ಸಮಗ್ರ ನ್ಯೂಸ್: ಧರ್ಮಸ್ಥಳದ ಬಂಗ್ಲೆಗುಡ್ಡೆ ರಹಸ್ಯ ಭೇದಿಸಲು ಎಸ್ಐಟಿ ಇಂದು ದೊಡ್ಡ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಬಂಗ್ಲೆ ಗುಡ್ಡೆಯಲ್ಲಿ 5 ಕ್ಕಿಂತ ಹೆಚ್ಚು ಕಡೆ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗಿದೆ.
ಐಪಿಎಸ್ ಅಧಿಕಾರಿ ದಯಾಮ್ ನೇತೃತ್ವದ 50ಕ್ಕಿಂತ ಹೆಚ್ಚು ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಶೋಧ ಸಂಧರ್ಭ ಅಸ್ಥಿಪಂಜರ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಭೂಮಿಯ ಮೇಲ್ಭಾಗದಲ್ಲೇ 5 ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ದೊರೆತ ಮೂಳೆಗಳನ್ನು SOCO ಟೀಮ್ ಸಂಗ್ರಹಿಸಿದೆ.
ಸೌಜನ್ಯ ಮಾವ ವಿಠಲ್ ಗೌಡ ಇತ್ತಿಚೆಗೆ ವಿಡಿಯೋ ಹರಿಬಿಟ್ಟು ಎಸ್ಐಟಿ ತನಿಖೆಯ ವೇಳೆ 7 ಮಾನವ ಮೃತದೇಹಗಳು ಪತ್ತೆಯಾಗಿದೆ ಎಂದಿದ್ದರು. ಈ ಹೇಳಿಕೆ ಮತ್ತೆ ಭಾರಿ ಚರ್ಚೆಗೆ ಗ್ರಾಸವಾಗಿದೆ.







