ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿದ್ದ ಕಡಬ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಒಟ್ಟು 13 ವಾರ್ಡ್ಗಳ ಪೈಕಿ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢ ಬಿಜೆಪಿಯು 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಶುಕ್ರವಾರ ಇಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ನಡೆದ ಎಣಿಕೆ ಪ್ರಕ್ರಿಯೆಯು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಆರಂಭದಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಕಂಡುಬಂದರೂ, ಅಂತಿಮವಾಗಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿತು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
13 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು 7 ಸ್ಥಾನಗಳ ಅಗತ್ಯವಿತ್ತು. ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ.
ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ:
ಪಿಜಕಳ ವಾರ್ಡ್: ಬಿಜೆಪಿ ಅಭ್ಯರ್ಥಿ ದಯಾನಂದ, ಕೋಡಿಬೈಲು ವಾರ್ಡ್: ಬಿಜೆಪಿ ಅಭ್ಯರ್ಥಿ ಕುಸುಮಾ, ಕಳಾರ ವಾರ್ಡ್: ಕಾಂಗ್ರೆಸ್ ಅಭ್ಯರ್ಥಿ ತಮನ್ನಾ ಜಮೀರ್, ಮೂರಾಜೆ ವಾರ್ಡ್: ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ, ಪನ್ಯ ವಾರ್ಡ್: ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಫೈಜಲ್, ಕೋಡಿಂಬಾಳ ವಾರ್ಡ್: ಬಿಜೆಪಿ ಅಭ್ಯರ್ಥಿ ಅಕ್ಷತಾ ಮಣಿಮುಂಡ, ಬೆದ್ರಾಜೆ ವಾರ್ಡ್: ಕಾಂಗ್ರೆಸ್ ಅಭ್ಯರ್ಥಿ ಸಿ.ಜೆ. ಸೈಮನ್, ದೊಡ್ಡಕೊಪ್ಪ ವಾರ್ಡ್: ಬಿಜೆಪಿ ಅಭ್ಯರ್ಥಿ ಗುಣವತಿ, ಮಾಲೇಶ್ವರ ವಾರ್ಡ್: ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಹನೀಫ್, ಮಜ್ಜಾರು ವಾರ್ಡ್: ಬಿಜೆಪಿ ಅಭ್ಯರ್ಥಿ ಮೋಹನ್, ಕಡಬ ವಾರ್ಡ್: ಕಾಂಗ್ರೆಸ್ ಅಭ್ಯರ್ಥಿ ನೀಲಾವತಿ ಶಿವರಾಮ, ಪುಳಿಕುಕ್ಕು ವಾರ್ಡ್: ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ, ಪಣೆಮಜಲ್ ವಾರ್ಡ್: ಕಾಂಗ್ರೆಸ್ ಅಭ್ಯರ್ಥಿ ರೋಹಿತ್ ಗೌಡ ರವರುಗಳು ಗೆಲುವು ಸಾಧಿಸಿದ್ದಾರೆ.







