ಧರ್ಮಸ್ಥಳ: ಉತ್ಖನನ ವೇಳೆ ರವಿಕೆ, ಎಟಿಎಂ‌ ಕಾರ್ಡ್ ಸಿಕ್ಕಿದೆಯಾ? ಎಸ್ಐಟಿ ತಂಡ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಧರ್ಮಸ್ಥಳ ಬುರುಡೆ ಪತ್ತೆ ಕೇಸ್​ನ ಎಸ್​ಐಟಿ ತನಿಖೆ ಚುರುಕುಗೊಂಡಿದೆ. ನೇತ್ರಾವತಿ ತಟದಲ್ಲಿ 2ನೇ ದಿನದ ಉತ್ಖನನ ಬಿರುಸಿನಿಂದ ನಡೆದಿದೆ ಇಂದಾದ್ರೂ ಬುರುಡೆ ಸಿಗುತ್ತಾ ಎಂದು ಹುಡುಕಾಟ ನಡೆಸಿದ್ದ ಅಧಿಕಾರಿಗಳು ಖಾಲಿ ಕೈಯಲ್ಲಿ ಮರಳಿದ್ದಾರೆ.

Ad Widget ... ..

ನಿಗೂಢ ವ್ಯಕ್ತಿ ತೋರಿಸಿದ್ದ ಸ್ಥಳದಲ್ಲಿ 2ನೇ ದಿನವೂ ಎಷ್ಟೇ ಅಗೆದರೂ ಬಗೆದರೂ ಅಸ್ಥಿಪಂಜರವಾಗಲಿ, ಸಣ್ಣ ಮೂಳೆ ಕೂಡ ಪತ್ತೆಯಾಗಲಿಲ್ಲ. ಎಷ್ಟೇ ಅಗೆದರೂ, ಬಗೆದರೂ ತಲೆಬುರುಡೆ ಸಿಗಲಿಲ್ಲ. ಬರೋಬ್ಬರಿ 5 ಸಮಾಧಿ ಸ್ಥಳಗಳಲ್ಲಿ ಉತ್ಖನನ ಮಾಡಿದ್ರೂ ಯಾವುದೇ ಕುರುಹು ಪತ್ತೆಯಾಗಲಿಲ್ಲ.

Ad Widget

ಮೊದಲ ದಿನದ ಕಾರ್ಯಾಚರಣೆಯಲ್ಲಿ 1ನೇ ಪಾಯಿಂಟ್‌ನಲ್ಲಿ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ, ಒಂದನೇ ಸ್ಪಾಟ್‌ನಲ್ಲಿ ಎರಡು ಐಡಿ ಕಾರ್ಡ್​ಗಳು ಸಿಕ್ಕಿವೆ ಎಂದು ಧರ್ಮಸ್ಥಳದಿಂದ ಕಾಣೆಯಾಗಿದ್ದಾರೆ ಎನ್ನಲಾದ ಅನನ್ಯ ಭಟ್ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಪವಿತ್ರಾ ಪ್ರಕಟಣೆ ಬಿಡುಗಡೆ ಮಾಡಿದ್ದರು. ಆದರೆ, ವಕೀಲ ಮಂಜುನಾಥ್ ಹೇಳಿಕೆಯನ್ನು ಎಸ್‌ಐಟಿ ಟೀಂ ಸಂಪೂರ್ಣವಾಗಿ ತಳ್ಳಿಹಾಕಿದೆ.

ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಮೊದಲನೇ ಸ್ಪಾಟ್‌ನಲ್ಲಿ ಒಂದು ಕೆಂಪು ರವಿಕೆ, ಒಂದು ಪ್ಯಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿತ್ತು ಎಂದಿದ್ದರು.

ಎಸ್‌ಐಟಿ ಖಚಿತಪಡಿಸುವ ಮೊದಲೇ ಮಂಜುನಾಥ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು. ಅಲ್ಲದೇ ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿನ ಮಾಹಿತಿಯನ್ನು SIT ಅಲ್ಲಗಳೆದಿದೆ.

