ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌/ ಐದು ಆ್ಯಪ್​ಗಳಲ್ಲಿ ಸಿಗಲಿದೆ ಟಿಕೆಟ್‌

ಸಮಗ್ರ ನ್ಯೂಸ್‌: ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ಒಎನ್​​ಡಿಸಿ (ಓಪನ್‌ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌) ಮೂಲಕ ಐದು ಆ್ಯಪ್‌ಗಳಲ್ಲಿ ನಮ್ಮ ಮೆಟ್ರೋದ ಟಿಕೆಟ್‌ ಸೌಕರ್ಯ ಕಲ್ಪಿಸಲಿದೆ.

Ad Widget ... ..

ಮೆಟ್ರೋ ಪ್ರಯಾಣಿಕರು ಸುಲಭವಾಗಿ ಟಿಕೆಟ್‌ ಖರೀದಿಸಲು ಮೆಟ್ರೋ ಟಿಕೆಟ್ ಅನ್ನು ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್ ಸೇರಿ ಒಟ್ಟು ಐದು ಆ್ಯಪ್​​ಗಳ ಮೂಲಕ ಖರೀದಿಸಬಹುದಾಗಿದೆ. ಈ ಆ್ಯಪ್​ಗಳು ಮೆಟ್ರೋ ಟಿಕೆಟ್ ಬುಕ್ ಮಾಡಿದರೆ, ಶೇ 20-30 ರಷ್ಟು ರಿಯಾಯಿತಿ ಕೂಡ ನೀಡುತ್ತಿವೆ.

Ad Widget

ಪ್ರಸ್ತುತ ನಮ್ಮ ಮೆಟ್ರೋ, ವಾಟ್ಸ್​ಆ್ಯಪ್​ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶವಿತ್ತು. ಟಿಕೆಟ್​ಗಾಗಿ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್​​ಸಿಎಲ್ ಈ ಕ್ರಮ ಕೈಗೊಂಡಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಇತ್ತೀಚೆಗೆ ನಿಗಮವು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸ್ವಯಂ ಸೇವಾ ಟಿಕೆಟ್ ನೀಡುವ ಯಂತ್ರಗಳನ್ನು ಅಳವಡಿಸಿತ್ತು. ಇವು 30 ಸೆಕೆಂಡುಗಳಲ್ಲಿ ಟಿಕೆಟ್​ಗಳನ್ನು ಒದಗಿಸುತ್ತವೆ. ಈ ಮೂಲಕ ಪ್ರಯಾಣಿಕರ ದಟ್ಟಣೆ ವೇಳೆಯಲ್ಲಿ ಟಿಕೆಟ್‌ಗೆ ಉಂಟಾಗುವ ನೂಕುನುಗ್ಗಲು ತಡೆಗೆ ಬಿಎಂಆರ್‌ಸಿಎಲ್‌ ಕ್ರಮ ವಹಿಸಿದೆ.

Leave a Comment

Your email address will not be published. Required fields are marked *