲಿಸಲಾಗಿದೆ.

ಈ ವೇಳೆ ನಾಯಿ ಸಿಕ್ಕಿದ್ದು, ಸದ್ಯ ನಾಯಿಯ ವೆಜೈನಲ್ ಸ್ವಾಬ್ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಮೊದಲಿಗೆ ಅತ್ಯಾಚಾರ ಆಗಿದೆಯೇ.? ಇಲ್ಲವೇ.? ಅನ್ನೋದರ ಬಗ್ಗೆ ತನಿಖೆ ನಡೆಸಿ ರಿಪೋರ್ಟ್ ಬಂದ ಬಳಿಕ ಆರೋಪಿಗಳ ಪತ್ತೆಗೆ ಮುಂದಾಗಲಿದ್ದಾರೆ.

Leave a Comment

Your email address will not be published. Required fields are marked *