ಪ್ರತೀ ಭಾರತೀಯನ ಮೇಲಿದೆ 4.80 ಲಕ್ಷ ಸಾಲದ ಹೊರೆ – RBI

ಸಮಗ್ರ ನ್ಯೂಸ್: ಎರಡು ವರ್ಷಗಳ ಹಿಂದೆ ಪ್ರತಿಯೊಬ್ಬ ಭಾರತೀಯನ ಮೇಲಿದ್ದ 3.9 ಲಕ್ಷ ರೂಪಾಯಿನಷ್ಟು ಸಾಲವಿತ್ತು. ಈ ಸಾಲ ಇದೀಗ ಈ ವರ್ಷದ ಮಾರ್ಚ್ ವೇಳೆಗೆ ಶೇ. 23ರಷ್ಟು ಹೆಚ್ಚಾಗಿದ್ದು, 4.8 ಲಕ್ಷ ರೂ ತಲುಪಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಿಡುಗಡೆಗೊಳಿಸಿದ ವಿತ್ತೀಯ ಸ್ಥಿರತೆ ವರದಿ ತಿಳಿಸಿದೆ.

Ad Widget ... ..

ಇನ್ನು ಈ ವರದಿ ಪ್ರಕಾರ ಎರಡು ವರ್ಷಗಳಲ್ಲಿ ಪ್ರತಿ ಭಾರತೀಯನ ಮೇಲಿದ್ದ ಸಾಲದ ಹೊರೆ 90,000 ರೂ ಹೆಚ್ಚಾಗಿದ್ದು, ಹೋಮ್‌ ಲೋನ್‌, ಪರ್ಸನಲ್‌ ಲೋನ್‌, ಕ್ರೆಡಿಟ್‌ ಕಾರ್ಡ್‌ ವೆಚ್ಚ ಮತ್ತು ಇತರೆ ರಿಟೇಲ್‌ ಲೋನ್‌ನಿಂದಾಗಿ ಸಾಲದ ಹೊರೆ ಏರಿಕೆಯಾಗಿದೆ.

Ad Widget

ಇದು ಒಟ್ಟಾರೆ ದೇಶದ ಸಾಲದ ಶೇ. 54.9ರಷ್ಟಿದ್ದು, ಗೃಹ ಸಾಲದ ಪ್ರಮಾಣ ಶೇ. 29ರಷ್ಟಿದೆ. ಇನ್ನು ಲೋನ್‌ ಟು ವ್ಯಾಲ್ಯೂ ಪ್ರಮಾಣದಲ್ಲಿನ ಹೆಚ್ಚಳದ ಕುರಿತು ವರದಿಯು ಆತಂಕ ವ್ಯಕ್ತಪಡಿಸಿದ್ದು ಶೇ. 70ಕ್ಕಿಂತ ಹೆಚ್ಚಿದೆ ಎಂದು ಹೇಳಿದೆ.

ಈ ಹೆಚ್ಚಳಕ್ಕೆ ಕಾಂಗ್ರೆಸ್‌ ಚಾಟಿ ಬೀಸಿದ್ದು, ಇದಕ್ಕೆಲ್ಲ ಮೋದಿ ಸರ್ಕಾರವೇ ಕಾರಣ ಎಂದು ಆರೋಪಿಸಿದೆ. ತಜ್ಞರ ಸಲಹೆಯಿಂದ ಹಾಗೂ ವರದಿಗಳ ಅಂಕಿಅಂಶದಿಂದ ವಾಸ್ತವಾಂಶವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದು, ಇದು ಅಚ್ಛೇ ದಿನದ ಸಾಲ ಎಂದು ಜೈರಾಮ್‌ ರಮೇಶ್‌ ಕಿಡಿಕಾರಿದ್ದಾರೆ.

Leave a Comment

Your email address will not be published. Required fields are marked *