November 2025

ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ| ಕೋಲಾರದ ಐವರು ಮೃತ್ಯು

ಸಮಗ್ರ ನ್ಯೂಸ್: ಆಂಧ್ರಪ್ರದೇಶದ ಕೋಟೆಕಲ್ ಗ್ರಾಮದಲ್ಲಿ ಇಂದು(ನ.29) ಮುಂಜಾನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದ 5 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಂತ್ರಾಲಯದಿಂದ ರಾಘವೇಂದ್ರ ಸ್ವಾಮಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಮೃತರ ಪೈಕಿ ಇಬ್ಬರು ಮಕ್ಕಳಿದ್ದರು ಎಂದು ಹೇಳಲಾಗಿದ್ದು, ಚಾಲಕ ಮಾತ್ರ ಬದುಕುಳಿದಿರುವ ಬಗ್ಗೆ ತಿಳಿದು ಬಂದಿದೆ. ಆಂಧ್ರದ ಎಮ್ಮಿಗನೂರು ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಇಂದು ಮುಂಜಾನೆ 5 ಗಂಟೆಗೆ ಎರಡು ಕಾರುಗಳ […]

ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ| ಕೋಲಾರದ ಐವರು ಮೃತ್ಯು Read More »

ಸಿಎಂ ಕುರ್ಚಿಕದನಕ್ಕೆ ಬ್ರೇಕ್| ಜಂಟಿ ಸುದ್ದಿಗೋಷ್ಟಿಯಲ್ಲಿ ಭಾಗಿಯಾದ ಸಿದ್ದು, ಡಿಕೆಶಿ

ಸಮಗ್ರ ನ್ಯೂಸ್: ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಇಂದು ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದು, ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಡಿ.ಕೆ.ಶಿವಕುಮಾರ್ ಅವರು ಪೊನ್ನಣ್ಣ ನಾವು ಮೂವರು ಬ್ರೇಕ್ ಫಾಸ್ಟ್ ನಲ್ಲಿ ಭಾಗಿಯಾಗಿದ್ದೇವು. ಅಲ್ಲಿ ಏನೂ ಮಾತನಾಡಿಲ್ಲ. ಬ್ರೇಕ್ ಫಾಸ್ಟ್ ಚೆನ್ನಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಇಂದು ನಮ್ಮ ಮನೆಗೆ ಬಂದಿದ್ದರು. ಒಟ್ಟಿಗೆ ಬ್ರೇಕ್ ಫಾಸ್ಟ್ ಒಟ್ಟಿಗೆ ಮಾಡಿದ್ದೇವೆ. ಹೈಕಮಾಂಡ್

ಸಿಎಂ ಕುರ್ಚಿಕದನಕ್ಕೆ ಬ್ರೇಕ್| ಜಂಟಿ ಸುದ್ದಿಗೋಷ್ಟಿಯಲ್ಲಿ ಭಾಗಿಯಾದ ಸಿದ್ದು, ಡಿಕೆಶಿ Read More »

ಗೋವಾದಲ್ಲಿ ವಿಶ್ವದ ಅತೀದೊಡ್ಡ ಶ್ರೀರಾಮನ ಮೂರ್ತಿ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪ್ರತಿಷ್ಠಾಪನೆಗೊಂಡಿರುವ ಜಗತ್ತಿನ ಅತಿ ಎತ್ತರದ (77 ಅಡಿ) ಶ್ರೀರಾಮನ ಕಂಚಿನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಷ್ಟ್ರಕ್ಕೆ ಸಮರ್ಪಿಸಿದರು. “ದಕ್ಷಿಣದ ಅಯೋಧ್ಯೆ’ಯಾಗಿ ರೂಪುಗೊಳ್ಳುತ್ತಿರುವ ಪರ್ತಗಾಳಿ ಮಠದ ಬಿಲ್ಲಿನಾಕಾರದ “ಆದರ್ಶ ಧಾಮ್‌’ ಪ್ರದೇಶದಲ್ಲಿ ಆಕಾರ ಪಡೆದಿರುವ ಮೂರ್ತಿ ಶ್ರೀಮದ್‌ ವಿದ್ಯಾಧೀಶತೀರ್ಥ ಶ್ರೀಪಾದರ ಜತೆ ಅನಾವರಣಗೊಳಿಸಿದರು. ಶ್ರೀಮಠಕ್ಕೆ 550 ಸಂವತ್ಸರಗಳು ತುಂಬಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ “ಸಾರ್ಧ ಪಂಚ ಶತಮಾನೋತ್ಸವ’ ಕಾರ್ಯಕ್ರಮದ ನಿಮಿತ್ತ ಪ್ರಧಾನಿಯವರು ವಿಶೇಷ ಅಂಚೆ ಚೀಟಿ

ಗೋವಾದಲ್ಲಿ ವಿಶ್ವದ ಅತೀದೊಡ್ಡ ಶ್ರೀರಾಮನ ಮೂರ್ತಿ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ Read More »

