ಏಷ್ಯಾಕಪ್ ಕ್ರಿಕೆಟ್| ಗರಿಷ್ಟ ಸಿಕ್ಸರ್ ದಾಖಲೆ ಬರೆದ ಅಭಿಷೇಕ್ ಶರ್ಮಾ

ಸಮಗ್ರ ನ್ಯೂಸ್: ಏಷ್ಯಾ ಕಪ್ ಟಿ20 ಟೂರ್ನಿಯ ಬುಧವಾರದ ಪಂದ್ಯದಲ್ಲಿ ಬಾಂಗ್ಲಾ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿ 37 ಎಸೆತಗಳಲ್ಲಿ 75 ರನ್ ಸಿಡಿಸಿದ ಯುವ ಐಕಾನ್ ಅಭಿಷೇಕ್ ಶರ್ಮಾ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಆರಂಭದಿಂದಲೂ ಅದ್ಭುತ ಫಾರ್ಮ್ನಲ್ಲಿರುವ ಶರ್ಮಾ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಶತಕದತ್ತ ದೃಷ್ಟಿ ನೆಟ್ಟಿದ್ದ ಆರಂಭಿಕ ಆಟಗಾರ ದುರದೃಷ್ಟಕರ ರನೌಟ್ಗೆ ಬಲಿಯಾದರು.

Ad Widget ... ..

ತಮ್ಮ ಚುಟುಕು ಇನಿಂಗ್ಸ್ನಲ್ಲಿ 5 ಸಿಕ್ಸರ್ ಸಿಡಿಸಿದ ಅವರು, ಒಂದೇ ಏಷ್ಯಾಕಪ್ನಲ್ಲಿ 15ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಇದುವರೆಗೆ ಪ್ರಸಕ್ತ ಏಷ್ಯಾಕಪ್ನಲ್ಲಿ ಶರ್ಮಾ 16 ಸಿಕ್ಸರ್ ಸಿಡಿಸಿದ್ದಾರೆ. ಶ್ರೀಲಂಕಾದ ಸನತ್ ಜಯಸೂರ್ಯ 2008ರಲ್ಲಿ ನಿರ್ಮಿಸಿದ್ದ 14 ಸಿಕ್ಸರ್ಗಳ ದಾಖಲೆಯನ್ನು ಪುಡಿಗಟ್ಟಿದರು.

Ad Widget

ಶರ್ಮಾ ಅದ್ಭುತ ಕೊಡುಗೆ ನೀಡಿದ ಹೊರತಾಗಿಯೂ ಭಾರತದ ಇತರ ಆಟಗಾರರ ಅಚಾತುರ್ಯದಿಂದಾಗಿ ಭಾರತ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲಷ್ಟೇ ಸಾಧ್ಯಾಯಿತು. ಥರ್ಡ್ಮ್ಯಾನ್ನಲ್ಲಿ ಒಂದು ಕೈಯಲ್ಲಿ ಚೆಂಡನ್ನು ಅದ್ಭುತವಾಗಿ ಹಿಡಿದು ಮಿಂಚಿನ ವೇಗದಲ್ಲಿ ಕ್ರೀಸ್ನತ್ತ ಎಸೆಯುವ ಮೂಲಕ ರಿಶಾದ್ ಹುಸೇನ್, ಭಾರತೀಯ ಯುವದಾಂಡಿಗನ ಓಟಕ್ಕೆ ತಡೆ ಹಾಕಿದರು.

ಇನ್ನೊಂದೆಡೆ ಶುಭಮನ್ ಗಿಲ್, ತಿಲಕ್ ವರ್ಮಾ ಅಥವಾ ವಿಕೆಟ್ ಕೀಪರ್ ಜಾಕರ್ ಅಲಿಯವರ ಅದ್ಭುತ ಕ್ಯಾಚ್ಗೆ ವಿಕೆಟ್ ಒಪ್ಪಿಸಿದ ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಅಗ್ರ ಕ್ರಮಾಂಕದ 7 ಮಂದಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಕೊಳ್ಳಲು ಸಾಧ್ಯವಾಗದ ತಂಡದ ಅಸಾಮಥ್ರ್ಯವನ್ನು ಇದು ಪ್ರದರ್ಶಿಸಿತು. ಮೊದಲ 10 ಓವರ್ನಲ್ಲಿ 96 ರನ್ ಸೇರಿಸಿದ್ದ ಭಾರತ ಕೊನೆಯ 10 ಓವರ್ನಲ್ಲಿ ಕೇವಲ 72 ರನ್ ಸೇರಿಸಲು ಸಾಧ್ಯವಾಯಿತು. ಸ್ಯಾಮ್ಸನ್ ಬದಲು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ (15 ಎಸೆತಗಳಲ್ಲಿ 10) ನಿರಾಸೆ ಮೂಡಿಸಿದರು.

Leave a Comment

Your email address will not be published. Required fields are marked *