ಸಮಗ್ರ ನ್ಯೂಸ್: ಅಕ್ಟೋಬರ್ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ?
ಮೇಷ ರಾಶಿ:
ಮೇಷ ರಾಶಿಯವರಿಗೆ ಈ ವಾರ ಮಿಶ್ರ ಫಲ ನೀಡಲಿದೆ. ಈ ವಾರ ನೀವು ಯಾವುದೇ ಕೆಲಸವನ್ನು ಪೂರ್ಣಗೊಳಿಸುವಾಗ ಬಹಳ ಜಾಗರೂಕರಾಗಿರಬೇಕು ಮತ್ತು ಸಮಯಕ್ಕೆ ಸರಿಯಾಗಿ ಮುಗಿಸುವುದು ಉತ್ತಮ. ಹಾಗೆ ನಿಮ್ಮ ಹಲವು ಕೆಲಸಗಳಲ್ಲಿ ಶುಭ ವಿಚಾರಗಳು ಬರಲಿವೆ. ಇನ್ನು ವಾರದ ಅಂತ್ಯದಲ್ಲಿ ಕಾಲೋಚಿತ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಅದ್ರಲ್ಲೂ ಮೂಳೆ ಸಂಬಂಧಿತ ವಿಚಾರದಲ್ಲಿ ನೋವು ಕಾಡಬಹುದು. ವಾರದ ಮೊದಲಾರ್ಧದಲ್ಲಿ ಕೆಲಸಕ್ಕೆ ಅಡ್ಡಿಯಾಗಬಹುದು. ಉದ್ಯೋಗ ಸಂಬಂಧಿತ ವಿಚಾರದಲ್ಲಿ ಈ ವಾರ ನಿಮಗೆ ಉತ್ತಮ ಲಾಭವಿದೆ. ಕುಟುಂಬ ಶಾಂತಿ ಹಾಳಾಗುವ ಸಾಧ್ಯತೆಗಳಿವೆ. ಅಂತಹ ಪರಿಸ್ಥಿತಿಯಲ್ಲಿ, ಕುಟುಂಬ ಸದಸ್ಯರ ಸಣ್ಣ ವಿಷಯಗಳಿಂದ ನಿಮ್ಮಲ್ಲಿ ಚಿಂತೆ ಕಾಡಬಹುದು. ವ್ಯವಹಾರಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗಬಹುದು.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಈ ವಾರ ಸಾಮಾನ್ಯ ಫಲ ನೋಡಬಹುದು. ಈ ವಾರ ನಿಮ್ಮ ಹಲವು ಕೆಲಸಗಲ್ಲಿ ಉತ್ತಮ ಫಲಿತಾಂಶಗಳ ನೋಡಬಹುದು. ಹಾಗೆ ವಾರದ ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ, ಇಲ್ಲದಿದ್ದರೆ ಅನಗತ್ಯ ವಿವಾದಗಳು ಉದ್ಭವಿಸಬಹುದು. ಅನಗತ್ಯ ವೆಚ್ಚಗಳ ಹೆಚ್ಚಳವು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು. ಈ ವಾರದಲ್ಲಿ ಹೊಸದಾಗಿ ಸಾಲ ಮಾಡಲು ಮುಂದಾಗಬೇಡಿ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಯೂ ನಿಮಗೆ ಕಳವಳವನ್ನುಂಟುಮಾಡಬಹುದು. ಈ ಸಮಯದಲ್ಲಿ ಉದ್ಯಮಿಗಳು ಜಾಗರೂಕರಾಗಿರಬೇಕು. ಹಣಕಾಸಿನ ವಹಿವಾಟುಗಳು ಮತ್ತು ವ್ಯವಹಾರಗಳನ್ನು ತೀವ್ರ ಎಚ್ಚರಿಕೆಯಿಂದ ಮಾಡುವುದು ಉತ್ತಮ. ದಾಂಪತ್ಯದಲ್ಲಿ ಸಂತಸ ಇರಲಿದೆ. ಮನೆಯಲ್ಲಿ ಪೂಜೆಯಂತಹ ಕೆಲಸಗಳ ಮಾಡಬಹುದು.
ಮಿಥುನ ರಾಶಿ:
ಈ ವಾರ ಮಿಥುನ ರಾಶಿಯವರಿಗೆ ಆರೋಗ್ಯ ಮತ್ತು ಸಂಬಂಧಗಳ ವಿಷಯದಲ್ಲಿ ಸ್ವಲ್ಪ ಪ್ರತಿಕೂಲವಾಗಿರುತ್ತದೆ. ವಾರದ ಆರಂಭದಲ್ಲಿ ಆಪ್ತ ಸ್ನೇಹಿತರೊಂದಿಗಿನ ವಾದದಿಂದಾಗಿ ನೀವು ಅಸಮಾಧಾನಗೊಳ್ಳಬಹುದು. ಗೃಹಿಣಿಯರು ಈ ವಾರ ಬಹಳ ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಬಹುದು. ನಿಮ್ಮ ವ್ಯವಹಾರದಲ್ಲಿ ಅಪಾಯಕಾರಿ ಹೂಡಿಕೆಗಳು ಮತ್ತು ಖರ್ಚುಗಳಿಂದ ದೂರ ಉಳಿಯುವುದು ಸುಲಭ. ಕೆಲಸ ಮಾಡುವ ವೃತ್ತಿಪರರಿಗೆ ಉತ್ತಮ ಸಮಯ. ನಿರುದ್ಯೋಗಿಗಳಿಗೆ ಮೆಚ್ಚಿನ ಕೆಲಸಗಳು ಸಿಗಬಹುದು. ದಾಂಪತ್ಯದಲ್ಲಿ ಸುಖವಿದೆ. ವಾರದ ಬಹುತೇಕ ದಿನ ನೀವು ಪ್ರಯಾಣ ಮಾಡಬಹುದು.
ಕರ್ಕ ರಾಶಿ:
ಕರ್ಕ ರಾಶಿಯ ಜನರಿಗೆ ಇಂದು ಶುಭತರುವ ದಿನ. ನಿಮ್ಮ ಯೋಜಿತ ಕೆಲಸಗಳು ಸಮಯಕ್ಕೆ ಮತ್ತು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ನೀವು ಮನೆಯ ಸದಸ್ಯರಿಂದ ಕೆಲಸದ ವಿಚಾರದಲ್ಲಿ ಬೆಂಬಲ ಪಡೆಯುತ್ತೀರಿ. ಹಣಕಾಸು ವಿಚಾರವಾಗಿ ಸ್ನೇಹಿತರ ಬೆಂಬಲ ಪಡೆಯುತ್ತೀರಿ. ವಾರದ ಆರಂಭದಲ್ಲಿ ನಿಮ್ಮ ಮಕ್ಕಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳ ಪಡೆಯಬಹುದು. ವ್ಯಾಪಾರಸ್ಥರು ವಾರದ ಮೊದಲಾರ್ಧವನ್ನು ವ್ಯಾಪಾರ ಒಪ್ಪಂದಗಳು ಅಥವಾ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಯ್ಕೆ ಮಾಡಿಕೊಳ್ಳಬಹುದು. ಉತ್ತರಾರ್ಧದಲ್ಲಿ ನಿಮ್ಮ ಹಣಕಾಸು ಸಮಸ್ಯೆ ದೂರಾಗಬಹುದು.
ಸಿಂಹ ರಾಶಿ:
ಸಿಂಹ ರಾಶಿಯವರು ಈ ವಾರ ಉತ್ತಮ ದಿನಗಳ ನೋಡಬಹುದು. ವಾರವು ದೀರ್ಘ ಅಥವಾ ಸಣ್ಣ ಪ್ರವಾಸಗಳಿಗೆ ಕಾರಣವಾಗಬಹುದು. ಪ್ರಯಾಣವು ಆಹ್ಲಾದಕರವಾಗಿರುತ್ತದೆ ಮತ್ತು ಹೊಸ ಸಂಪರ್ಕಗಳನ್ನು ಬೆಳೆಸುತ್ತದೆ. ಈ ವಾರ ನೀವು ಬಯಸಿದಂತೆ ಅನೇಕ ವಿಷಯಗಳು ನಡೆಯುವುದನ್ನು ನೀವು ಕಾಣಬಹುದು. ಉದ್ಯೋಗ ಸಂಬಂಧಿತ ಸಮಸ್ಯೆಗಳು ವಾರದ ಮೊದಲಾರ್ಧದಲ್ಲಿ ಬಗೆಹರಿಯುತ್ತವೆ. ನಿರುದ್ಯೋಗಿಗಳು ತಾವು ಬಯಸುವ ಉದ್ಯೋಗವನ್ನು ಪಡೆಯಬಹುದು. ನಿಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಯಶಸ್ಸನ್ನು ಪಡೆಯಬಹುದು. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಈ ವಾರ ಶ್ರಮದಾಯಕ ದಿನವಾಗಿರಲಿದೆ. ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶವಿದೆ. ಬಹಳ ಸಮಯದ ನಂತರ ಕೆಲವು ಪ್ರೀತಿಪಾತ್ರರನ್ನು ಭೇಟಿಯಾಗುವ ಸಾಧ್ಯತೆಗಳಿವೆ.
ಕನ್ಯಾ ರಾಶಿ:
ಈ ವಾರ ಕನ್ಯಾ ರಾಶಿಯ ಜನರಿಗೆ ಅತ್ಯಂತ ಶುಭವಾಗಲಿದೆ. ನೀವು ಪ್ರೀತಿ ಪಾತ್ರರನ್ನು ಭೇಟಿಯಾಗಬಹುದು. ಅನೇಕರು ಈ ವಾರ ಪ್ರಯಾಣಗಳ ಮಾಡಬಹುದು. ಮನೆಯಲ್ಲಿ ಮತ್ತು ವಿದೇಶದಲ್ಲಿ ಅದೃಷ್ಟದೊಂದಿಗೆ, ವಿಷಯಗಳು ಬಯಸಿದಂತೆ ನಡೆಯುತ್ತಿವೆ. ಕೆಲಸದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ವಾರ ಪರಿಹರಿಸಲ್ಪಡುತ್ತದೆ. ನೀವು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ನಿಮ್ಮ ದೊಡ್ಡ ಮಟ್ಟದ ಯಶಸ್ಸು ಪಡೆಯುತ್ತೀರಿ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ತಂದೆಯಿಂದ ನಿಮಗೆ ವಿಶೇಷ ಸಂತೋಷ ಮತ್ತು ಬೆಂಬಲ ಸಿಗಬಹುದು.
ತುಲಾ ರಾಶಿ:
ಈ ವಾರ ತುಲಾ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಈ ವಾರ ತಾಳ್ಮೆ ಕಳೆದುಕೊಳ್ಳಬೇಡಿ. ವಾರದ ಆರಂಭದಲ್ಲಿ ಹಣಕಾಸಿನ ವಿಚಾರದಲ್ಲಿ ಶುಭವಾಗಲಿದೆ. ಹಾಗೆ ವ್ಯಾಪಾರಿಗಳು ಈ ವಾರ ಲಾಭ ಮಾಡುವ ಮೂಲಕ ನೆಮ್ಮದಿ ನೋಡಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ವಾರದ ಮೊದಲಾರ್ಧದಲ್ಲಿ ಅಪಾಯಕಾರಿ ಹೂಡಿಕೆಗಳನ್ನು ತಪ್ಪಿಸಿ. ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬಹುದು. ನೀವು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೀರಿ. ಈ ವಾರ ವ್ಯವಹಾರದಲ್ಲಿರುವವರಿಗೆ ಶುಭವಾಗಿರುತ್ತದೆ. ವಾರದ ಕೊನೆಯಲ್ಲಿ ನೀವು ಹೊಸ ವ್ಯವಹಾರ ಯೋಜನೆಯನ್ನು ಸಹ ರೂಪಿಸಬಹುದು. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರಿಗೆ ಈ ವಾರ ಮಿಶ್ರ ಫಲ ನೀಡಲಿದೆ. ವಾರದ ಆರಂಭದಲ್ಲಿ ಭೂಮಿ, ಕಟ್ಟಡಗಳು ಅಥವಾ ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿವಾದಗಳು ನಿಮಗೆ ಚಿಂತೆಯನ್ನುಂಟು ಮಾಡಬಹುದು. ನಿಮ್ಮ ಪೋಷಕರ ಆರೋಗ್ಯದ ಕುರಿತಾದ ಚಿಂತೆಯೊಂದು ದೂರಾಗಲಿದೆ. ವ್ಯವಹಾರ, ವ್ಯಾಪಾರದಲ್ಲಿ ನಿಮಗೆ ಶುಭಕರ ದಿನಗಳಿವೆ. ದಾಂಪತ್ಯ ವಿಚಾರದಲ್ಲಿ ಹಲವು ದಿನಗಳಿಂದ ಕಾಡಿದ್ದ ಸಮಸ್ಯೆಯೊಂದರಿಂದ ಮುಕ್ತಿ ಪಡೆಯುತ್ತೀರಿ. ಹಣಕಾಸು ವಿಚಾರದಲ್ಲಿ ನಿಮ್ಮ ಕೈ ಮೇಲಾಗಲಿದೆ. ಆಸ್ತಿ ವಿಚಾರವಾಗಿ ಇದ್ದ ವಿವಾದವೊಂದು ನಿವಾರಣೆಯಾಗಲಿದೆ.
ಧನು ರಾಶಿ:
ಈ ವಾರ ಧನು ರಾಶಿಯವರಿಗೆ ಸಾಮಾನ್ಯವಾಗಿರಲಿದೆ. ತರಾತುರಿಯಲ್ಲಿ ಈ ವಾರ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಮಾಜದಲ್ಲಿ ನಿಮ್ಮ ಗೌರವ, ಘನತೆ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಈ ವಾರವು ಬಹಳ ಅನುಕೂಲಕರವಾಗಿರಲಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧಿತ ವಿಚಾರದಲ್ಲಿ ದಾಖಲೆಗಳ ಕುರಿತ ವಿಚಾರವಾಗಿ ಶುಭವಿದೆ. ಈ ಸಮಯದಲ್ಲಿ ವೆಚ್ಚಗಳು ಆದಾಯವನ್ನು ಮೀರಿಸುತ್ತದೆ. ವೆಚ್ಚಗಳಲ್ಲಿ ಹಠಾತ್ ಹೆಚ್ಚಳದಿಂದ ನಿಮ್ಮ ಅಗತ್ಯ ಕೆಲಸಕ್ಕೆ ಹಣಕಾಸಿನ ಸಮಸ್ಯೆ ಎದುರಾಗಬಹುದು. ಕುಟುಂಬಸ್ಥರ ಭಾವನೆಗಳನ್ನು ಗೌರವಿಸುವುದು ಉತ್ತಮ.
