ಮುಧೋಳ‌ ಹೌಂಡ್, ರಾಮ್ ಪುರ ದೇಸೀ ತಳಿಯ 150 ಶ್ವಾನಗಳು ಬಿಎಸ್ಎಫ್ ಗೆ ಸೇರ್ಪಡೆ

ಸಮಗ್ರ ನ್ಯೂಸ್: : ಕರ್ನಾಟಕದ ಮುಧೋಳ ಹೌಂಡ್‌ ಹಾಗೂ ಉತ್ತರ ಪ್ರದೇಶದ ರಾಮ್‌ಪುರ ಎಂಬ ದೇಸಿ ತಳಿಯ 150 ನಾಯಿಗಳಿಗೆ ಇದೇ ಮೊದಲ ಬಾರಿಗೆ ಗಡಿ ರಕ್ಷಣಾ ಪಡೆ (BSF) ತರಬೇತಿ ನೀಡುತ್ತಿದೆ.

Ad Widget ... ..

ಭಾರತದ ಪೂರ್ವ ಹಾಗೂ ಪಶ್ಚಿಮ ಭಾಗದ ಗಡಿಗಳಲ್ಲಿ ಮತ್ತು ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳುವ ಅತ್ಯಂತ ಅಪಾಯಕಾರಿ ಕಮಾಂಡೊ ಕಾರ್ಯಾಚರಣೆಯಲ್ಲಿ ಈ ಎರಡು ತಳಿಯ ನಾಯಿಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

Ad Widget

ಮಧ್ಯಪ್ರದೇಶದ ಟೆಕಾನ್ಪುರ ಎಂಬಲ್ಲಿರುವ ಬಿಎಸ್‌ಎಫ್‌ನ ರಾಷ್ಟ್ರೀಯ ತರಬೇತಿ ಕೇಂದ್ರಕ್ಕೆ 2018ರಲ್ಲಿ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಸಿ ತಳಿಗಳನ್ನು ಸೇನೆಯಲ್ಲಿ ನಿಯೋಜಿಸಿಕೊಳ್ಳಲು ಸಲಹೆ ನೀಡಿದ್ದರು. ಅದರಂತೆಯೇ ದೇಸಿ ಶ್ವಾನ ತಳಿಗಳನ್ನು ಅನ್ವೇಷಣೆಗೆ ಬಿಎಸ್‌ಎಫ್‌ ಯೋಜನೆಯೊಂದನ್ನು ರೂಪಿಸಿತು.

ಸೂಕ್ತ ತಳಿಗಳ ಹುಡುಕಾಟ, ಅವುಗಳ ಅಭಿವೃದ್ಧಿ, ಸೇನೆಯಲ್ಲಿ ನಿಯೋಜನೆ ಮತ್ತು ಕಾರ್ಯಾಚರಣೆಯ ವಿಧಾನವನ್ನು ಗಮನಿಸಿ ಅಂತಿಮವಾಗಿ ಉತ್ತರ ಪ್ರದೇಶದ ರಾಮ್‌ಪುರ ಹಾಗೂ ಕರ್ನಾಟಕದ ಮುಧೋಳ ಹೌಂಡ್ ತಳಿಯನ್ನು ಆಯ್ಕೆ ಮಾಡಿತು. ಇವು ಭಯೋತ್ಪಾದಕರು ಹಾಗೂ ನಕ್ಸಲರಿಗೇ ದುಸ್ವಪ್ನವಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *