ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಮಟ್ಟದಲ್ಲಿ ನಾನಾ ಬೆಲೆ ಏರಿಕೆಯ ಕಾರಣದಿಂದಾಗಿ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಹೆಚ್ಚಳ ಕಂಡಿದೆ. ಇಂದು ಒಂದೇ ದಿನ 1370 ರೂಪಾಯಿ ಹೆಚ್ಚಳ ಆಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 6 ಸೋಮವಾರದಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 1370 ರೂಪಾಯಿ ಹೆಚ್ಚಳ ಆಗಿದ್ದು,ಇಂದು ಬರೋಬ್ಬರಿ 137 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 125 ರೂಪಾಯಿ ಏರಿಕೆ ಆಗಿದ್ದು, 11,070 ರುಪಾಯಿ ಆಗಿದೆ.
10 ಗ್ರಾಂ ಬೆಲೆ ಎಷ್ಟು?
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 1370 ರೂಪಾಯಿ ಹೆಚ್ಚಳ ಆಗಿ, 1,20,770 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1250 ರೂ ಹೆಚ್ಚಳ ಆಗಿ, 1,10,700 ರೂಪಾಯಿಗೆ ಏರಿಕೆ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,077 ರೂ ಇದೆ. ಬೆಳ್ಳಿಯ ಬೆಲೆ ಕೂಡಾ ಬರೋಬ್ಬರಿ 1000 ರೂಪಾಯಿ ಏರಿಕೆ ಆಗಿದ್ದು ಹೀಗಾಗಿ ಕೆಜಿ ಬೆಲೆ 1,56,000 ರೂ ಆಗಿದೆ.
ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ ಚಿನ್ನಕ್ಕೆ ಬೇಡಿಕೆ ಬಂದಿದೆ. ಅಮೆರಿಕದಲ್ಲಿ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿದ್ದರಿಂದ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಕಡೆಗೆ ತಿರುಗಿದ್ದು, ಇದರಿಂದ ಬೆಲೆ ಏರಿಕೆ ಕಂಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಮತ್ತಷ್ಟು ಕಡಿತಗೊಳಿಸುವ ನಿರೀಕ್ಷೆ ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಚೀನಾ ಮತ್ತು ಭಾರತದ ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಹೆಚ್ಚು ಖರೀದಿಸುತ್ತಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಮತ್ತು ವಲಸೆ ನೀತಿಗಳ ಬಗ್ಗೆ ಇರುವ ಅನಿಶ್ಚಿತತೆ ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯೂ ಭಾರಿ ಹೆಚ್ಚಳ ಕಾಣುತ್ತಿದೆ. 2025 ರ ಅಂತ್ಯದವರೆಗೂ ಬೆಲೆಯು ಏರುಮುಖ ಆಗಿರುವ ಸಾಧ್ಯತೆ ಬಗ್ಗೆ ಆರ್ಥಿಕ ತಜ್ಞರು ಮುನ್ಸೂಚನೆ ನೀಡಿದ್ದಾರೆ.







