July 2025

ಧರ್ಮಸ್ಥಳ: ಶವ ಹೂತಿಟ್ಟ ಜಾಗದಲ್ಲಿ ‌ಸಿಗದ ಕಳೆಬರ| ನಿನ್ನೆ ಏನೇನಾಯ್ತು ಗೊತ್ತಾ?

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪ ಮಾಡಿದ್ದ ದೂರುದಾರ ಮಹಜರು ವೇಳೆ ಹಲವು ಸಮಾಧಿ ಸ್ಥಳಗಳನ್ನು ಗುರುತಿಸಿದ್ದ. ಇಂದು ಎಸ್‌ಐಟಿ ಅಧಿಕಾರಿಗಳು ಎಲ್ಲಾ ಕಾನೂನು ಪ್ರಕ್ರಿಯೆ ಮೂಲಕ ಸಮಾಧಿ ಅಗೆದಿದ್ದಾರೆ. ದೂರುದಾರ ಗುರುತಿಸಿದ ಸಮಾಧಿ ಪೈಕಿ ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲೇ ಗುರುತಿಸಿದ್ದ ಸಮಾಧಿ ಸ್ಥಳ ಅಗೆದಿದ್ದಾರೆ. ಕಾರ್ಮಿಕರ ಮೂಲಕ 4 ಅಡಿ ಅಗೆದ ಬಳಿಕ ಜೆಸಿಬಿ ಮೂಲಕ 8 ಅಡಿ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ ಮೊದಲ ಸಮಾಧಿ ಸ್ಥಳದ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. […]

ಧರ್ಮಸ್ಥಳ: ಶವ ಹೂತಿಟ್ಟ ಜಾಗದಲ್ಲಿ ‌ಸಿಗದ ಕಳೆಬರ| ನಿನ್ನೆ ಏನೇನಾಯ್ತು ಗೊತ್ತಾ? Read More »

ಧರ್ಮಸ್ಥಳ ಪ್ರಕರಣ| ಮೊದಲ ಜಾಗದಲ್ಲಿ ಅಗೆದರೂ ಸಿಗದ ಕಳೆಬರ| ಜೆಸಿಬಿ ಮೂಲಕ ಕಾರ್ಯಾಚರಣೆಗೆ ಸಿದ್ಧತೆ

ಸಮಗ್ರ ನ್ಯೂಸ್: ಧರ್ಮಸ್ಥಳ ಅರಣ್ಯದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರಂದು ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿಗಳು ಮೊದಲ ಸ್ಥಳ ಅಗೆದಲ್ಲಿ ಯಾವುದೇ ಕಳೆಬರಹ ದೊರೆತಿಲ್ಲ ಎಂದು ತನಿಖಾಧಿಕಾರಿ ಅನುಚೇತ್ ಸ್ಪಷ್ಟಪಡಿಸಿದ್ದಾರೆ‌. ಸಾಕ್ಷಿದಾರ ಗುರುತಿಸಿರುವ ಸ್ಥಳವನ್ನು ಕಾರ್ಮಿಕರ ಸಹಾಯದಿಂದ ತೆರವುಕಾರ್ಯ ಮುಂಜಾನೆಯಿಂದ ಆರಂಭಗೊಂಡಿದ್ದು ಸತತ 3 ತಾಸು ಅಗೆಯುವ ಕೆಲಸ ನಡೆದಿದೆ. ಸ್ಥಳದಲ್ಲಿ ಯಾವುದೇ ಕುರುಹು ದೊರೆತಿಲ್ಲ. ಸುಮಾರು ನಾಲ್ಕು ಅಡಿ ಆಳ, 6 ಅಡಿ ಉದ್ದ ಆಳ ಕೊರೆದಿದ್ದು, ಆದರೆ

