ಭಾರತಕ್ಕೆ ಮತ್ತೊಂದು ಶಾಕ್ ನೀಡಿದ ಅಮೇರಿಕ| ಔಷಧಿಗಳ ಮೇಲೆ ಶೇ.100 ಸುಂಕ ಘೋಷಣೆ

ಸಮಗ್ರ ನ್ಯೂಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಅಕ್ಟೋಬರ್ 1 ರಿಂದ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ 100% ವರೆಗಿನ ಸುಂಕವನ್ನು ಘೋಷಿಸಿದ್ದಾರೆ. ಇದು ಭಾರತಕ್ಕೆ ಮತ್ತೊಂದು ದೊಡ್ಡ ಶಾಕ್‌ ಉಂಟುಮಾಡಿದೆ.

Ad Widget ... ..

ಒಂದು ಕಂಪನಿಯು ಅಮೆರಿಕದಲ್ಲಿ ತನ್ನ ಔಷಧೀಯ ಉತ್ಪಾದನಾ ಘಟಕವನ್ನು ನಿರ್ಮಿಸದೇ ಹೋದರೆ ಅಕ್ಟೋಬರ್ 1 ರಿಂದ ಯಾವುದೇ ಬ್ರಾಂಡ್ ಅಥವಾ ಪೇಟೆಂಟ್ ಪಡೆದ ಔಷಧೀಯ ಉತ್ಪನ್ನದ ಮೇಲೆ ನಾವು 100% ಸುಂಕವನ್ನು ವಿಧಿಸುತ್ತೇವೆ ಎಂದು ಟ್ರಂಪ್‌ ಟ್ರೂತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ.

Ad Widget

ಇನ್ನಷ್ಟು ಬರೆದಿರುವ ಅವರು, ಅಮೆರಿಕದಲ್ಲಿ ಔಷಧ ಕಂಪನಿಗಳು ನಿರ್ಮಾಣವಾಗುತ್ತಿವೆ ಅಥವಾ ನಿರ್ಮಾಣ ಹಂತದಲ್ಲಿವೆ ಎಂದು ತಿಳಿಸಲಾಗುತ್ತಿದೆ. ಆದ್ದರಿಂದ ಅಂತಹ ಕಂಪನಿಗಳ ಔಷಧೀಯ ಉತ್ಪನ್ನಗಳ ಮೇಲೆ ಯಾವುದೇ ಸುಂಕವಿರುವುದಿಲ್ಲ. ಈ ವಿಷಯ ನಿಮಗೆ ಮೊದಲೇ ಗಮನಕ್ಕೆ ಬಂದಿದ್ದರೆ, ಧನ್ಯವಾದಗಳು ಎಂದು ಹೇಳಿದ್ದಾರೆ.

ಅಮೆರಿಕದ ಸುಂಕದ ಸಾಲಿನಲ್ಲಿ ಈಗ ಔಷಧಿಯೂ ಸೇರಿರುವುದು ಜಾಗತಿಕವಾಗಿ ಅದರಲ್ಲೂ ಮುಖ್ಯವಾಗಿ ಭಾರತಕ್ಕೆ ನಡುಕ ತರಿಸಿದೆ. ಅಮೆರಿಕದೊಂದಿಗಿನ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾದ ದೇಶೀಯ ಕೈಗಾರಿಕೆಗಳಲ್ಲಿ ಔಷಧ ವಲಯವೂ ಒಂದು. ಅಮೆರಿಕದ ಈ ಕ್ರಮದಿಂದ ಭಾರತದ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಇದೆ.

Leave a Comment

Your email address will not be published. Required fields are marked *