ರಾಜ್ಯದ ಗೃಹಲಕ್ಷ್ಮಿಯರಿಗೆ ದೀಪಾವಳಿ ಗಿಪ್ಟ್| ಇನ್ನೆರಡು ದಿನದಲ್ಲಿ ನಗದು ಜಮಾ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಸಮಗ್ರ ನ್ಯೂಸ್: ರಾಜ್ಯದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದು ಆಗಸ್ಟ್ ತಿಂಗಳ ಬಾಕಿ ಹಣವನ್ನು 2-3 ದಿನಗಳಲ್ಲಿ ಅಕೌಂಟ್ ಗೆ ಜಮಾ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Ad Widget ... ..

ಹಾಸನಾಂಬೆ ದೇವಿ ದರ್ಶನದ ಸಂದರ್ಭದಲ್ಲಿ ಸರದಿ ಸಾಲಿನಲ್ಲಿದ್ದಂತ ಸಾರ್ವಜನಿಕರು ಮೂರು ತಿಂಗಳ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂಬುದಾಗಿ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದಂತ ಅವರು, ಜುಲೈ ತಿಂಗಳವರೆಗಿನ ಹಣ ಈಗಾಗಲೇ ಕ್ಲಿಯರ್ ಆಗಿದೆ ಎಂದರು.

Ad Widget

ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಕೊಟ್ಟಿದ್ದೇವೆ. 2-3 ದಿನಗಳಲ್ಲಿ ಆಗಸ್ಟ್ ತಿಂಗಳ ಹಣ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಈಗಾಗಲೇ ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಿದ್ದು, ಆಗಸ್ಟ್ ತಿಂಗಳ ಹಣ ದೀಪಾವಳಿಗೂ ಮುನ್ನ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಮಾಹಿತಿ ನೀಡಿದರು.

ಈವರೆಗೂ ಫಲಾನುಭವಿಗಳಿಗೆ ಜುಲೈ ತಿಂಗಳ ಅಂದರೆ, 23 ತಿಂಗಳ ಹಣ ಸಂದಾಯವಾಗಿದೆ. ಇನ್ನು ಆಗಸ್ಟ್ ತಿಂಗಳ ಹಣ ಸಿಕ್ಕರೆ ಒಟ್ಟು 24 ತಿಂಗಳ ಅಂದರೆ 2 ವರ್ಷ ಎಲ್ಲಾ ತಿಂಗಳ ಕಂತುಗಳು ಸಿಕ್ಕಂತಾಗಲಿದೆ. ಒಬ್ಬ ಫಲಾನುಭವಿಗೆ ಈವರೆಗೂ 46 ಸಾವಿರ ಹಣ ಸಿಕ್ಕಂತಾಗಿದೆ.

Leave a Comment

Your email address will not be published. Required fields are marked *