ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ರಾಶಿ, ನಕ್ಷತ್ರಗಳ ಬದಲಾವಣೆ ದ್ವಾದಶರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅದ್ರಲ್ಲೂ ಸೂರ್ಯ ಹಾಗೂ ಶುಕ್ರನ ಬದಲಾವಣೆ ಕೆಲವು ರಾಶಿಗೆ ಶುಭ, ಕೆಲವು ರಾಶಿಗೆ ಅಶುಭ ಫಲವನ್ನು ನೀಡುತ್ತದೆ. ಹಾಗಾದ್ರೆ ಈ ವಾರದ ರಾಶಿಗಳ ಭವಿಷ್ಯ ಹೇಗಿದೆ ಅನ್ನೋದನ್ನು ತಿಳಿಯೋಣಾ.

Ad Widget ... ..

ಮೇಷರಾಶಿ: ಸೂರ್ಯನ ಸಂಚಾರವು ದಕ್ಷಿಣಾಯಣ ಪಥಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಹಬ್ಬ-ಹರಿದಿನಗಳ ಆಚರಣೆ ಆರಂಭವಾಗಿ ವೈಕುಂಠ ಏಕಾದಶಿಯಂದು ಸಮಾಪ್ತವಾಗುತ್ತದೆ. ಈ ಸಂಚಾರದಲ್ಲಿ ಮನುಷ್ಯನು ಸಂಕಷ್ಟಗಳ ಸಂಕೋಲೆಗಳಿಂದ ಬಿಡಿಸಿಕೊಂಡು ಧೈರ್ಯ, ಸ್ಥೈರ್ಯ, ದ್ರವ್ಯ, ಧನ ಎಲ್ಲವನ್ನು ಸಂಪಾದಿಸಿ, ಮಾಡಬೇಕಾದ ವ್ರತಾದಿಗಳನ್ನು ಶ್ರಾವಣ, ಭಾದ್ರಪದ ಆಶ್ವೀಜ ಮಾಸಗಳಲ್ಲಿ ಮಾಡಿ. ಮೇಷ ರಾಶಿಯವರು ದೈವ ಒಂದನ್ನು ಗೆದ್ದರೆ ಸೋಲಿಲ್ಲದ ಅಶ್ವಸವಾರನಂತೆ ಓಡಬಹುದು. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ಸೂರ್ಯನ ಬೆಳಕು, ಅನುಗ್ರಹ ಮುಖ್ಯ.

Ad Widget

ವೃಷಭ: ಶುಕ್ರಾಧಿಪತ್ಯವುಳ್ಳ ವೃಷಭ ರಾಶಿಯವರು ದೇವರನ್ನು ಸ್ಮರಿಸಿ. ದೇವರ ಪಾದಗಳನ್ನು ನೆನೆದರೆ ಸಾಕು ಕಾರ್ಯಗಳು ಕೈಗೂಡುತ್ತ್ತೆ. ಕಾರ್ಯಸಾಧನೆ ಆಗುವವರೆಗೂ ಶನಿ ವಕ್ರಗತಿಯಲ್ಲಿ ಇರುವುದರಿಂದ ಸವದತ್ತಿಯ ಎಲ್ಲಮ್ಮನನ್ನು ಪೂಜಿಸಿದರೆ ಚಿಂತಿತ ಮನೋಕಾಮನೆಗಳು ನೆರವೇರುವವು.

ಮಿಥುನ: ಈ ರಾಶಿಯವರಿಗೆ ಜನ್ಮ ಗುರುವು ಬಾಧೆಯನ್ನು ಕೊಡದಿದ್ದರೂ, ಮಿಥುನಾಧಿಪತಿ ಬುಧ ದ್ವಿತೀಯದಲ್ಲಿ ಇರುವುದರಿಂದ ಸ್ವಲ್ಪ ಮಟ್ಟಿಗೆ ಲಾಭಾಂಶ ಕೊಡುವ ಜೀವನ ನಡೆಯುತ್ತದೆ. ಈ ಸಂದರ್ಭದಲ್ಲಿ, ಮನುಷ್ಯನ ರೂಪದಲ್ಲಿ ಮನುಷ್ಯರಿಗೆ ಬದುಕುವ ಕಲೆಯನ್ನು ತೋರಿದವನಾದ ಶ್ರೀರಾಮಚಂದ್ರನನ್ನು ಪೂಜಿಸಿದರೆ ನಿಮ್ಮ ಜೀವನವು ಮುಂದೆ ಸಾಗಿ ಸಮಯವೂ ಉತ್ತಮವಾಗಿರುತ್ತದೆ.

ಕಟಕ: ದ್ವಾದಶದಲ್ಲಿ ಗುರುವಿದ್ದು, ಶನಿಯು ವಕ್ರಗತಿಯಲ್ಲಿ ಅಷ್ಟಮಕ್ಕೆ ಬಂದಿದ್ದಾನೆ. ಶನಿ-ರಾಹು ದ್ವಂದ್ವವನ್ನು ಉಂಟುಮಾಡಿ, ಶಾಂತತೆಯನ್ನು ಕೊಡದೆ ಸದಾ ಚಿಂತೆಯಲ್ಲಿಯೇ ಇಟ್ಟಿರುತ್ತಾರೆೆ. ಅದನ್ನು ದೂರ ಮಾಡಬೇಕಾದರೆ ‘ಚಂದ್ರಮಾ ಮನಸೋ ಜಾತಹಃ’ – ನಿಮ್ಮ ಮನಸ್ಸನ್ನು ದೈವವೆಂಬ ಹಗ್ಗದಿಂದ ಕಟ್ಟಿಹಾಕಿ ಶ್ರೀರಾಮನನ್ನು ಪ್ರಾರ್ಥಿಸಿ. ಭಗವದ್ ಭಕ್ತಿಯಲ್ಲಿ ದೇವರನ್ನು ನೋಡಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ.

ಸಿಂಹ: ಏಕಾದಶದಲ್ಲಿ ಗುರು ನಿಮ್ಮನ್ನು ಕಾಯಲು ಕುಳಿತಿರುವಾಗ, ನಿಮಗೆ ಯಾವ ಕೊರತೆ, ಯಾರ ಭಯ? ಈ ಮನಸ್ಸು ಶುದ್ಧಾತ್ಮದಲ್ಲಿ ಬೆರೆತಾಗ ಯಾವ ರಾಶಿಯಲ್ಲಿ ಗ್ರಹಗಳು ಎಲ್ಲಿಯೇ ಇರಲಿ, ನಿಮ್ಮನ್ನು ಜೋಡಿ-ಕುದುರೆಗಾಡಿಯಲ್ಲಿ ಕೂರಿಸಿ ನಿಮಗೆ ಇಷ್ಟವಿರುವ ಸ್ಥಳಕ್ಕೆ ಬಿಟ್ಟು ಕ್ಷೇಮ-ಸಂಪತ್ತನ್ನು ಕೊಟ್ಟು ಹರಸುತ್ತಾರೆ.

ಕನ್ಯಾ: ವಕ್ರ ಶನಿಯು ಬಂದಿರುವುದರಿಂದ 6ನೇ ಮನೆಯ ಶನಿಯ ಫಲ ನೀಡುತ್ತಾನೆ. ಆದರೆ ರಾಹುವಿನಿಂದ ವೈಫಲ್ಯ ಬರುವುದು ಸಹಜ. ಅದನ್ನು ಮೆಟ್ಟಿ ನಿಲ್ಲಬೇಕಾದರೆ ಶಂಕುಲ-ನಾಗದೇವರನ್ನು ಪ್ರಾರ್ಥಿಸಿ ಮನೆಯಲ್ಲಿ ಬೆಳ್ಳಿಯ ನಾಗದೇವರಿಗೆ ನಿತ್ಯವೂ ಹಾಲಿಗೆ ಜೇನುತುಪ್ಪ ಬೆರೆಸಿ ಅಭಿಷೇಕ ಮಾಡಿ. ನಿಮ್ಮನ್ನು ಕಾಪಾಡುವ ಏಕೈಕ ದೈವವೆಂದರೆ ಸುಬ್ರಹ್ಮಣ್ಯ ದೇವರು. ಆರೋಗ್ಯದ ಬಗ್ಗೆ ಗಮನವಿರಲಿ.

ತುಲಾ: ಗುರುವಿನ ಅನುಗ್ರಹವು ಪರಿಪೂರ್ಣವಾಗಿದ್ದು ವಕ್ರಗತಿಯಲ್ಲಿ ಶನಿಯು ರಾಹುವಿನೊಂದಿಗೆ ಇದ್ದಾನೆ. ಯಾವುದೇ ಸಲಹೆ ಕೊಡಬೇಕಾದರೆ ಹತ್ತು ಹಲವಾರು ಬಾರಿ ಯೋಚಿಸಿ ಸೂಕ್ತಪರಿಹಾರ ಕಂಡುಕೊಳ್ಳಿ. ನಿಮ್ಮನ್ನು ಅವಲಂಬಿಸಿದವರಿಗೆ ಮಾರ್ಗದರ್ಶನ ನೀಡಿ. ಲಲಿತಾ ತ್ರಿಪುರ ಸುಂದರಿಯ ಛಾಯೆ ನಿಮ್ಮಲ್ಲಿರುತ್ತದೆ. ಅತಿ ಆಸೆಪಟ್ಟು ತಕ್ಕಡಿಯನ್ನು ಮುರಿದು ದುಃಖ ಪಡಬೇಡಿ.

ವೃಶ್ಚಿಕ: ತಾತ್ಕಾಲಿಕವಾಗಿ ಶನಿಯು ಚತುರ್ಥಕ್ಕೆ ಬಂದಿದ್ದು, ಅಷ್ಟಮದಲ್ಲಿ ಗುರುವಿರುವುದರಿಂದ ವಿಘ್ನಹರ ಗಣಪತಿಯನ್ನು ಪೂಜಿಸಲು ಗ್ರಹಗಳು ಸೂಚಿಸುತ್ತವೆ. ನಿಮಗೆ ಧನವು ಸಿಗುವುದೋ ಅಲ್ಲಿ ಕೆಲಸ ಕಾರ್ಯ ಪೂರ್ಣಗೊಳಿಸಲು ಶಕ್ತಿಯನ್ನು ತುಂಬಿ ಅನುಗ್ರಹ ಮಾಡುತ್ತಾನೆ. ಧನಸಂಪತ್ತಿಗೆ ಕೊರತೆಯಿಲ್ಲ. ಉಗ್ರನರಸಿಂಗನನ್ನು ಪ್ರಾರ್ಥಿಸಿ .

ಧನಸ್ಸು: ಸಪ್ತಮ ಗುರು ಸ್ಥಿತಂ, ಸುಖ ಶಾಂತಿ ಕಾರ್ಯ ಜಯಂ ಎಂದು ಹೇಳಿದ್ದಾರೆ. ಸಪ್ತಮದಲ್ಲಿ ಗುರುವಿದ್ದಾಗ ಬೇರೆ ವಿಚಾರಕ್ಕೆ ತಲೆಕೆಡಿಸಿಕೊಳ್ಳದೆ ಅತಿಮುಖ್ಯವಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ದಾರಿಯಲ್ಲಿ ನಡೆದರೆ, ನಿಮಗೆ ಎಲ್ಲಿಯ ಕೊರತೆ? ನಿಮ್ಮ ರಾಜಯೋಗದ ದಿನಗಳು ಹತ್ತಿರದಲ್ಲಿವೆ.

