ಅಮೇರಿಕಾದಲ್ಲಿ ಪತ್ನಿ, ಮಗನ ಮುಂದೆಯೇ ವ್ಯಕ್ತಿಯ ಶಿರಚ್ಛೇದ

ಸಮಗ್ರ ನ್ಯೂಸ್: ಅಮೆರಿಕದ ಡಲ್ಲಾಸ್​ನಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರು ಕರ್ನಾಟಕದವರು ಎನ್ನಲಾಗಿದೆ. ಪೊಲೀಸರ ಪ್ರಕಾರ, ಈ ಘಟನೆ ಸೆಪ್ಟೆಂಬರ್ 10 ರಂದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ನಡೆದಿದೆ.

Ad Widget ... ..

ಭಾರತ ಮೂಲದ 50 ವರ್ಷದ ಚಂದ್ರಮೌಳಿ ನಾಗಮಲ್ಲಯ್ಯ ಅವರನ್ನು ಅವರ ಪತ್ನಿ ಮತ್ತು ಮಗನ ಎದುರೇ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ.

Ad Widget

ಡಲ್ಲಾಸ್ ಪೊಲೀಸರು ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಅವರನ್ನು ಕೊಲೆ ಪ್ರಕರಣದಲ್ಲಿ ಶಂಕಿತ ಎಂದು ಗುರುತಿಸಿದ್ದು ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಜೈಲು ದಾಖಲೆಗಳ ಪ್ರಕಾರ, ಆರೋಪಿಗೆ ಬಾಂಡ್ ರಹಿತ ಬಂಧನ ಆದೇಶ ಹೊರಡಿಸಲಾಗಿದೆ.

ನಾಗಮಲ್ಲಯ್ಯ, ತನ್ನ ಸಹೋದ್ಯೋಗಿ ಯೋರ್ದಾನಿಸ್ ಕೋಬೋಸ್-ಮಾರ್ಟಿನೆಜ್ ಜೊತೆ ಒಡೆದ ವಾಷಿಂಗ್ ಮೆಷಿನ್ ಬಗ್ಗೆ ನಡೆದ ವಾಗ್ವಾದದ ನಂತರ ಹತ್ಯೆ ಮಾಡಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಕೋಬೋಸ್-ಮಾರ್ಟಿನೆಜ್ ಚಾಕುವನ್ನು ಹೊರತೆಗೆದು ನಾಗಮಲ್ಲಯ್ಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.

Leave a Comment

Your email address will not be published. Required fields are marked *