ಮಂಗಳೂರು: ವಶಪಡಿಸಿಕೊಂಡ ಮೊಬೈಲ್ ತನಿಖೆ ವೇಳೆ ಬಯಲಾಯ್ತು‌ ಹಲವು ಅಶ್ಲೀಲ ವೀಡಿಯೋ| ಹಿಂದೂ ಮುಖಂಡ ಸಮಿತ್ ರಾಜ್ ಮೊಬೈಲ್ ನಲ್ಲಿ ಪ್ರಮುಖರ ಹಸಿಬಿಸಿ ದೃಶ್ಯಾವಳಿ!!

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಅಪಘಾತವೆಸಗಿದ ಖಾಸಗಿ ಬಸ್​ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣದಲ್ಲಿ ಸಮಿತ್ ರಾಜ್ ಧರೆಗುಡ್ಡೆರನ್ನು ಮೂಡಬಿದಿರೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಪೊಲೀಸರು ದತ್ತಾಂಶಗಳನ್ನು ಎಕ್ಸ್‌ಟ್ರಾಕ್ಟ್ ಮಾಡಿಸಲು ಕೋರ್ಟ್ ಮತ್ತು ಮೇಲಾಧಿಕಾರಿಗಳ ಅನುಮತಿ ಪಡೆದಿದ್ದರು. ಅದರಂತೆ ಮೊಬೈಲ್ ಡೇಟಾ ಎಕ್ಸ್‌ಟ್ರಾಕ್ಟ್​​ ವೇಳೆ ಸ್ವತಃ ಪೊಲೀಸರೇ ಬೆಚ್ಚಿ ಬಿದಿದ್ದಾರೆ.

Ad Widget ... ..

ಆ ಹಿಂದೂ ಮುಖಂಡನ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗ ತುಣುಕುಗಳು ಪತ್ತೆ ಆಗಿವೆ. ಆ ಅಶ್ಲೀಲ ವಿಡಿಯೋಗಳು ಕರಾವಳಿ ರಾಜಕಾರಣಿಯೊಬ್ಬರ ವಿಡಿಯೋ ಕೂಡ ಇದೆ ಎನ್ನಲಾಗುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಚಾರವಾಗಿ ಮೂಡಬಿದಿರೆ ಠಾಣೆಯಲ್ಲಿ ಪ್ರತ್ಯೇಕ ಎಫ್​​ಐಆರ್​ ದಾಖಲಾಗಿದೆ.

Ad Widget

ವಿಡಿಯೋಗಳನ್ನು ಇನ್ಯಾರಿಗೋ ಕಳುಹಿಸುವ ಅಥವಾ ಬ್ಲ್ಯಾಕ್ ಮೇಲ್ ಮಾಡುವ ಸಾಧ್ಯತೆ ಇದೆ ಎಂದು ಮೂಡಬಿದಿರೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *