ಬೆಳ್ತಂಗಡಿ: ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್| ಎರಡು ಪ್ರತ್ಯೇಕ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಸೌಜನ್ಯ ಹೋರಾಟಗಾರರು ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಶ್ಲೀಲ ಸಂದೇಶವಿರುವ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.

Ad Widget ... ..

ಮೊದಲನೇ ಪ್ರಕರಣದಲ್ಲಿ ಕಡಬ ಕೌಕ್ರಾಡಿ ಗ್ರಾಮದ ನಿವಾಸಿ ಜಯಂತ ಟಿ (46) ಎಂಬವರು ನೀಡಿದ ದೂರಿನಂತೆ ದಿನಾಂಕ:11-07-2025 ರಂದು ಪ್ರವೀಣ್‌ ಲೊಬೋ ಎಂಬ ಪೇಸ್ ಬುಕ್‌ ಖಾತೆಯಲ್ಲಿ ಸೌಜನ್ಯ ಪರ ಹೋರಾಟಕ್ಕೆ ಸಂಬಂಧಿಸಿದಂತೆ, ಅಶ್ಲೀಲ ಸಂದೇಶವಿರುವ ಪೋಸ್ಟ್‌ ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ.

Ad Widget

ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ : 58/2025 ಕಲಂ: 296 ಬಿಎನ್‌ ಎಸ್‌ 2023 ರಂತೆ‌ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇನ್ನೊಂದು ಪ್ರಕರಣದಲ್ಲಿ ಧರ್ಮಸ್ಥಳ ಗ್ರಾಮದ ನಿವಾಸಿ ಚೇತನ್‌ ಎನ್‌ (28) ಎಂಬವರ ದೂರಿನಂತೆ ದಿನಾಂಕ: 11-07-2025 ರಂದು ಮೊಬೈಲ್ ನಲ್ಲಿ ತನ್ನ ಫೇಸ್ಬುಕ್ ಖಾತೆಯನ್ನು ಪರಿಶೀಲಿಸುತ್ತಿದ್ದಾಗ, ಡಾಕ್ಟರ್ ವರ್ಮಾ ಎಂಬ ಪೇಸ್ಬುಕ್ ಖಾತೆಯಲ್ಲಿ, ಧರ್ಮಸ್ಥಳದ ಧಾರ್ಮಿಕ ಶ್ರಧ್ದಾಕೆಂದ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಅಶ್ಲೀಲ ಸಂದೇಶವಿರುವ ಹಾಗೂ ಆಶ್ಲೀಲವಾಗಿ ಚಿತ್ರಿಸಿರುವ ಭಾವಚಿತ್ರವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ : 59/2025 ಕಲಂ: 296 ಬಿಎನ್‌ ಎಸ್‌ 2023 ರಂತೆ‌ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

Leave a Comment

Your email address will not be published. Required fields are marked *