ನಾನು ಕನ್ನಡಿಗ, ಹಿಂದೂ. ಕಲಾವಿದರ ನಡುವೆ ಧರ್ಮ ತಂದಿಡಬೇಡಿ| ಯೂಟ್ಯೂಬರ್ ಮುಕಳೆಪ್ಪ ಮೊದಲ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ಧಾರವಾಡದ ಕಾಮಿಡಿ ಸ್ಟಾರ್ ಯುಟ್ಯುಬರ್ ಮುಕಳೆಪ್ಪನ ಅನ್ಯ ಧರ್ಮದ ಯುವತಿ ಜೊತೆ ಮದುವೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ತನ್ನ ಮುಕಳೆಪ್ಪ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮುಕಳೆಪ್ಪ ಜೊತೆ ಆತನ ಪತ್ನಿ ಗಾಯತ್ರಿ ಕೂಡಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Ad Widget ... ..

ವಿಡಿಯೋದಲ್ಲಿ ಮೊದಲು ಮಾತನಾಡಿದ ಮುಕಳೆಪ್ಪ, ಎಲ್ಲರೂ ಮುಕಳೆಪ್ಪ ಲವ್ ಜಿಹಾದ್ ಎಂದು ಹೇಳುತಿದ್ದಾರೆ. ಆದರೆ‌ ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ಇಬ್ಬರು ಇಷ್ಟ ಪಟ್ಟು ಮದುವೆಯಾಗಿದ್ದೆವೆ. ನಾವು ಇಬ್ಬರೂ ಮತಾಂತರಗೊಂಡಿಲ್ಲ. ನನ್ನ ಪತ್ನಿ ಯಾವ ಧರ್ಮದಲ್ಲಿ ಹುಟ್ಟಿದ್ದಾಳೆ ಅದೇ ಧರ್ಮ ಪಾಲಿಸ್ತೆನೆ. ನಾನು ಹುಟ್ಟಿದ ಧರ್ಮವನ್ನೇ ನಾನು ಪಾಲಿಸ್ತೆನೆ. ಯಾವುದೇ ಮತಾಂತರ ಮಾಡಲ್ಲ. ಕಲಾವಿದರಲ್ಲಿ ಯಾವುದೇ ಜಾತಿ ಧರ್ಮ ತರಬೇಡಿ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೆನೆ ಎಂದರೆ ನಾನು‌ ಕುಡಾ ಕನ್ನಡ ಹಿಂದೂನೇ. ನಮಗೆ ಯಾವುದೇ ತರ ಕಿರಿಕಿರಿ ಮಾಡೊದು ಮತ್ತು ನಮ್ಮ ಬಗ್ಗೆ ವಿಡಿಯೋ ಮಾಡಿ‌ ಹಾಕೊದು ಮಾಡಬೇಡಿ.

Ad Widget

ನಮ್ಮನ್ನ ಬದುಕಲು ಬಿಡಿ ಎಂದು ಮುಕಳೆಪ್ಪ ಮತ್ತು ಆತನ ಪತ್ಮಿ ಗಾಯತ್ರಿ ಕೈ ಮುಗಿದು ಹೇಳಿದ್ದಾರೆ. ನಮ್ಮನ್ನ ಬದುಕಲು ಬಿಡಿ ಎಂದು ಕೇಳಿಕೊಳ್ತೆನೆ ಎಂದಿರುವ ಮುಕಳೆಪ್ಪ, ಅದೇ ವೇಳೆ ಮುಕಳೆಪ್ಪ ಪತ್ನಿ ಕುಡಾ ಹೇಳಿಕೆ ನೀಡಿದ್ದಾರೆ. ನಾನು ಯಾವತ್ತೂ ಹಿಂದೂ ಆಗೇ ಇದೆನೆ. ನನ್ನ ಪತಿ ನನಗೆ ಮತಾಂತರ ಮಾಡೊದು ಎನ್ನುವದು ಎಲ್ಲ ಸುಳ್ಳು ಸುದ್ದಿ. ಇದನ್ನ‌ ಯಾರೂ ನಂಬಬೇಡಿ. ಮುಕಳೆಪ್ಪನನ್ನ ಇಷ್ಟು ದಿನ ಹೇಗೆ ನೋಡಿದ್ದಿರೊ ಅದೇ ರೀತಿ ನೋಡ್ರಿ. ಎಂದು ಕೈ‌ಮುಗಿದು ಕೇಳ್ತೆನೆ, ನಮ್ಮನ್ನ ಬದುಕಲು ಬಿಡಿ ಎಂದು ಗಾಯತ್ರಿ ಹೇಳಿದ್ದಾರೆ.

ನಾವಿಬ್ಬರು ಒಪ್ಪಿ ಮದುವೆಯಾಗಿದ್ದೆವೆ. ಯಾರು ಮೈಂಡ್ ವಾಶ್ ಮಾಡಿಲ್ಲ. ಸುಮ್ಮನೇ ಸುಳ್ಳು ಸುದ್ದಿ ಹಬ್ಬಿಸುತಿದ್ದಾರೆ. ಸ್ವತಃ ನಾವೇ ಗಂಡ ಹೆಂಡತಿ ಕುಳಿತು ಹೇಳುತಿದ್ದೆವೆ. ಮೂರು ವರ್ಷ ಪ್ರೀತಿಸಿ ಮದುವೆಯಾಗಿದ್ದವೆ ಎಂದು ಗಾಯತ್ರಿ ಕೈ ಮುಗಿದು ಹೇಳಿದ್ದಾರೆ.

Leave a Comment

Your email address will not be published. Required fields are marked *