ಧರ್ಮಸ್ಥಳ ಪ್ರಕರಣ| ಮೊದಲ ಜಾಗದಲ್ಲಿ ಅಗೆದರೂ ಸಿಗದ ಕಳೆಬರ| ಜೆಸಿಬಿ ಮೂಲಕ ಕಾರ್ಯಾಚರಣೆಗೆ ಸಿದ್ಧತೆ Read More »

ಮಂಗಳೂರು: ತೋಟಗಾರಿಕಾ‌ ಬೆಳೆಗಳಿಗೆ ವಿಮೆ ಮಾಡಿಸಲು ಇನ್ನೆರಡೇ ದಿನ ಬಾಕಿ

ಸಮಗ್ರ ನ್ಯೂಸ್: ತೋಟಗಾರಿಕೆ ಬೆಳೆಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವಾದ ಬೆಳೆ ವಿಮೆ ಮಾಡಿಸಿಕೊಳ್ಳಲು ಜು. 31 ಕೊನೇ ದಿನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು. 28 ರವರೆಗೆ 1,16,000 ನೋಂದಣಿಗಳಾಗಿವೆ. ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ವಿಮೆ ಮಾಡಿಸಿಕೊಳ್ಳುತ್ತಿದ್ದಾರೆ. ಜೂ. 23 ರಂದು ಪ್ರಸಕ್ತ ಸಾಲಿನ ವಿಮೆ ಮಾಡಿಸಿಕೊಳ್ಳಲು ಸರಕಾರ ಅಧಿಸೂಚನೆ ಹೊರಡಿಸಿತ್ತು. ಜೂ. 24ರಿಂದಲೇ ಅರ್ಜಿ ಸಲ್ಲಿಕೆ ಆರಂಭಗೊಂಡಿತ್ತು. ಬಹುತೇಕ ಅಡಿಕೆ ಬೆಳೆಗಾರರು ವಿಮೆ ನೋಂದಣಿ ಮಾಡಿಸಿದ್ದಾರೆ. ಯೋಜನೆಯಡಿ

ಮಂಗಳೂರು: ತೋಟಗಾರಿಕಾ‌ ಬೆಳೆಗಳಿಗೆ ವಿಮೆ ಮಾಡಿಸಲು ಇನ್ನೆರಡೇ ದಿನ ಬಾಕಿ Read More »

ನಿಮಿಷ ಪ್ರಿಯಾ ಗಲ್ಲು ರದ್ದಾಗಿಲ್ಲ – ವರದಿ

ಸಮಗ್ರ ನ್ಯೂಸ್: ಯೆಮೆನ್‌ ದೇಶದಲ್ಲಿ ಶಿಕ್ಷೆಗೆ ಒಳಗಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್‌ ಅಧಿಕಾರಿಗಳು ಸಂಪೂರ್ಣವಾಗಿ ರದ್ದು ಮಾಡಿದ್ದಾರೆ ಎಂದು ವರದಿಯಾಗಿತ್ತು. ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬುಬಕರ್ ಮುಸ್ಲಿಯಾರ್ ಅವರ ಕಚೇರಿ ಸೋಮವಾರ (ಜು.28) ಈ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಇದೀಗ ವಿದೇಶಾಂಗ ಸಚಿವಾಲಯವು ಈ ಸುದ್ದಿಯನ್ನು ತಿರಸ್ಕರಿಸಿದೆ. “ನಿಮಿಷಾ ಪ್ರಿಯಾ ಪ್ರಕರಣದ ಕುರಿತು ಕೆಲವು ವ್ಯಕ್ತಿಗಳು ಹಂಚಿಕೊಂಡಿರುವ ಮಾಹಿತಿಯು ತಪ್ಪಾಗಿದೆ” ಎಂದು ವಿದೇಶಾಂಗ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ

ನಿಮಿಷ ಪ್ರಿಯಾ ಗಲ್ಲು ರದ್ದಾಗಿಲ್ಲ – ವರದಿ Read More »