ಇಂದು ಕೃಷ್ಣನಗರಿ ಉಡುಪಿಗೆ ಮೋದಿ ಭೇಟಿ

ಸಮಗ್ರ ನ್ಯೂಸ್: ಪರ್ಯಾಯ ಪುತ್ತಿಗೆಮಠ ಮತ್ತು ಶ್ರೀಕೃಷ್ಣಮಠಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಉಡುಪಿಗೆ ಬರಲಿದ್ದಾರೆ. 11.30ಕ್ಕೆ ಒಂದೂವರೆ ಕಿ.ಮೀ ರೋಡ್‌ ಶೋ ನಡೆಸಿದ ಬಳಿ ಶ್ರೀಕೃಷ್ಣಮಠಕ್ಕೆ ತೆರಳುವವರು. ನಂತರ ಅಲ್ಲಿ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಭೇಟಿಯ ಕಾರಣ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುವರ್ಣ ತೀರ್ಥ ಮಂಟಪದ ಶಿಖರ ಪ್ರತಿಷ್ಠೆ : ಶ್ರೀ ಕೃಷ್ಣಮಠದಲ್ಲಿ ಮೋದಿ ಅವರು ಅನಾವರಣಗೊಳಿಸಲಿರುವ ಸುವರ್ಣ

ಇಂದು ಕೃಷ್ಣನಗರಿ ಉಡುಪಿಗೆ ಮೋದಿ ಭೇಟಿ Read More »

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ಶ್ರೀ ನಿರ್ದೋಷಿ| ಕೋರ್ಟ್ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯರಿಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ A-1 ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೇಸ್​​​ನಲ್ಲಿ ಮುರುಘಾಶ್ರೀ ನಿರ್ದೋಷಿ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದು ಕೋರ್ಟ್​ ಇಂದು ತೀರ್ಪು ಪ್ರಕಟಿಸಿತು. ಎರಡನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ್‌ ಚನ್ನಬಸಪ್ಪ ಹಡಪದ ಅವರು ತೀರ್ಪು ಪ್ರಕಟಿಸಿದರು. ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ಶ್ರೀ ನಿರ್ದೋಷಿ| ಕೋರ್ಟ್ ಮಹತ್ವದ ತೀರ್ಪು Read More »

17 ವರ್ಷ ಕಳೆದರೂ ಮರೆಯಲಾಗದ ಕರಾಳ ದಿನ| ಮುಂಬೈ ದಾಳಿಯ ರಿವೈಂಡ್ ಸ್ಟೋರಿ…

ಸಮಗ್ರ ನ್ಯೂಸ್: ಭಾರತವನ್ನು ನಡುಗಿಸಿದ 26/11 ಮುಂಬೈ ಭಯೋತ್ಪಾದಕ ದಾಳಿಗೆ ಇಂದು 17 ವರ್ಷಗಳು. 2008ರ ನವೆಂಬರ್ 26ರಂದು ನಡೆದ ಈ ಕ್ರೂರ ಘಟನೆದಲ್ಲಿ ದೇಶ ಅನೇಕ ಅಮಾಯಕ ಪ್ರಾಣಗಳನ್ನು ಕಳೆದುಕೊಂಡಿತ್ತು. ಹುತಾತ್ಮ ಯೋಧರ ತ್ಯಾಗ, ನಾಗರಿಕರ ನೋವು, ಮತ್ತು ಉಗ್ರರು ಬೀರಿದ ಭೀತಿಯ ನೆನಪುಗಳು ಇಂದಿಗೂ ಭಾರತೀಯರ ಮನದಲ್ಲಿ ಆಳವಾಗಿ ಉಳಿದಿವೆ. ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ನುಗ್ಗಿದ ಲಷ್ಕರ್-ಇ-ತೊಯ್ಬಾ ಸಂಘಟನೆಯ 10 ಮಂದಿ ಉಗ್ರರು ಮುಂಬೈನ ತಾಜ್ ಹೋಟೆಲ್, ಛತ್ರಪತಿ ಶಿವಾಜಿ

17 ವರ್ಷ ಕಳೆದರೂ ಮರೆಯಲಾಗದ ಕರಾಳ ದಿನ| ಮುಂಬೈ ದಾಳಿಯ ರಿವೈಂಡ್ ಸ್ಟೋರಿ… Read More »

