ಮಂಗಳೂರು: ಸಾಲ ಕೊಡುವುದಾಗಿ ಬಹುಕೋಟಿ ವಂಚನೆ| ಸಿನಿಮೀಯ ಶೈಲಿಯಲ್ಲಿ ಸಿಕ್ಕಿಬಿದ್ದ ಮಹಾವಂಚಕ ರೋಹನ್ ಸಲ್ದಾನಾ

ಸಮಗ್ರ ನ್ಯೂಸ್: ಸಾಲ ಕೊಡುವುದಾಗಿ ಕೋಟ್ಯಂತರ ರೂ ಹಣ ಪಡೆದು ವಂಚನೆ ಮಾಡುತ್ತಿದ್ದ ನಟೋರಿಯಸ್ ರೋಹನ್ ಸಲ್ಡಾನಾ ಎಂಬಾತನನ್ನ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಅನೇಕ ವರ್ಷಗಳಿಂದ 200 ಕೋಟಿಗೂ ಅಧಿಕ ವಂಚನೆ ಮಾಡಿದ್ದಾನೆ.

Ad Widget ... ..

ಆಂಧ್ರ ಪ್ರದೇಶ ಮೂಲದ ಸಿಲ್ಕ್ ಸ್ಯಾರಿ ತಯಾರಿಕ ಕಂಪನಿ ಮಾಲೀಕ, ಸಾಲಕ್ಕಾಗಿ 2023ರಲ್ಲಿ ಬೆಂಗಳೂರಿನಲ್ಲಿ ಫೈನಾನ್ಸ್ ಕನ್ಸಲ್‌ಟೆನ್ಸಿ ನಡೆಸಿಕೊಂಡಿರುವ ವಿಮಲೇಶ್ ಎಂಬಾತನ ಮೊರೆ ಹೋಗಿದ್ದ. ಆಗ ವಿಮಲೇಶ್ ಇದೇ ರೋಹನ್‌ನನ್ನ ಪರಿಚಯಿಸಿಕೊಟ್ಟಿದ್ದ. ಸಾಲ ಕೊಡಿಸೋದಕ್ಕೆ ಒಂದು ಸ್ಟ್ಯಾಂಪ್ ಪೇಪರ್‌ಗೆಂದು ರೋಹನ್ ಉದ್ಯಮಿ ಬಳಿ 40 ಲಕ್ಷ ರೂ ಹಣ ಪಡೆದಿದ್ದ. ಇದಾದ 15 ದಿನಗಳ ಬಳಿಕ ರೋಹನ್ ಎಸ್ಕೇಪ್ ಆಗಿದ್ದ.

Ad Widget

ಮೋಸ ಹೋಗಿದ್ದು ಅರಿವಾದ ಉದ್ಯಮಿ, ಕಳೆದ ವರ್ಷ ಜುಲೈ 16ರಂದು ಚಿತ್ರದುರ್ಗ ನಗರ ಠಾಣೆಗೆ ದೂರು ಕೊಟ್ಟಿದ್ದರು. ಆಗ ಈ ಇಬ್ಬರ ನಡುವೆ ಇದ್ದ ವಿಮಲೇಶ್ ಎಂಬಾತನನ್ನ ಮಂಗಳೂರಿನ ಪೊಲೀಸರು ಬಂಧಿಸಿದ್ದರು. ಆಗಲೇ ಈ ರೋಹನ್​ನ ವಂಚನೆ ಕಹಾನಿ ಬಯಲಾಗಿದೆ.

ರೋಹನ್, ದೇಶದ ದೊಡ್ಡ ದೊಡ್ಡ ಕುಳಗಳಿಗೆ ಗಾಳ ಹಾಕುತ್ತಿದ್ದ. ಐಷಾರಾಮಿ ವ್ಯಕ್ತಿಗಳು, ಉದ್ಯಮಿಗಳನ್ನ ಟಾರ್ಗೆಟ್ ಮಾಡುತ್ತಿದ್ದ. ಭೂ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಸಿ, ಮಂಗಳೂರಿನ ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಕುದುರಿಸುತ್ತಿದ್ದ. ರೋಹನ್, ಕೈಸ್ತ ಸಮುದಾಯದವನಾದರೂ ಹಿಂದೂ ಗುರೂಜಿ ಫೋಟೋವನ್ನು ತನ್ನ ಮನೆಯಲ್ಲಿ ಹಾಕಿದ್ದಾನೆ. ಆ ಮೂಲಕ ಕೂಡ ವಂಚಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಹಿಂದೂ ಗುರೂಜಿ ನೀಮ್ ಕರೋಲಿ ಬಾಬಾ ಫೋಟೋವನ್ನು ರೋಷನ್ ತನ್ನ ಕಚೇರಿಯಲ್ಲಿ ಹಾಕಿದ್ದಾನೆ. ಆ ಮೂಲಕ ಉತ್ತರ ಭಾರತದ ಬಹುಕೋಟಿ ಉದ್ಯಮಿಗಳನ್ನು ವಂಚನೆಗೆ ನಾನು ಬಾಬಾ ಭಕ್ತ ಅಂತ ನಂಬಿಸುತ್ತಿದ್ದ ಎನ್ನಲಾಗಿದೆ.

ನೀಮ್ ಕರೋಲಿ ಬಾಬಾ ಆಂಜನೇಯನ ಅವತಾರ ರೂಪಿ ಎಂದೇ ಪ್ರಸಿದ್ಧಿ. ಸ್ವತಃ ಆಂಜನೇಯ ನೀಡಿರುವ ಪಾತ್ರೆಯೊಂದು ಬಾಬಾ ಬಳಿ ಇದೆ ಎನ್ನಲಾಗುತ್ತೆ. ಸದ್ಯ ಬಾಬಾ ಫೋಟೋ ಕುತೂಹಲಕ್ಕೆ ಕಾರಣವಾಗಿದೆ.

Leave a Comment

Your email address will not be published. Required fields are marked *