ನರ್ಸ್ ನಿಮಿಷ ಪ್ರಿಯಾ ಗಲ್ಲು ರದ್ದುಗೊಳಿಸಿದ‌ ಯೆಮನ್| ಅಧಿಕೃತ ಸುದ್ದಿ‌ ಹಂಚಿಕೊಂಡ ಕಾಂತಪುರಂ ಮುಸ್ಲಿಯಾರ್

ಸಮಗ್ರ ನ್ಯೂಸ್: ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಈಗ ಅಧಿಕೃತವಾಗಿ ರದ್ದುಪಡಿಸಲಾಗಿದೆ. ಈ ಶುಭ ಸುದ್ದಿಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಕಚೇರಿ ಹಂಚಿಕೊಂಡಿದೆ. “ಈ ಹಿಂದೆ ಅಮಾನತುಗೊಂಡಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಈಗ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ” ಎಂದು ಗ್ರ್ಯಾಂಡ್ ಮುಫ್ತಿ ಕಚೇರಿಯ ಹೇಳಿಕೆ ತಿಳಿಸಿದೆ. ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲೈಯರ್ ಮಧ್ಯಪ್ರವೇಶಿಸಿ ಮರುಪರಿಶೀಲಿಸುವಂತೆ ಯೆಮೆನ್ ಅಧಿಕಾರಿಗಳನ್ನು ವಿನಂತಿಸಿದ

ನರ್ಸ್ ನಿಮಿಷ ಪ್ರಿಯಾ ಗಲ್ಲು ರದ್ದುಗೊಳಿಸಿದ‌ ಯೆಮನ್| ಅಧಿಕೃತ ಸುದ್ದಿ‌ ಹಂಚಿಕೊಂಡ ಕಾಂತಪುರಂ ಮುಸ್ಲಿಯಾರ್ Read More »

ನಾಗರ ಪಂಚಮಿ ನಾಡಿಗೆ ದೊಡ್ಡದು| ನಾಗ ಪಂಚಮಿ ಆಚರಣೆ- ಆಚಾರ- ವಿಚಾರ|

ವಿಶೇಷ ವರದಿ: ಮಳೆಗಾಲ ಕಳೆದು ಹಬ್ಬಗಳ ಆಚರಣೆಗೆ ನಾಂದಿ ಹಾಡುವ ನಾಗರ ಪಂಚಮಿಯನ್ನು ಪ್ರತಿ ವರ್ಷ ಆಷಾಢ ಅಮಾವಾಸ್ಯೆಯ 5ನೇ ದಿನದಂದು, ಅಂದರೆ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತಿದೆ. ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಪುರಾಣಗಳ ಪ್ರಕಾರ, ಪಾತಾಳ ಲೋಕವು ಹಾವುಗಳ ವಾಸಸ್ಥಾನವಾಗಿದ್ದು, ನಾಗರ ಪಂಚಮಿಯಂದು ಬೆಳ್ಳಿಗ ನಾಗನಿಗೆ, ಕಲ್ಲಿನ ನಾಗನಿಗೆ ಅಥವಾ ಮರದ ನಾಗನಿಗೆ ಹಾಲನ್ನು ಅಭಿಷೇಕ ಮಾಡುವುದರಿಂದ ಪಾತಾಳ ಲೋಕದಲ್ಲಿನ ಹಾವುಗಳಿಗೆ ಅಭಿಷೇಕ ಮಾಡಿದಂತೆ ಎಂಬ ನಂಬಿಕೆಯಿದೆ. ಈ

ನಾಗರ ಪಂಚಮಿ ನಾಡಿಗೆ ದೊಡ್ಡದು| ನಾಗ ಪಂಚಮಿ ಆಚರಣೆ- ಆಚಾರ- ವಿಚಾರ| Read More »

