ಏಕಾಏಕಿ ಧುಮ್ಮಿಕ್ಕಿ ಹರಿದ ಅರೆಬೈಲ್ ಫಾಲ್ಸ್| ನಡುವೆ ಸಿಲುಕಿದ ಪ್ರವಾಸಿಗರ ರಕ್ಷಣೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟ ಭಾಗದ ಅರೆಬೈಲ್ ಜಲಪಾತದಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಜಲಪಾತ ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರು ನಡುವೆ ಸಿಲುಕಿದ ಘಟನೆ ನಡೆದಿದೆ.

Ad Widget ... ..

ಹುಬ್ಬಳ್ಳಿಯಿಂದ ಖಾಸಗಿ ಮೆಡಿಕಲ್‌ ಕಾಲೇಜಿನ ಐವರು ವಿದ್ಯಾರ್ಥಿಗಳು ಅರೆಬೈಲ್ ಘಟ್ಟದ ಕಾಡಿನ ಮಧ್ಯದಲ್ಲಿ ಇರುವ ಅರೆಬೈಲ್ ಜಲಪಾತಕ್ಕೆ ಆಗಮಿಸಿದ್ದರು. ಜಲಪಾತ ವೀಕ್ಷಣೆ ವೇಳೆ ಅವರು ಚಿಕ್ಕ ಹಳ್ಳವನ್ನು ದಾಟಲು ಮುಂದಾಗಿದ್ದರು. ಆಗ ಏಕಾಏಕಿ ನೀರಿನ ಹರಿವು ಹೆಚ್ಚಳವಾಗಿದೆ.

Ad Widget

ಜಲಪಾತದಲ್ಲಿ ನೀರು ಧುಮ್ಮಿಕ್ಕಲು ಪ್ರಾರಂಭಿಸಿದಂತೆ ವಿದ್ಯಾರ್ಥಿಗಳು ಜಲಪಾತದ ನಡುವೆಯೇ ಸಿಲುಕಿಕೊಂಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ನೀರು ಕೊಂಚ ಇಳಿಕೆಯಾಗುತ್ತಿದ್ದಂತೆ ವಿದ್ಯಾರ್ಥಿಗಳ ರಕ್ಷಣೆ ಮಾಡಿದ್ದಾರೆ.

Leave a Comment

Your email address will not be published. Required fields are marked *