ಮಕರ ರಾಶಿ:
ಮಕರ ರಾಶಿಯವರು ಈ ವಾರ ಶುಭವನ್ನು ತರಲಿದೆ. ನಿಮಗೆ ಬಹುಕಾಲದಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಬಹುದು. ನಿಮ್ಮ ಹಲವು ಯೋಜನೆಗಳು ಈ ವಾರ ಯಶಸ್ಸು ಸಿಗಲಿದೆ. ನಿಮ್ಮ ಹೂಡಿಕೆ, ಹಾಗೂ ಉಳಿತಾಯದಲ್ಲಿ ಹೆಚ್ಚಳ ನೋಡಬಹುದು. ಈ ವಾರದ ಆರಂಭದಲ್ಲಿ ಮಾಡಿದ ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆಯಿದೆ. ವೃತ್ತಿಪರರಿಗೆ ಈ ವಾರ ಬಹಳ ಅನುಕೂಲಕರ ದಿನಗಳಿವೆ. ವಾರದ ಮಧ್ಯದಲ್ಲಿ ಹಠಾತ್ ಹಣಕಾಸಿನ ಲಾಭ ನೋಡಬಹುದು. ನಿಮ್ಮ ವ್ಯವಹಾರವು ಅಪೇಕ್ಷಿತ ಲಾಭ ಮತ್ತು ಹೆಚ್ಚಿದ ಆದಾಯವನ್ನು ತರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮನ್ವಯವನ್ನು ಅನುಭವಿಸುವಿರಿ.
ಕುಂಭ ರಾಶಿ:
ಈ ವಾರ ಕುಂಭ ರಾಶಿಯ ಜನರಿಗೆ ಮಿಶ್ರ ಫಲ ಇರಲಿದೆ. ವಾರದ ಆರಂಭ ಶುಭವಾಗಿರಲಿದೆ. ಉತ್ತರಾರ್ಧದಲ್ಲಿ ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ಅದ್ರಲ್ಲೂ ನಿರುದ್ಯೋಗಿಗಳಲ್ಲಿ ಈ ವಾರ ನೀವು ಬಯಸಿದ ಕೆಲಸ ಸಿಗಬಹುದು. ವೃತ್ತಿ ಮತ್ತು ವ್ಯವಹಾರ ದೃಷ್ಟಿಕೋನದಿಂದ ಈ ಸಮಯ ಅನುಕೂಲಕರವಾಗಿರುತ್ತದೆ. ವಾರದ ಮೊದಲಾರ್ಧವು ವ್ಯವಹಾರದಲ್ಲಿ ತೊಡಗಿರುವವರಿಗೆ ಶುಭವಿದೆ. ವಾಹನ ಸಂಬಂಧವಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ. ಹಾಗೆ ಖರ್ಚುಗಳ ಮೇಲೆಯೂ ಹಿಡಿತವಿರಲಿ.
ಮೀನ ರಾಶಿ:
ಮೀನ ರಾಶಿಯವರಿಗೆ ವಾರದ ಆರಂಭವು ಸ್ವಲ್ಪ ಸವಾಲಿನದ್ದಾಗಿರಬಹುದು. ಆದ್ರೆ ವಾರದ ಮಧ್ಯದಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ಶುಭವಾಗಲಿದೆ. ಸಹೋದ್ಯೋಗಿಗಳು ಮತ್ತು ಹಿತೈಷಿಗಳು ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರಬಹುದು. ಉದ್ಯೋಗ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗಲಿದೆ. ಗೃಹಿಣಿಯರಿಗೆ ಈ ವಾರವು ಲಾಭದಾಯಕವಾಗಲಿದೆ. ಆರ್ಥಿಕವಾಗಿ ನೀವು ಸಾಲಗಳಿಂದ ಮುಕ್ತಿ ಪಡೆಯುವ ಪ್ರಯತ್ನ ಬಿಡಬೇಡಿ. ದೇವಾಲಯ, ಪ್ರವಾಸದಂತಹ ಕೆಲಸದಲ್ಲಿ ತೊಡಗಬಹುದು.







