ಚಿಕ್ಕಮಗಳೂರು: ಹುಡುಗಿ ಕೈಕೊಟ್ಟು ಹೋದಳೆಂದು ಅರೆಹುಚ್ಚನಾದ ಯುವಕ

ಸಮಗ್ರ ನ್ಯೂಸ್: ಪ್ರೀತಿ ವಿಫಲವಾದ ದುಃಖದಲ್ಲಿಯೇ ಅರೆಹುಚ್ಚನಾದ ಯುವಕ, ತನ್ನ ತಲೆಗೆ ಬಾಟಲಿಯಿಂದ ಹೊಡೆದುಕೊಂಡಿದ್ದಾನೆ. ತನ್ನ ತಲೆಯಲ್ಲಿ ರಕ್ತ ಹರಿಯುತ್ತಿದ್ದರೂ, ಸುಮ್ಮನೆ ಕುಳಿತಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್‌ಪೋಸ್ಟ್ ಬಳಿ ಗುರುವಾರ ಬೆಳಕಿಗೆ ಬಂದಿದೆ.

Ad Widget ... ..

ತಮಿಳುನಾಡು ಮೂಲದ ಈ ಯುವಕ, ಕೆಲ ತಿಂಗಳ ಹಿಂದೆ ಕಾಫಿತೋಟದ ಕೆಲಸಕ್ಕಾಗಿ ಚಿಕ್ಕಮಗಳೂರು ಬಂದಿದ್ದರು. ಕೆಲಸದಲ್ಲಿಯೇ ಇಲ್ಲಿಯ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದರು. ಆದರೆ, ಕಾಲಕ್ರಮೇಣ ಹುಡುಗಿ ಕೈಕೊಟ್ಟು ಬೇರೆ ಯಾರೊಂದಿಗೋ ಮದುವೆಯಾಗಿದ್ದಾಳೆ. ಈ ಘಟನೆಯು ಯುವಕನ ಮನಸ್ಸಿಗೆ ಆಘಾತ ಉಂಟುಮಾಡಿ, ತಮಿಳುನಾಡಿಗೆ ಹಿಂದಿರುಗಿದ್ದಾನೆ. ಆದರೆ, ಈ ದುಃಖ ಮರೆಯದ ಯುವಕ ಮತ್ತೆ ಇಂದೇ (ಜು.18) ಕೈಮರ ಚೆಕ್‌ಪೋಸ್ಟ್ ಬಳಿ ಬಂದು ಬಾಟಲಿಯೊಂದನ್ನು ತನ್ನ ತಲೆಗೆ ಹೊಡೆದು ರಕ್ತ ಹರಿಯುವ ಸ್ಥಿತಿಯಲ್ಲಿ ನಡು ರಸ್ತೆಯೇ ಸುಮ್ಮನೆ ಕುಳಿತಿದ್ದನು.

Ad Widget

ಅಲ್ಲಿನ ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ತಕ್ಷಣ ಗಮನಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಶಾರೀರಿಕ ಸ್ಥಿತಿ ಸ್ಥಿರವಿದ್ದರೂ, ಮಾನಸಿಕ ಸ್ಥಿತಿ ಅತ್ಯಂತ ಅಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *