ಸಮಗ್ರ ನ್ಯೂಸ್: ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಾಗಲಕೋಟೆ ಮೂಲದ ವಿದ್ಯಾರ್ಥಿ ಪರಮಾನಂದ ಜೈನ್ ಎನ್ನುವ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜು.12ರ ರಾತ್ರಿ ಪರಮಾನಂದನನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯಾದ ಪರಮಾನಂದ ಐಐಎಂ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾನೆ. ಹಾಸ್ಟೆಲಿಗೆ ಯುವತಿಯನ್ನು ಕರೆಸಿಕೊಂಡು, ಮತ್ತು ಬರುವ ಪಾನಿಯ ಕೊಡಿಸಿ ಪರಮಾನಂದ ಅತ್ಯಾಚಾರ ಎಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.ಜುಲೈ 12ರಂದು ಆರೋಪಿ ಪರಮಾನಂದನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಇತ್ತ ಯುವತಿಯ ಕುಟುಂಬಸ್ಥರು ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಈ ನಡುವೆ ಮಗನ ಬಂಧನದ ಕುರಿತು ಆಘಾತ ವ್ಯಕ್ತಪಡಿಸಿರುವ ಆತನ ತಾಯಿ, ‘ಘಟನೆ ನಡೆದ ದಿನ ರಾತ್ರಿ ಸುಮಾರು 11 ಗಂಟೆಗೆ ಅವನ ಗೆಳೆಯ ಕರೆ ಮಾಡಿದ. ನನ್ನ ಮಗನನ್ನು ಪೊಲೀಸರು ಬಂಧಿಸಿರುವುದಾಗಿ ಮತ್ತು ಆ ಬಗ್ಗೆ ಆತನಿಗೆ ಏನೂ ತಿಳಿದೇ ಇಲ್ಲವೆಂದು ಹೇಳಿದ. ನಮ್ಮ ಮಗನನ್ನು ಯಾಕೆ ಬಂಧಿಸಿದ್ದಾರೆಂಬ ಸಣ್ಣ ಸುಳಿವೂ ನಮಗಿಲ್ಲ. ಅವನು ಪದವಿ ಕೊನೆಯ ವರ್ಷದಲ್ಲಿ ಓದುತ್ತಿದ್ದ. ನನ್ನ ಮಗ ಮುಗ್ಧ. ಅವನು ಓದಲು ಇಷ್ಟು ದೂರ ಬಂದಿದ್ದಾನೆ. ಅವನು ಎಂದಿಗೂ ಅಂತಹ ಕೊಳಕು ಕೆಲಸ ಮಾಡುವುದಿಲ್ಲ’ ಎಂದಿದ್ದಾರೆ.