ಧರ್ಮಸ್ಥಳ ಪ್ರಕರಣ| 13 ಸ್ಥಳಗಳನ್ನು ಗುರುತಿಸಿದ ಸಾಕ್ಷಿದಾರ| ಇಂದೂ ಮಹಜರು ಮುಂದುವರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮ ವ್ಯಾಪ್ತಿಯ ಹಲವೆಡೆ ಶವಗಳನ್ನು ಹೂತಿರುವುದಾಗಿ ಅನಾಮಿಕ ಹೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಎಸ್‌.ಐ.ಟಿ. (ವಿಶೇಷ ತನಿಖಾ ದಳ) ಅಧಿಕಾರಿಗಳ ಮುಂದೆ ಹಾಜರಾದ ಅನಾಮಿಕ ವ್ಯಕ್ತಿ, 13 ಸ್ಥಳಗಳನ್ನು ಗುರುತಿಸಿದಂತೆ ಸ್ಥಳ ಮಹಜರು ನಡೆಸಲಾಗಿದೆ. ಜು.27 ರಂದು ಮಂಗಳೂರಿನಲ್ಲಿ ಅನಾಮಿಕನ ಸಂಪೂರ್ಣ ಹೇಳಿಕೆ ಪಡೆದು ಪ್ರಕರಣವನ್ನು ಚುರುಕುಗೊಳಿಸಿದ ತನಿಖಾಧಿಕಾರಿ ಜಿತೇಂದ್ರ ಕುಮಾರ್‌ ದಯಾಮ, ಎಸ್ಪಿ ಸಿ.ಎ.ಸೈಮನ್‌ ಹಾಗೂ ಅಧಿಕಾರಿಗಳ ತಂಡವು ಬೆಳಗ್ಗೆಯೇ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಎಸ್‌.ಐ.ಟಿ. ಕಚೇರಿಗೆ ಆಗಮಿಸಿದ್ದರು. ಅನಾಮಿಕ ತನ್ನ

ಧರ್ಮಸ್ಥಳ ಪ್ರಕರಣ| 13 ಸ್ಥಳಗಳನ್ನು ಗುರುತಿಸಿದ ಸಾಕ್ಷಿದಾರ| ಇಂದೂ ಮಹಜರು ಮುಂದುವರಿಕೆ ಸಾಧ್ಯತೆ Read More »

ಕೊನೆರು ಹಂಪಿಗೆ ‌ಸೋಲುಣಿಸಿ ಚೆಸ್ ವಿಶ್ವಕಪ್ ಕಿರೀಟ ಗೆದ್ದ‌ ಭಾರತದ ದಿವ್ಯಾ ದೇಶ್ ಮುಖ್

ಸಮಗ್ರ ನ್ಯೂಸ್: ಕೊನೆರು ಹಂಪಿಯನ್ನು ಸೋಲಿಸುವ ಮೂಲಕ ದಿವ್ಯಾ ದೇಶಮುಖ್ ‘ಚೆಸ್‌ ವಿಶ್ವಕಪ್‌ ಕಿರೀಟ’ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಸೋಮವಾರ ನಡೆದ ಟೈ-ಬ್ರೇಕ್ಗಳಲ್ಲಿ ತಮ್ಮ ದೇಶದವರೇ ಆದ ಕೊನೆರು ಹಂಪಿ ಅವರನ್ನು ಸೋಲಿಸಿ 2025 ರ ಮಹಿಳಾ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಯುವ ಸೆನ್ಸೇಷನ್ ದಿವ್ಯಾ ದೇಶಮುಖ್ ಇತಿಹಾಸ ಸೃಷ್ಟಿಸಿದರು. ಆರಂಭದಿಂದಲೂ ಸಮಬಲದಿಂದ ಕೂಡಿದ್ದ ಪಂದ್ಯ, ಭಾನುವಾರ ನಡೆದ ಕ್ಲಾಸಿಕಲ್ ಸುತ್ತಿನ ಪಂದ್ಯವು ಸಮಬಲದಲ್ಲಿ ಕೊನೆಗೊಂಡು, ಫೈನಲ್ ಅನ್ನು