ಮಕರ: ಅಷ್ಟಮದಲ್ಲಿ ಕುಜ-ಕೇತು, ದ್ವಿತೀಯ ರಾಹು, ಶಾಂತಿ, ಮೌನವೆಂಬ ಆಭರಣ ನಿಮ್ಮದಾಗಲಿ. ದೇವರ ಗುಡಿಯಾಗಲಿ ಅಥವಾ ಮನೆಯಲ್ಲಿ ಗಂಟೆ ಹೊಡೆದರೆ ಅದು ಎಚ್ಚರಿಕೆಯ ಗಂಟೆ. ಅಷ್ಟಮದಲ್ಲಿರುವ ಗ್ರಹಗಳು ಎಚ್ಚರಿಕೆ ಕೊಡುತ್ತಿವೆ. ಈ ಸಮಯದಲ್ಲಿ ಭಗವಂತನನ್ನು, ಅದರಲ್ಲೂ ಜಗನ್ಮಾತೆಯಾದ ಶ್ರೀಚಕ್ರರಾಜರಾಜೇಶ್ವರಿಯನ್ನು ಹೃದಯ ಕಮದಲ್ಲಿಟ್ಟು ಪೂಜಿಸಿ ಬೇಕಾದ್ದನ್ನು ಪಡೆಯಬಹುದು.

ಕುಂಭ: ಖಿನ್ನ ಮನಸ್ಕರಾಗಿ ಬಾಳದೆ, ಬಂದದ್ದು ಬರಲಿ, ಶ್ರೀಕೃಷ್ಣನ ದಯೆ ಇರಲಿ ಎಂದು ಮುನ್ನಡೆಯಿರಿ. ದೈವಬಲ ಎಲ್ಲಕ್ಕಿಂತ ಮಿಗಿಲಾದದ್ದು, ದಿನದಲ್ಲಿ ಒಂದು ಗಂಟೆಯಾದರೂ ದೇವರ ಪ್ರಾರ್ಥನೆಗೆ ಸಮಯ ಕೊಡಬೇಕು. ರೋಗಗಳು ಬರುವುದಿಲ್ಲ. ಇಚ್ಛಿತ ಕಾಮನೆಗಳೂ ಪುರ್ಣಗೊಳ್ಳುತ್ತವೆ. ರುಕ್ಮಿಣೀ-ಸತ್ಯಭಾಮ ಸಹಿತ ಶ್ರೀಕೃಷ್ಣನನ್ನು ಆರಾಧಿಸಿ.

ಮೀನ: ಈ ರಾಶಿಯವರು ಜಲದಂತೆ ಶುದ್ಧವಾದ ಭಕ್ತಿಯನ್ನು ಇಟ್ಟುಕೊಂಡರೆ, ಕಮಲ ನೇತ್ರಗಳಿಗೆ ಪರಮಾತ್ಮನೇ ಕಂಡು, ಕೌಂಡಿನ್ಯ ಖುಷಿಗೆ ಸಾಕ್ಷಾತ್ ಶ್ರೀಕೃಷ್ಣನೇ ಅನಂತನ ಅವತಾರದಲ್ಲಿ ರಾಜಪದವಿಯನ್ನು ಕೊಟ್ಟಂತೆ, ಶನಿ ಸಂಚಾರದಲ್ಲೂ ನಿಮ್ಮ ಬಾಳು ಸುಗಮವಾದ ದಾರಿಯಲ್ಲಿ ಸಾಗುತ್ತದೆ. ಆದರೆ ಗುರುವು ಚತುರ್ಥದಲ್ಲಿ ಇರುವುದರಿಂದ ಗುರುವಾಯೂರಪ್ಪನನ್ನು ದರ್ಶಿಸಿ, ಪ್ರಾರ್ಥಿಸಿ. ದ್ವಾದಶ ರಾಹುವಿಗೆ ಲಕ್ಷ್ಮೀ ನರಸಿಂಹನನ್ನು ಪೂಜಿಸಿ.

Leave a Comment

Your email address will not be published. Required fields are marked *