ಸಮಗ್ರ ನ್ಯೂಸ್: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿಗೆ 1 ತಿಂಗಳು ಗಡಿಪಾರು ಮಾಡಲಾಗಿದೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿಗೆ ತಿಮರೋಡಿಯನ್ನ ಗಡಿಪಾರು ಮಾಡಿ ಪುತ್ತೂರು AC ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ತಿಮರೋಡಿ ವಿರುದ್ಧ 32 ಕೇಸ್ ಇರೋ ಹಿನ್ನೆಲೆಯಲ್ಲಿ 1 ವರ್ಷದ ಅವಧಿಗೆ ಮಾನ್ವಿಗೆ ಗಡಿಪಾರು ಮಾಡಲಾಗಿದೆ.
ಸದ್ಯ ಎಲ್ಲಾ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ದ. ಕನ್ನಡ ಪೊಲೀಸರು ಮಹೇಶ್ ತಿಮರೋಡಿ ಕರೆದುಕೊಂಡು ಹೋಗಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಬಿಟ್ಟು ಬರಲಿದ್ದಾರೆ ಎನ್ನಲಾಗಿದೆ.






