ವೆನೆಜುವೆಲಾದ ಮರಿಯಾ ಕೊರಿನಾಗೆ ನೊಬೆಲ್ ಶಾಂತಿ ಪುರಸ್ಕಾರ| ನನಸಾಗದ ಟ್ರಂಪ್ ಕನಸು

ಸಮಗ್ರ ನ್ಯೂಸ್: ಸ್ವಯಂ ಘೋಷಿತ ಶಾಂತಿಧೂತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಭಾರೀ ಮುಖಭಂಗವಾಗಿದೆ. ಇಂದು ನೊಬೆಲ್ ಶಾಂತಿ ಪುರಸ್ಕಾರದ ವಿಜೇತರ ಹೆಸರು ಘೋಷಿಸಲಾಗಿದೆ. ಆದರೆ, ಆ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಹೆಸರು ಇರಲಿಲ್ಲ.

Ad Widget ... ..

ಟ್ರಂಪ್ ಬದಲಿಗೆ ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮರಿಯಾ ಮಚಾಡೋಗೆ ನೊಬೆಲ್ ಶಾಂತಿ ಪುರಸ್ಕಾರ ಒಲಿದಿದೆ.

Ad Widget

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಸು ನನಸಾಗಿಲ್ಲ. 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಲೆಮರೆಸಿಕೊಂಡಿರುವ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೋಗೆ ನೀಡಲಾಗಿದೆ. ಐರನ್ ಲೇಡಿ ಎಂದೂ ಕರೆಯಲ್ಪಡುವ ಮಚಾಡೋ, ಟೈಮ್ ಮ್ಯಾಗಜೀನ್‌ನ 2025 ರ 100 ಅತ್ಯಂತ ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡುವಾಗ, ನೊಬೆಲ್ ಸಮಿತಿಯ ಅಧ್ಯಕ್ಷರು, ‘ಮಚಾದೊ ಅವರನ್ನು ಕಾರ್ಗತ್ತಲಲ್ಲಿ ಇರುವ ಪ್ರಜಾಪ್ರಭುತ್ವದದ ಮಧ್ಯೆ ಜ್ವಾಲೆ ಉರಿಯುತ್ತಿರುವಂತೆ ಮಾಡಿರುವ ಧೈರ್ಯಶಾಲಿ ಮಹಿಳೆ’ ಎಂದು ಶ್ಲಾಘಿಸಿದರು.

Leave a Comment

Your email address will not be published. Required fields are marked *