ಬಿಗ್ ಬಾಸ್ -12 ಸ್ಟುಡಿಯೋ ಸೀಜ್| ರೆಸಾರ್ಟ್ ಗೆ ಶಿಪ್ಟ್ ಆದ ಸ್ಪರ್ಧಿಗಳು

ಸಮಗ್ರ ನ್ಯೂಸ್: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ ಬಾಸ್‌ ಮನೆಗೆ ಬೀಗ ಹಾಕಲಾಗಿದ್ದು, ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್​ಗೆ ಬೀಗಮುದ್ರೆ ಬಿದ್ದಿದೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದ ಅಧಿಕಾರಿಗಳು ಸ್ಟುಡಿಯೋಸ್​ಗೆ ದೌಡಾಯಿಸಿದ್ದು, ವೇಲ್ಸ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್​ಗೆ ಬೀಗಮುದ್ರೆ ಹಾಕಲಾಗಿದೆ.

Ad Widget ... ..

ಬಿಗ್ ಬಾಸ್ ಬಂದ್ ಮಾಡುವಂತೆ ನೋಟಿಸ್ ನೀಡಿದ್ದರು. ಆದರೆ ನೋಟಿಸ್ ಪಡೆಯಲು ಜಾಲಿವುಡ್ ವೀಡಿಯೋಸ್ ಹಿಂದಿಟು ಹಾಕಿದ್ದರು. ಹಾಗಾಗಿ ಇದೇ ಕಾರಣಕ್ಕೆ ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಪೊಲೀಸರು ಆಗಮಿಸಿದ್ದರು, ಇದೀಗ ತಹಶೀಲ್ದಾರ್‌ ತೇಜಸ್ವನಿ ನೃತೃತ್ವದಲ್ಲಿ ಬೀಗ ಹಾಕಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಈ ವಿಚಾರವಾಗಿ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಯಾವುದೇ ಮಾಹಿತಿ ಇಲ್ಲ. ಅವರೂ ಇನ್ನೂ ಮನೆಯ ಒಳಗೆ ಇದ್ದಾರೆ. ಹಾಗಾಗಿ ಬಿಗ್‌ಬಾಸ್‌ ಕಥೆ ಏನಾಗಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.

Ad Widget

ಏನಿದು ಕಥೆ?
ಬೆಂಗಳೂರಿನ ಬಿಡದಿಯಲ್ಲಿರುವ ಜಾಲಿವುಡ್​ ಸ್ಟುಡಿಯೋದಲ್ಲಿ ಬಿಗ್​ಬಾಸ್​ ನಡೆಯುತ್ತಿದೆ. ಜಾಲಿವುಡ್ ಸ್ಟುಡಿಯೋ ಒಂದು ಅಮ್ಯೂಸ್‌ಮೆಂಟ್ ಪಾರ್ಕ್ ಆಗಿದ್ದು, ಅಪಾರ ಪ್ರಮಾಣದ ತಾಜ್ಯದ ನೀರು ಹೊರ ಹಾಕಲಾಗುತ್ತಿದೆ. ಸರಿಯಾಗಿ ನೀರು ಸಂಸ್ಕರಿಸದೇ ಹೊರಗೆ ಬಿಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ತ್ಯಾಜ್ಯದ ನೀರಿನಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪೇಪರ್ ತಟ್ಟೆ, ಲೋಟ, ಪ್ಲಾಸ್ಟಿಕ್ ವಿಲೇವಾರಿ ಮಾಡಲಾಗ್ತಿದೆ. ಬಿಗ್​ಬಾಸ್​ ಮನೆಯಲ್ಲಿ ನಿತ್ಯ ಎರಡೂವರೆ ಲಕ್ಷ ಲೀಟರ್ ನೀರು ಬಳಸ್ತಾರೆ ಎಂದು ಹೇಳಲಾಗ್ತಿದೆ. ಹಾಗಾಗಿ ಈ ವಿಚಾರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿತ್ತು.

ತಕ್ಷಣದಿಂದಲೇ ಮನರಂಜನಾ ಪಾರ್ಕ್‌ಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಬೆಸ್ಕಾಂಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿತ್ತು. ಅದೇ ಹಿನ್ನೆಲೆಯಲ್ಲಿ ಈಗ ಸ್ಟೂಡಿಯೋಗೆ ಬೀಗ ಹಾಕಲಾಗಿದೆ. ಇದೇ ಸ್ಟೂಡಿಯೋದಲ್ಲಿ ಬಿಗ್ ಬಾಸ್ ಸೀಸನ್ 12ರ ಶೂಟಿಂಗ್ ಸೆಟ್ ಕೂಡ ನಿರ್ಮಾಣ ಆಗಿರೋದ್ರಿಂದ, ಬಿಗ್ ಬಾಸ್ ಶೂಟಿಂಗ್ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕಾನೂನಿಗಿಂತ ದೊಡ್ಡವರು ಯಾರಿಲ್ಲ’ ಎಂದಿದ್ದ ಖಂಡ್ರೆ?
ಒಂದು ತಿಂಗಳಿನಿಂದ ನಿರಂತರವಾಗಿ ಸೂಚನೆ ನೀಡಿದ್ದರೂ ವೇಲ್ಸ್ ಎಂಟರ್ಟೈನ್ಮೆಂಟ್ ನಿರ್ಲಕ್ಷ್ಯ ತೋರಿದ್ದು, ಹೀಗಾಗಿ ಬಂದ್ ಮಾಡುವಂತೆ ಖಡಕ್ ನೋಟೀಸ್‌ನಲ್ಲಿ ಸೂಚನೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟೂಡಿಯೋಗೆ ರಾಮನಗರ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಹಿಂದೆಯೇ, ಅಂದರೆ ಮಾರ್ಚ್ 2024ರಲ್ಲಿಯೇ ನೋಟೀಸ್ ಕೊಟ್ಟಿದ್ದಾರೆ. ಪರಿಶೀಲನೆ ಕೂಡ ಮಾಡಿದಾಗ ವಾಟರ್ ಆಯಕ್ಟ್, ಏರ್ ಆಯಕ್ಟ್ ಪರವಾನಗಿ ಪಡೆದಿಲ್ಲ ಎಂಬುದು ನಮಗೆ ಬಂದಿದೆ ಎಂದಿದ್ದಾರೆ.

Leave a Comment

Your email address will not be published. Required fields are marked *