ಮೊದಲ ನಾಲ್ಕು ಸ್ಪಾಟ್‌ಗಳಲ್ಲಿ ಯಾವುದೇ ಕಳೇಬರ ಸಿಕ್ಕಿರಲಿಲ್ಲ. ಎಸ್‌ಐಟಿ ಸಿಬ್ಬಂದಿ 5ನೇ ಸ್ಪಾಟ್‌ನಲ್ಲಿ ಕೂಡ ಹುಡುಕಿದರೂ ಯಾವುದೇ ಕಳೆಬರದ ಕುರುಹುಗಳು ಪತ್ತೆಯಾಗಿಲ್ಲ.

ಎಸ್‌ಐಟಿ ತಂಡ ಒಂದೊಂದು ಸ್ಪಾಟ್‌ನಲ್ಲೂ 6 ಅಡಿಗಳಷ್ಟು ಅಗೆದು ಕಳೇಬರದ ಕುರುಹವನ್ನು ಹುಡುಕಾಟ ನಡೆಸಿದ್ದಾರೆ. ಆರಂಭದಲ್ಲಿ ಮನುಷ್ಯರಿಂದ ಹುಡುಕಾಟ ನಡೆಸಿ ಬಳಿಕ ಹಿಟಾಚಿ ಮೂಲಕ ಅಕ್ಕಪಕ್ಕದ ಸ್ಥಳದಲ್ಲಿ ಹುಡುಕಾಟ ಮಾಡಲಾಯಿತು. ಆದ್ರೂ ಕೂಡ ಯಾವುದೇ ಕಳೆಬರದ ಕುರುಹುಗಳು ಪತ್ತೆಯಾಗಿಲ್ವಂತೆ.

ಬುರುಡೆ ತನಿಖೆ ಎಲ್ಲಿಗೆ ಬಂತು?
ಮೊದಲು ನೇತ್ರಾವತಿ ತೀರದಲ್ಲಿ ಸಮಾಧಿ ಅಗೆಲಾಯ್ತು. 15 ಅಡಿ ಅಗಲ 8 ಅಡಿ ಆಳದವರೆಗೂ ಅಗೆದ್ರೂ ಏನೂ ಪತ್ತೆಯಾಗಲಿಲ್ಲ. 2ನೇ ಸ್ಥಳವಾದ ದಟ್ಟಾರಣ್ಯದಲ್ಲಿ 6 ಅಡಿ ಅಗಲ 6 ಅಡಿ ಆಳದವರೆಗೂ ಅಗೆದ್ರೂ ಯಾವುದೇ ಶವ, ಎಲುಬು ಪತ್ತೆಯಾಗಲಿಲ್ಲ. ನೇತ್ರಾವತಿ ಸ್ನಾನಘಟ್ಟ ಬಳಿ ಗುರುತಿಸಿದ್ದ 3ನೇ ಸ್ಥಳದಲ್ಲಿ 6 ಅಡಿ ಅಗಲ, 6 ಅಡಿ ಆಳ ಅಗೆದ್ರೂ ಏನೂ ಪತ್ತೆಯಾಗಲಿಲ್ಲ. 4ನೇ ಸ್ಥಳವಾದ ನೇತ್ರಾವತಿ ಗುಡ್ಡಪ್ರದೇಶದಲ್ಲೂ 6 ಅಡಿ ಅಗೆದರೂ ಶವದ ಯಾವ ಕುರುಹು ಪತ್ತೆಯಾಗಲಿಲ್ಲ. ಅದೇ ಪ್ರದೇಶದಲ್ಲಿ 5ನೇ ಸ್ಥಳದಲ್ಲಿಯೂ ಕೂಡ 6 ಅಡಿ ಅಗಲ, 6 ಅಡಿ ಆಳದವರೆಗೂ ಅಗೆದರೂ ಅಸ್ಥಿಪಂಜರವಾಗಲಿ, ಒಂದು ಮೂಳೆಯಾದ್ರೂ ಪತ್ತೆಯಾಗಲಿಲ್ಲ.

Leave a Comment

Your email address will not be published. Required fields are marked *