ಕೊನೆರು ಹಂಪಿಗೆ ‌ಸೋಲುಣಿಸಿ ಚೆಸ್ ವಿಶ್ವಕಪ್ ಕಿರೀಟ ಗೆದ್ದ‌ ಭಾರತದ ದಿವ್ಯಾ ದೇಶ್ ಮುಖ್ Read More »

ನಿರಂತರ 170 ಗಂಟೆ ಭರತನಾಟ್ಯ ಪ್ರದರ್ಶನ| ವಿಶ್ವ ದಾಖಲೆ ಬರೆದ ಮಂಗಳೂರಿನ ರೆಮೋನಾ ಪಿರೇರಾ

ಸಮಗ್ರ ನ್ಯೂಸ್: ನಿರಂತರ 170 ಗಂಟೆ ಭರತನಾಟ್ಯ ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ‌ ಬಿಎ ವಿದ್ಯಾರ್ಥಿನಿ ರೆಮೋನಾ ಸಾಧನೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಯಾಗಿದೆ. ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್​​ನಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಸತತ ಏಳು ದಿನಗಳ ಕಾಲ ರಾತ್ರಿ ಹಗಲೆನ್ನದೆ ದಿನವಿಡೀ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ. ಸತತ 127 ಗಂಟೆ ಭರತನಾಟ್ಯ ಪ್ರದರ್ಶನ

ನಿರಂತರ 170 ಗಂಟೆ ಭರತನಾಟ್ಯ ಪ್ರದರ್ಶನ| ವಿಶ್ವ ದಾಖಲೆ ಬರೆದ ಮಂಗಳೂರಿನ ರೆಮೋನಾ ಪಿರೇರಾ Read More »

ಧರ್ಮಸ್ಥಳ ತಲೆಬುರುಡೆ ಪ್ರಕರಣ| ಬೆಳ್ತಂಗಡಿ ಬಂದಿಳಿದ ಎಸ್ಐಟಿ| ಇಂದು ಸ್ಥಳ ಮಹಜರು ಪ್ರಕ್ರಿಯೆ ಶುರು

ಸಮಗ್ರ ನ್ಯೂಸ್: ಧರ್ಮಸ್ಥಳ ದೂರು ಪ್ರಕರಣದ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಬುರುಡೆ ತೆಗೆದ ಜಾಗದಲ್ಲಿ ಎಸ್.ಐ.ಟಿ ಅಧಿಕಾರಿಗಳು ದೂರುದಾರನ ಜೊತೆ ಜುಲೈ 28 ರಂದು ಹೋಗಿ ಸ್ಥಳ ಮಹಜರು ನಡೆಸಲಿದ್ದಾರೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು, ಬೆಳ್ತಂಗಡಿ ಎಸ್.ಐ.ಟಿ ಕಚೇರಿಯ ಮುಂದೆ ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಮಹಜರಿಗೆ ತಯಾರಿ ನಡೆಸುತ್ತಿದ್ದಾರೆ. ಮೊದಲು ಬೆಳ್ತಂಗಡಿ ಕಚೇರಿಗೆ ಬಂದ ಎಸ್.ಐ.ಟಿ ಅಧಿಕಾರಿಗಳು ದೂರುದಾರನನ್ನು ಕರೆಸಿಕೊಂಡಿದ್ದು, ಕೆಲವು ದಾಖಲೆಗಳಿಗೆ

ಧರ್ಮಸ್ಥಳ ತಲೆಬುರುಡೆ ಪ್ರಕರಣ| ಬೆಳ್ತಂಗಡಿ ಬಂದಿಳಿದ ಎಸ್ಐಟಿ| ಇಂದು ಸ್ಥಳ ಮಹಜರು ಪ್ರಕ್ರಿಯೆ ಶುರು Read More »