ದಕ್ಷಿಣ ಭಾರತಕ್ಕೆ ನಾಳೆ ಸೆನ್ಯಾರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ| ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಸಮಗ್ರ ನ್ಯೂಸ್: ಮುಂದಿನ 48 ಗಂಟೆಗಳಲ್ಲಿ ‘ಸೆನ್ಯಾರ್’ ಎಂಬ ಚಂಡಮಾರುತ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತವಾಗಿ ಬದಲಾಗಲಿದ್ದು, ಪರಿಣಾಮ ತಮಿಳುನಾಡು ಭಾಗದಲ್ಲಿ ಸಿಕ್ಕಾಪಟ್ಟೆ ಮಳೆಯಾಗಲಿದ್ದು, ನಮ್ಮ ರಾಜ್ಯದಲ್ಲೂ ಮಳೆ ಬೀಳಲಿದೆ. ಈ ಚಂಡಮಾರುತಕ್ಕೆ ಸೆನ್ಯಾರ್ ಚಂಡಮಾರುತ ಎಂದು ಹೆಸರಿಸಲಾಗಿದೆ. ಯುಎಇ ಈ ಹೆಸರನ್ನು ಇಟ್ಟಿದ್ದು, ಅದರ ಅರ್ಥ ‘ಸಿಂಹ’ ಎಂದಾಗಿದೆ. ನವೆಂಬರ್ 29 ಮತ್ತು 30ರ ನಡುವೆ ಈ ಚಂಡಮಾರುತವು ತಮಿಳುನಾಡಿನ ರಾಜಧಾನಿ ಚೆನ್ನೈನ

ದಕ್ಷಿಣ ಭಾರತಕ್ಕೆ ನಾಳೆ ಸೆನ್ಯಾರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ| ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ Read More »

ಉಡುಪಿ: ನ.28ರಂದು ಪ್ರಧಾನಿ ಭೇಟಿ ಹಿನ್ನಲೆ| ಜಿಲ್ಲೆಯ ಈ ಶಾಲೆಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ನ.28 ರಂದು ಉಡುಪಿಗೆ ಭೇಟಿ ನೀಡಲಿದ್ದು, ಅಂದು ಲಕ್ಷ ಕಂಠ ಗೀತ ಪಾರಾಯಣದಲ್ಲಿ ಭಾಗವಹಿಸಲಿರುವ ಕಾರಣದಿಂದ, ಮುಂಜಾಗ್ರತೆ ಕ್ರಮವಾಗಿ ಅಂದು ಉಡುಪಿ ಮತ್ತು ನಗರ ಮತ್ತು ಸುತ್ತಮುತ್ತಲ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ ಪ್ರಧಾಣಿ ಮೋದಿ ಭೇಟಿ ನೀಡಲಿದ್ದು, ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಉಡುಪಿಯಲ್ಲಿ ಬೃಹತ್‌ ರೋಡ್‌ ಶೋ ನಡೆಯಲಿದ್ದು, 30000 ಕ್ಕೂ ಅಧಿಕ ಮಂದಿ ಭಾಗವಹಿಸುವ ಸಾಧ್ಯತೆ

ಉಡುಪಿ: ನ.28ರಂದು ಪ್ರಧಾನಿ ಭೇಟಿ ಹಿನ್ನಲೆ| ಜಿಲ್ಲೆಯ ಈ ಶಾಲೆಗಳಿಗೆ ರಜೆ ಘೋಷಣೆ Read More »

ಕಲಬುರಗಿಯಲ್ಲಿ ಭೀಕರ ಅಪಘಾತ| ಹಿರಿಯ ಐಎಎಸ್ ಅಧಿಕಾರ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

ಸಮಗ್ರ ನ್ಯೂಸ್: ಭೀಕರ ಕಾರು ಅಪಘಾತದಲ್ಲಿ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಕಲಬುರಗಿಗೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್​​ ಬಳಿ ಶ್ವಾನ ಅಡ್ಡ ಬಂದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ಮಹಾಂತೇಶ್ ಬೀಳಗಿ, ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತಪಟ್ಟಿದ್ದಾರೆ

ಕಲಬುರಗಿಯಲ್ಲಿ ಭೀಕರ ಅಪಘಾತ| ಹಿರಿಯ ಐಎಎಸ್ ಅಧಿಕಾರ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು Read More »

ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ| ಮದ್ಯದಂಗಡಿ ಮುಚ್ಚಲು ಡಿಸಿ‌ ಆದೇಶ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಡಿಸೆಂಬರ್ 2 ರ ತನಕ ನಡೆಯಲಿದ್ದು, ನವೆಂಬರ್ 25 ರಂದು ಪಂಚಮಿ ರಥೋತ್ಸವ, ತೈಲಾಭ್ಯಂಜನ ಹಾಗೂ 26 ರಂದು ಚಂಪಾಷಷ್ಠಿ ಮಹಾರಥೋತ್ಸವವು ನಡೆಯಲಿದ್ದು, ಸುಮಾರು 50 ರಿಂದ 60 ಸಾವಿರ ಭಕ್ತಾಧಿಗಳು ಸೇರುವ ನಿರೀಕ್ಷೆ ಇದೆ. ಈ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿಕೊಂಡು ಕಿರುಕುಳ ಉಂಟುಮಾಡುವುದನ್ನು ತಪ್ಪಿಸಲು ಮತ್ತು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ನವೆಂಬರ್ 25 ರಂದು ಬೆಳಿಗ್ಗೆ

ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ| ಮದ್ಯದಂಗಡಿ ಮುಚ್ಚಲು ಡಿಸಿ‌ ಆದೇಶ Read More »