ಸಮಗ್ರ ನ್ಯೂಸ್: ಕಳೆದ 9 ದಿನಗಳಿಂದ ಒಟ್ಟು 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶಿಸುವ ಮೂಲಕ ವಿದುಷಿ ದೀಕ್ಷಾ ವಿ. ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಮಣಿಪಾಲ ರತ್ನ ಸಂಜೀವ ಕಲಾ ಮಂಡಲದ ನೇತೃತ್ವದಲ್ಲಿ ಬ್ರಹ್ಮಾವರ ಆರೂರು ಗ್ರಾಮದ ವಿದುಷಿ ದೀಕ್ಷಾ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪದವಿ ಕಾಲೇಜಿನಲ್ಲಿ ಆ.21ರಂದು ಮಧ್ಯಾಹ್ನ 3.30ಗಂಟೆಗೆ ಆರಂಭಿಸಿದ ಭರತ ನಾಟ್ಯವನ್ನು ಆ.30ರ ಮಧ್ಯಾಹ್ನ 3.30ಕ್ಕೆ ಪೂರ್ಣಗೊಳಿಸಿದ್ದಾರೆ.
ಈ ಮೂಲಕ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಮಂಗಳೂರಿನ ರೆಮೋನಾ ಎವೆಟ್ಟೆ ಪೆರೇರಾ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶಿ ಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ್ದರು. ಇದೀಗ ದೀಕ್ಷಾ ಈ ದಾಖಲೆಯನ್ನು ಮುರಿದು ಸಾಧನೆ ಮಾಡಿದ್ದಾರೆ.








